ಶ್ರಾವಣ ಮಾಸದ ಪ್ರಮುಖ ಹಬ್ಬಗಳೊಲ್ಲೊಂದಾದ ವರಮಾಹಾ ಲಕ್ಷ್ಮಿ ವ್ರತ ಶುಕ್ರವಾರದಂದೂ ನಡೆಯಲಿದೆ. ಈ ಶುಕ್ರವಾರಕ್ಕೆ ಸಂಪತ್ ಶುಕ್ರವಾರ ಎಂಬ ಹೆಸರೂ ಇದೆ.

ಸಂಪತ್ತಿದ್ದಾಗ ಜೀವನಕ್ಕೆ ಒಂದು ವಿಶಿಷ್ಠ ಕಳೆ ಬರುತ್ತದೆ. ಲಕ್ಷ್ಮಿ ಸಂಪತ್ತಿನ ಅಧಿ ದೇವತೆ, ಅವಳ ಅನುಗ್ರಹವಾದರೆ ಮನೆಯಲ್ಲಿ ಧನ ಲಕ್ಷ್ಮಿ, ಧಾನ್ಯಲಕ್ಷ್ಮಿ, ಸೌಭಾಗ್ಯಲಕ್ಷ್ಮಿ, ಸಂತಾನಲಕ್ಷ್ಮಿ, ವಿದ್ಯಾಲಕ್ಷ್ಮಿ, ವಿಜಯಲಕ್ಷ್ಮಿ, ಕೀರ್ತಿಲಕ್ಷ್ಮಿ, ಮೋಕ್ಷಲಕ್ಷ್ಮಿ ಎಲ್ಲವೂ ನೆಲಸುತ್ತವೆ

. ಆದ್ದರಿಂದ ಸಿರಿ-ಸೌಭಾಗ್ಯ ಸಂಬೃಧ್ದಿಗಾಗಿ ಸುಮಗಂಲಿಯರಯ, ಪುರುಷರು, ಈ ವೃತ ಆಚರಿಸುತ್ತಾರೆ.
ಪ್ರತಿವರ್ಷ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ದಂದೂಈ ಹಬ್ಬವನ್ನು ಆಚರಿಸುತ್ತಾರೆ. ಜಗದೋ ದ್ಧಾರಕ್ಕಾಗಿ ಶಿವನು ತನ್ನ ಪತ್ನಿ ಪಾರ್ವತಿಗೆ ಸೂಚಿಸಿದ ವೃತ ವರಮಹಾಲಕ್ಷ್ಮಿ ವ್ರತ ಎಂಬ ಕಾರಣಕ್ಕೆ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ.

ಪೌರಾಣಿಕ ಹಿನೆಲೆ :- ವರಮ ಹಾಲಕ್ಷ್ಮೀ ಹಬ್ಬದ ಹಿನೆ ಲೆಯ ಬಗ್ಗೆ ಯೋಚಿಸುವುದಾದರೆ ಪುರಾಣಗಳಲ್ಲಿ ಹಿಂದೆ ವಿದರ್ಭ ದೇಶದಲ್ಲಿ ಕಾಂಡಿನೀ ಎಂಬ ಪಣ್ಣಣವಿತ್ತು. ಅಲ್ಲಿ ಚಾರುಮತಿಯೆಂಬ ಸತಿ ಶಿರೋ ಮಣಿ ಇದ್ದಳು, ಅವಳು ಸದಾ ಪತಿ ಸೇವಾನಿರತೆ, ಮನೆಯಲ್ಲಿ ಕಡು-ಬಡತನ ನಿತ್ಯ ಏಕಾದಶಿ, ಆ ಸಾದ್ವೀ ಮಣಿಗೆ ಒಂದು ರಾತ್ರಿ ಸ್ವಪ್ನದಲ್ಲಿ ತಾಯಿ ಮಹಾಲಕ್ಷ್ಮಿಯ ದರ್ಶನ, ಶ್ರಾವಣ ಎರಡನೇ ಶುಕ್ರವಾರ ಭಯ-ಭಕ್ತಿಗಳಿಂದ ಲಕ್ಷ್ಮಿ ಪೂಜೆ ಮಾಡಿ ಇಷ್ಟಾರ್ಥಸಿದ್ಧಿಯನ್ನು ಪಡೆಯು ವುದಲ್ಲದೇ, ಇಹದಲ್ಲಿ ಸುಖವನ್ನು ಪಡೆದು,

