ಶಿವಮೊಗ್ಗ,
ಚಾಲಕನ ಅಜಾಗರೂಕತೆಯಿಂದಾಗಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ ಆಯನೂರು ಸಮೀಪ ನಡೆದಿದೆ.

ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅನೇಕರಿಗೆ ಗಾಯಗಳಾಗಿದೆ. ಚಾಮೇನಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಮಂಜುನಾಥ್ ಬಸ್ ಕದಂಬ ರೆಸ್ಟೋರೆಂಟ್ ಬಳಿ ವಾಹನವೊಂದನ್ನು ಹಿಂದಿಕ್ಕಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಚಾನೇನಹಳ್ಳಿಯ ಶಿಲ್ಪ(೩೩), ಕೀರ್ತಿ(೨೧) ಭೂಮಿಕಾ(೧೯) ಕಾವ್ಯ (೨೧) ಇವರುಗಳಿಗೆ ಗಂಭೀರ ಗಾಯಗಳಾಗಿದ್ದು ಇವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರೆಲ್ಲರೂ ಚಾಮೇನಹಳ್ಳಿ ನಿವಾಸಿಗಳಾಗಿದ್ದು ಕೀರ್ತಿ, ಭೂಮಿಕಾ ಮತ್ತು ಕಾವ್ಯ

ಎಟಿಎನ್ ಸಿ ಸಿ ಕಾಲೇಜಿನ ವಿದ್ಯಾರ್ಥಿನಿಯರು ಎನ್ನಲಾಗಿದೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.