ಶಿವಮೊಗ್ಗ,
ಸಮಾಜವಾದಿಯಾಗಿದ್ದ ಶಿವಮೊಗ್ಗ ಜಿಲ್ಲೆ ಈಗ ಕೋಮುವಾದಿ ಜಿಲ್ಲೆಯಾಗಿ ಮಾರ್ಪಡುತ್ತಿರುವುದು ಅತ್ಯಂತ ದುರಾದೃಷ್ಠಕರ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.


ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ದಿ.ದೇವರಾಜ ಅರಸು ಸ್ಮರಣೆ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿದ ಅವರು, ವೈವಿಧ್ಯತೆಯಲ್ಲಿ ಏಕತೆ ಇರುವ ಈ ದೇಶದಲ್ಲಿ ಬದಲಾವಣೆ ತರುವುದು ಅಷ್ಟು ಸುಲಭದ ಕೆಲಸವಲ್ಲ. ಹೋರಾಟದ ಮೂಲಕವೇ ಅದನ್ನು ಮಾಡಬೇಕಿದೆ ಎಂದು ಮಾಜಿಸಚಿವ ಕಾಹೋಡು ತಿಮ್ಮಪ್ಪ ಹೇಳಿದರು.


ಬಹು ಸಂಸ್ಕೃತಿ ಇಲ್ಲಿರುವುದರಿಂದ. ಬದಲಾವಣೆ ತಕ್ಷಣದ ಮಾತಲ್ಲ. ಭೂಮಿ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲಿಯೂ ಹೋರಾಟ ಮಾಡಬೇಕಿದೆ. ಭೂಮಿ ಹಕ್ಕಿಗಾಗಿ ೧೯೫೦ ರಿಂದಲೇ ಹೋರಾಟ ಆರಂಭವಾಗಿತ್ತು. ೧೯೬೨ ರಲ್ಲಿ ಭೂ ಸುಧಾರಣೆ ಕಾನೂನು ಬಂತು. ಆದರೆ ೧೯೭೯ ಆದರೂ ಜಾರಿಗೆ ಬರಲಿಲ್ಲ. ೧೯೭೨ ರಲ್ಲಿ ನಾನು ವಿಧಾನ ಸಭೆಗೆ ಹೋದೆ. ದೇವರಾಜ ಅರಸು ಸಿಎಂ ಆಗಿದ್ದರು. ಅದೊಂದು ಸುಸಂದರ್ಭವಾಗಿತ್ತು. ಸಿಎಂ ಅರಸು ಮತ್ತು ದೇವೇಗೌಡರ ಬಳಿ ಮಾತ ನಾಡಿದೆ. ಕಾನೂನು ಜಾರಿಗೆ ಬಂದಿಲ್ಲವೆಂ ದರೆ ಜನರಿಗೆ ಮಾಡಿದ ಅನ್ಯಾಯವೆಂದು ಹೇಳಿದೆ ಎಂದರು.


ಬಳಿಕ ೧೫ ಜನರ ಸಮಿತಿಯನ್ನು ಸಿಎಂ ದೇವರಾಜ ಅರಸು ಮಾಡಿ ಕಾನೂನು ಜಾರಿಗೆ ಕ್ರಮಕೈಗೊಂಡಿದ್ದರು.

ಬಳಿಕ ಕಾನೂನು ಜಾರಿಯಾಗಿ ಅನೇಕರಿಗೆ ಭೂ ಒಡೆತನ ಸಿಕ್ಕಿತು.೧೯೫೧ ರಲ್ಲಿ ಚಳವಳಿ ಆರಂಭವಾದರೂ ಸಂಪೂರ್ಣ ಜಾರಿಗೆ ಬರಲು ೨೨ ವರ್ಷ ಕಾಯಬೇಕಾ ಯಿತು. ನನ್ನ ಜೀವನದ ಅತ್ಯಂತ ಸೌಭಾಗ್ಯದ ಕ್ಷಣವೆ ಂದರೆ ಭೂ ರಹಿತರಿಗೆ ಭೂಮಿ ಕೊಡಿಸಿದ್ದು. ಭೂಮಿ ಕಳೆದುಕೊಂಡ ಭೂ ಮಾಲೀಕರು ಇಂದಿಗೂ ಕೂಡ ಕಾಗೋಡು ಕಾಲು ಮುರಿಬೇಕು ಎಂದು ಕಾಯುತ್ತಿದ್ದಾರೆ. ಆದರೆ ಹೋರಾಟದಿಂದ ಫಲ ಕಂಡವರು ನೆನಪಿಸಿಕೊಂಡರೆ ಸಾಕು ಎಂದರು.


ಪ್ರೆಸ್ ಟ್ರಸ್ಟ್ ಅಧ್ಯಕ್ಷ. ಎನ್.ಮಂಜುನಾಥ, ಕಾರ್ಯದರ್ಶಿ ನಾಗರಾಜ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!