ಪರದಲ್ಲಿ ಮುಕ್ತಿ ಯನ್ನು ಹೊಂದುವಂತೆ ಸಂದೇಶ. ಅದೇ ಗುಂಗಿ ನಲ್ಲಿ ಎಚ್ಚತ್ತ ಚಾರುಮತಿ, ಮುಂದೆ ಶ್ರಾವಣ ಮಾಸದ ಎರಡನೇ ಶುಕ್ರವಾರ, ಬಂದು-ಭಾಂದವರೊಂದಿಗೆ ಕೂಡಿ ಆರಾಧನೆಯಿಂದ ವ್ರತವನ್ನು ಆಚರಿಸುತ್ತಾಳೆ. ಕೆಲವೇ ದಿನಗಳಲ್ಲಿ ಕಂಡು ಕೇಳಿದವರೆಲ್ಲ ಆಶ್ಚರ್ಯ ಪಡುವ ರೀತಿಯಲ್ಲಿ ಪವಾಡ ಸದೃಶವಾಗಿ ಚಾರುಮತಿಯ ಮನೆಯಲ್ಲಿ ಲಕ್ಷ್ಮಿಯ ಅನುಗ್ರವಾಗುತ್ತದೆ. ಆಪುಣ್ಯ ಗೃಹದಲ್ಲಿ

ಧನ-ಕನಕ ಇಷ್ಟಾರ್ಥಗಳು ತುಂಬಿ ತುಳುಕತ್ತದೆ. ಆ ದಂಪತಿಗಳು ಅಂದಿನಿಂದ ಸದಾ ತಾಯಿಯನ್ನು ಧ್ಯಾನಿಸುತ್ತ, ಶ್ರದ್ಧಾ ಭಕಿಯಿಂದ ಈ ವ್ರತವನ್ನು ಆಚರಿಸಿ, ಇಂದಿಗೂ ಸಹಸ್ರ-ಸಹಸ್ರ ಭಕ್ತರು ತಾಯಿಯ ಅನುಗ್ರಹಕ್ಕೆ ಪಾತ್ರರಾಗಿ, ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ವ್ರತ ಆಚರಿಸುವ ವಿಧಾನ:- ವರಮಹಾಲಕ್ಷ್ಮಿಯ ಹಬ್ಬದ ದಿನ ಬೆಳೆಗ್ಗೆ ಬೇಗ ಎದ್ದು ಮಂಗಳ ಸ್ನಾನ ಮಾಡಬೇಕು ಶುಕ್ರವಾರ ಸಾಯಂಕಾಲದವರಗೂ ಉಪವಾಸ ಇರಬೇಕು. ವ್ರತ ಮಾಡುವವರು ಸಂಕಲ್ಪ ಮಾಡಿ, ದೇವರ ಕೋಣೆಯನ್ನು ಶುಧ್ದೀಕರಿಸಬೇಕು. ರಂಗೋಲಿ ಬಿಡಿಸಿ ನಂತರ ಬಾಳೆಕಂದು, ಮಾವಿನಎಲೆಗಳಿಂದ ಶೃಂಗರಿಸಬೇಕು. ಅಕ್ಕಿ ಹಾಕಿ ಅದರ ಮೇಲೆ ಬೆಳ್ಳಿ, ತಾಮ್ರ ಅಥವಾ ಪಂಚ ಲೋಹದ ಕಳಸ ಇಡಬೇಕು.

ಕಳಸದಲ್ಲಿ ನೀರನ್ನು ತುಂಬಿ ಅದಕ್ಕೆ ಸ್ವಲ್ಪ ಒಣದ್ರಾಕ್ಷಿ, ಖರ್ಜೂರ, ಗೋಡಂಭಿ, ಭಾದಾಮಿ, ಕಲ್ಲು ಸಕ್ಕರೆ ಮತ್ತು ಕೆಲವು ಹಣ್ಣುಗಳನ್ನು ಇರುಸುವರು. ಈ ಕಳಸಕ್ಕೆ ಲಕ್ಷ್ಮಿ ಕಳಸ ಎನ್ನುತ್ತಾರೆ. ಕಳಸದಲ್ಲಿ ಮಾವಿನ ಎಲೆ ಮತ್ತು ವಿಳೆದೆಲೆಗಳನ್ನು ಜೊಡಿದಿ ಅದರ ಮೇಲೆ ಅರಿಶಿನ ಹಚ್ಚಿದ ತೆಂಗಿನ ಕಾಯಿಯನ್ನು ಇಡಬೇಕು. ಅದರ ಮೇಲೆ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಮುಖವಾಡವನ್ನಿಟ್ಟು ಅಥವಾ ತೆಂಗಿನ ಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು, ಕಣ್ಣು, ಕಿವಿ ಮಾಡಿ, ಒಡವೆಗಳನ್ನು ಏರಿಸಿ, ಸೀರೆಉಡಿಸಿ ಅಲಂಕಾರ ಮಾಡಲಾಗುತ್ತದೆ.

