ಶಿವಮೊಗ್ಗ,ಆ.09:
ದೇಶಭಕ್ತಿಯ ವಿಚಾರದಲ್ಲಿ ನಾವೆಲ್ಲ ಒಂದೇ, ನಾಡು ನುಡಿಗಾಗಿ ಸಕಲ ತ್ಯಾಗಗಳಿಗೂ ಸಿದ್ದರಾಗುವ ಭಾರತೀಯ ಮನಸುಗಳು ಹಾಗೆಯೇ ಸಂವಿಧಾನದತ್ತವಾದ ಕಾನೂನು ಕಾಯ್ದೆಗಳನ್ನು ಗೌರವಿಸುತ್ತಾ ಬಂದಿವೆ.
ಬಿಜೆಪಿ ಶಿವಮೊಗ್ಗದಲ್ಲಿ ನಡೆಸಿದ ಜನಜಾಗೃತಿ ಮೂಡಿಸುವ ದೇಶ ಪ್ರೇಮವನ್ನು ಬೆಳೆಸಲು ಭಾರೀ ಪ್ರಮಾಣದಲ್ಲಿ ಸೇರಿ ಬೈಕ್ Rally ನಡೆಸಿದ್ದು ಸ್ವಾಗತಾರ್ಹ.


ಆದರೆ, ಬೈಕ್ rally ಯಲ್ಲಿ ಮಾಜಿ ಸಚಿವರು, ಅವರ ಪುತ್ರ ಸೇರಿದಂತೆ ಶೇ. ಅರವತ್ತರಷ್ಟು ಜನ ಹೆಲ್ಮೆಟ್ ಹಾಕದೇ ಈ rally ನಡೆಸಿದ್ದು ಸದ್ದಿಲ್ಲದೇ ಕಾನೂನನ್ನು ಉಲ್ಲಂಘಿಸಿದಂತಲ್ಲವೇ?
ಸಂದಿಗೊಂದಿಯಲ್ಲಿ ಹೆಲ್ಮೆಟ್ ರಹಿತ ಸವಾರರನ್ನು ಹಿಡಿಯಲು ನಿತ್ಯ ಸರ್ಕಸ್ ಮಾಡುವ ಶಿವಮೊಗ್ಗದ ಪೊಲೀಸ್ ಮಹಾಶಯರಿಗೆ ಅಲ್ಲಿ ಹೆಲ್ಮೆಟ್ ಇಲ್ಲದಿರುವುದು ಕಾಣಲಿಲ್ಲವೇ?
ಕಾನೂನು ಜನರಿಂದ ಜನರಿಗೆ ಬೇರೆ ಬೇರೆ ಇರುತ್ತಾ ಎಂದು ಹಲವರು ಅದರಲ್ಲೂ ವಿಶೇಷವಾಗಿ ನಿವೃತ್ತ ಪೊಲೀಸ್ ಅಧಿಕಾರಿಗಳು, ವಕೀಲರು, ಪ್ರಗತಿಪರರು ಪ್ರಶ್ನಿಸಿದ್ದಾರೆ. ಮಿಕ್ಕ ಚರ್ಚೆ ಓದುಗರ ಮೇಲೆ ಬಿಟ್ಟಿದ್ದೇವೆ.

