ಶಿವಮೊಗ್ಗ, ಆ.09:
ಭದ್ರಾವತಿ ತಹಶೀಲ್ದಾರ್ ಅವರ ದೂರಿನ ಆಧಾರದ‌ಮೇರೆಗೆ ದಾನವಾಡಿ ಶ್ರೀಗಿರಿ ರಂಗನಾಥ ಸ್ವಾಮಿ ದೇವಸ್ಥಾನದ 6 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು ಇದರಲ್ಲಿ ಪ್ರಮುಖ ಇಬ್ಬರು ಆರೋಪಿಗಳಿಗೆ ಜೈಲಿಗೆ ಕಳುಹಿಸಲಾಗಿದೆ.
ದಾನವಾಡಿ ಗ್ರಾಮದ ಶ್ರೀ ಗಿರಿ ರಂಗನಾಥ ದೇವಸ್ಥಾನ ಮುಜುರಾಯಿ ಇಲಾಖೆಗೆ ಸೇರಿದ್ದಾಗಿದ್ದು, ಶ್ರೀಗಿರಿ ರಂಗನಾಥ ದೇವಸ್ಥಾನವನ್ನ ರಾಮಯ್ಯ, ಬಸವರಾಜಪ್ಪ, ಮಂಜುನಾಥ, ಪೆರಿಯಾ ಸ್ವಾಮಿ, ನಾಗರಾಜಪ್ಪ ತಿಪ್ಪೇಶಪ್ಪ ಎಂಬುವರು ಸೇರಿ 2019 ರಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಎಂದು ಅನಧಿಕೃತ ಟ್ರಸ್ಟ್ ನ್ನ ಆರಂಭಿಸಿ ಸಾರ್ವಜನಿಕರಿಂದ ಚಂದಾ ಎತ್ತಿದ್ದರು.


ಪ್ರತಿ ವರ್ಷ ತಿರುಪತಿಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ದೇಣಿಗೆ ಸಂಗ್ರಹಿಸಿದ್ದರು. ಕರಪತ್ರ ಸಿದ್ದಪಡಿಸಿ ಸುತ್ತಮುತ್ತಲಿನ ಹಾಗೂ ಭಕ್ತರಿಂದ ಹಣ ವಸೂಲಿ ಮಾಡಿ ದೇಣಿಗೆ ಸಂಗ್ರಹಿಸಿ ಸ್ವಂತಕ್ಕೆ ಹಣ ಬಳಿಸಿಕೊಂಡಿರುವುದಾಗಿ ಆರೋಪ ಕೇಳಿ ಬಂದಿತ್ತು. ಅಲ್ಲದೆ ಪ್ರತಿ ಅಮಾವಾಸೆಯಲ್ಲಿ ಮಾಟಮಂತ್ರವನ್ನ ನಡೆಸುತ್ತಿದ್ದರು ಎಂಬ ದೂರುಗಳು ಕೇಳಿ ಬಂದಿದ್ದವು.
ಈ ಎಲ್ಲಾ ದೂರನ್ನ ಗ್ರಾಮಸ್ಥರು ಭದ್ರಾವತಿ ಶಾಸಕ‌ ಬಿ.ಕೆ. ಸಂಗಮೇಶ್ವರ್ ಗೆ ನೀಡಿದ್ದು ಈ ದೂರಿನ ಆಧಾರದ ಮೇರೆಗೆ ಶಾಂತಿ ಸಭೆ ನಡೆಸಲಾಗಿತ್ತು. ಶಾಂತಿ ಸಭೆಯಲ್ಲಿ ಟ್ರಸ್ಟಿಗಳ ವಿರುದ್ಧ ಆರೋಪಗಳ ಕೇಳಿಬಂದಿದ್ದು ಇವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿತ್ತು. ಇದರ ಆಧಾರದ ಮೇರೆಗೆ ತಹಶೀಲ್ದಾರ್ ಈ ಪ್ರಕರಣದ ಬಗ್ಗೆ ಭದ್ರಾವತಿ ಗ್ರಾಮಾಂತರ‌ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!