ಶಿವಮೊಗ್ಗ, ಇಂದಿನ ಸೋಲೆ ನಾಳಿನ ಗೆಲುವಿನ ಮೆಟ್ಟಿಲು ಎಂದು ಮಹಾನಗರ ಪಾಲಿಕೆ ಸದಸ್ಯೆ ಸುರೇಖಾ ಮುರಳೀಧರ್ ಹೇಳಿದರು.

ಅವರು ಇಂದು ನಗರದ ಬಿ.ಹೆಚ್. ರಸ್ತೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳಿಗೆ ಜೀವನ ಕಲೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತಾ ಸ್ಪರ್ಧೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಸ್ಪರ್ಧಿಸುವುದು ಮುಖ್ಯ. ಬಹುಮಾನ ಬರುವುದು ಮುಖ್ಯವಲ್ಲ.

ಇಂದಿನ ಸೋಲೆ ನಾಳೆಯ ಗೆಲುವಿಗೆ ಮೆಟ್ಡಿಲು, ಸೋಲೇ ಗೆಲುವಿನ ಸೋಪಾನ ಎಂದು ತಿಳಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಟ್ಯಾನಿ ಡಿಸೋಜರವರು ವಹಿಸಿದ್ದರು. ಇಲಾಖಾ ಸಂಯೋಜಕರಾದ ಶಿವಣ್ಣ ಸಂಗಣ್ಣನವರ್, ಸಿಆರ್ಪಿ ಯತೀಶ್, ಪ್ರಾಂಶುಪಾಲರಾದ ಡಿಸೋಜಾ, ಲೂಸಿ, ಶಿಕ್ಷಕರ ಸಂಘದ ಜಂಟಿ ಕಾರ್ಯದರ್ಶಿ ಸುಮತಿ, ರವಿಕುಮಾರ್, ಹೊಸಮನಿ, ವಿವಿಧ ಶಾಲಾ ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.