ಕಾರ್ಯಕ್ರಮ ವಿವರ


75 ನೇ ಭಾರತ ಸ್ವಾತಂತ್ರ್ಯ ಅಮೃತೋತ್ಸವದ ಸಂದರ್ಭದಲ್ಲಿ ರಾಷ್ಟ್ರಪ್ರೇಮ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಬಿಜೆಪಿ ಆಯೋಜನೆ ಮಾಡಿದ್ದು, ಹರ್ ಘರ್ ಮೆ ತಿರಂಗಾ ಅಭಿಯಾನ ಅಭೂತಪೂರ್ವ ಯಶಸ್ಸು ಕಾಣುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ನಗರದ ಎಂ.ಆರ್.ಎಸ್. ವೃತ್ತದಲ್ಲಿ ನಗರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪೂರ್ವಭಾವಿಯಾಗಿ ನಡೆದ ಬೈಕ್ rallyಗೆ ಚಾಲನೆ ನೀಡಿ ಮಾತನಾಡಿದರು.
ಸಾವಿರಾರು ಕಾರ್ಯಕರ್ತರು ಬೈಕ್ rallyಯಲ್ಲಿ ಭಾಗವಹಿಸಿದ್ದನ್ನು ನೋಡಿದಾಗ ಸ್ವಾತಂತ್ರ್ಯ ಪೂರ್ವದ ಹೋರಾಟ ನೆನಪಿಸುತ್ತದೆ. ಪ್ರಪಂಚದಲ್ಲೇ ತ್ರಿವರ್ಣ ಧ್ವಜ ಹಾರಬೇಕಿತ್ತು ಎಂಬ ನಮ್ಮ ಕನಸು ನನಸಾದಂತೆ ಭಾಸವಾಗುತ್ತಿದೆ. ನಮ್ಮ ದೇಶದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದವರಿಗೆ ದೇಶ ಭಕ್ತಿ ಎಂದರೆ ಏನು ಎಂದು ತೋರಿಸಿದ ಹಾಗೆ ಆಗಿದೆ ಎಂದರು.


ಎಂ.ಆರ್.ಎಸ್. ವೃತ್ತದಿಂದ ಶಿವಮೂರ್ತಿ ಸರ್ಕಲ್ ವರೆಗೆ ಮಹಿಳಾ ಕಾರ್ಯಕರ್ತೆಯರು ಮತ್ತು ಬಿಜೆಪಿ ನಾಯಕರು ಸೇರಿದಂತೆ ಸಾವಿರಾರು ಬೈಕ್ ಗಳ rally ನಡೆದಿರುವುದು ರಾಷ್ಟ್ರಭಕ್ತರಿಗೆ ಸಂತಸ ತಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಆರ್.ಎಸ್.ಎಸ್. ಎಲ್ಲಿತ್ತು ಎಂದು ಟೀಕೆ ಮಾಡುವ ಸಿದ್ಧರಾಮಯ್ಯನವರಿಗೆ ಸರ್ಧಾರ್ ಪಟೇಲ್ ಜೊತೆಗೆ ಆರ್.ಎಸ್.ಎಸ್. ಸ್ಥಾಪಕ ಹೆಡಗೆವಾರ್ ಕಾಂಗ್ರೆಸ್ ನಲ್ಲಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಅಪಾರ ಕೊಡುಗೆ ನೀಡಿದ್ದರು ಎಂದರು.
ಮೊನ್ನೆ ಕುವೆಂಪು ರಂಗಮಂದಿರದಲ್ಲಿ ನಡೆದ ಗೀತಭಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಬೇದಾರ್ ಲೂಯಿಸ್ಅವರು ಜಮ್ಮು ಕಾಶ್ಮೀರದಲ್ಲಿ ಸೈನಿಕರಿಗೆ ಕಲ್ಲು ಹೊಡೆಯುತ್ತಿದ್ದರು. ಮೋದಿ ಬಂದ ನಂತರ ಸೈನಿಕರಿಗೆ ಸಲಾಂ ಹೇಳಿ ಗೌರವಿಸುತ್ತಿದ್ದಾರೆ. ಇದು ಮೋದಿ ಸರ್ಕಾರದ ತಾಕತ್ತು. ಅಮೃತ ಮಹೋತ್ಸವ ಸಮಾರಂಭವನ್ನು ಯಶಸ್ವಿಯಾಗಿಸೋಣ. ಆ. 13, 14 ಮತ್ತು 15 ರಂದು ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಭಕ್ತಿ ಮೆರೆಯಬೇಕು ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಪ್ರಮುಖರಾದ ಎಂ.ಬಿ. ಭಾನುಪ್ರಕಾಶ್, ಶಾಸಕರಾದ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಆರ್.ಕೆ. ಸಿದ್ಧರಾಮಣ್ಣ, ಟಿ.ಡಿ. ಮೇಘರಾಜ್, ಜ್ಯೋತಿ ಪ್ರಕಾಶ್, ಮೇಯರ್ ಸುನಿತಾ ಅಣ್ಣಪ್ಪ, ಜಗದೀಶ್, ಬಳ್ಳೆಕೆರೆ ಸಂತೋಷ್, ವಿಶ್ವಾಸ್, ಸುರೇಖಾ ಮುರಳೀಧರ್ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!