ಈ ಪೂಜೆಯಲ್ಲಿ ವಿಶೇಷವಾದ ದಾರಗಳಿಂದ ಪೂಜೆಯನ್ನು ಸಲ್ಲಿಸುವರು. ಈ ದಾರವನ್ನು ದೋರವೆಂದು ಕರೆಯುವರು. ಹೊಸದಾದ ಹನ್ನೆರಡು ದಾರಗಳಿಗೆ ಹನ್ನೆರಡು ಗಂಟುಗಳನ್ನು ಹಾಕಿ, ಅದನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿಣ ಹಚ್ಚಿ ದೇವಿಯ ಪಕ್ಕದಲ್ಲಿರಿಸಿ ಆರಾಧಿಸಿ ಪೂಜಿಸುವರು.

ಈ ದಾರಗಳಿಗೆ ಅರಿಶಿಣ ಕುಂಕುಮ, ಹೂವು, ಪತ್ರೆಗಳಿಂದ ಪೂಜಿಸಿ ನೈವೇದ್ಯ ಮಾಡುವವರು. ಹನ್ನೆರಡು ಹೆಸರುಗಳನ್ನ ಉಚ್ಚರಿಸಿ ದ್ವಾದಶ ನಾಮಾವಳಿಯೆಂದು ಪೂಜಿಸುವರು. ಆ ನಾಮಾವಳಿಗಳೂ ಹೀಗವೆ : ರಮೆ, ಸುಮಂಗಳೆ, ಕಮಲವಾಸಿನೆ, ಮನ್ಮಥ ಜನನಿ, ವಿಷ್ಣುವಲ್ಲಬೆ, ಕ್ಷೀರಾಭಿಕನ್ಯಕೆ, ಲೋಕಮಾತೆ, ಭಾರ್ಗವಿ, ಪಧಹಸ್ತೆ, ಪುಷ್ಠೆ, ತುಷ್ಠೆ ಮತ್ತು ವರಲಕ್ಷ್ಮಿ ಈ ದಾರಕ್ಕಾಗಿ ವಿಶೇಷವಾದ ನೈವೇಧ್ಯವಾದ ಸಜ್ಜಪ್ಪವನ್ನು ಅರ್ಪಿಸುವರು. ಅಂದು ಶ್ರೀ ಸೂಕ್ತವನ್ನು ಪಠಿಸುವುದು ಒಳ್ಳೆಯದು.

ಲಕ್ಷ್ಮಿಪೂಜೆಯ ಅಂತರಂಗ ಸಂದೇಶ :- ಮಾತೃ ದೇವತಾ ಪೂಜೆ ಅತ್ಯಂತ ಪ್ರಾಚೀನವಾದುದು. ಮಾನವ ಜನಾಂಗವೆಲ್ಲವೂ ಮೊಟ್ಟಮೊದಲು ಮಾತೃದೇವತಾ ಪೂಜೆಯನ್ನೆ ಮಾಡುತ್ತಿದ್ದಿತೆಂದು ಭಾವಿಸಲು ಆಧಾರಗಳಿವೆ. ಶ್ರೀ ಸೂಕ್ತದಲ್ಲಿ ಶ್ರೀ ಲಕ್ಷ್ಮಿಯ ಪರಿಪೂರ್ಣ ಚಿತ್ರಣವಿದೆ. ಹಿರಣ್ಯವರ್ಣಳೂ,

ಸುವರ್ಣರಜತಾಭರಣಗಳಿಂದ ಅಲಂಕೃತಳೂ, ಚಂದ್ರನಂತೆ ಪ್ರಕಾಶಿಸುವವಳೂ, ಹಿರಣ್ಮಯಿಯೂ ಆದ ಲಕ್ಷ್ಮಿಯ ಕೃಪೆಗಾಗಿ ಅಲ್ಲಿ ಅಗ್ನಿಯನ್ನು ಪಾರ್ಥಿಸಲಾಗಿದೆ. ಅತ್ಯಂತ ಸುಂದರವೂ, ಕಾವ್ಯ ಮಯವೂ ಆದ ಶ್ರೀ ಸೂಕ್ತವನ್ನು ಶ್ರೀ ಕಾಮನು ಅಂದರೆ ಸಂಪತ್ತನ್ನು ಬಯಸುವವನು ಸದಾ ಜಪಿಸಬೇಕೆಂದು ಹೇಳಲಾಗಿದೆ.
ಸುಮಂಗಲಿಯರ ಕೈಗೆ ದಾರ :-ಕುಂಕಮಾರ್ಚನೆಯೊಂದಿಗೆ ಲಕ್ಷ್ಮಿ ದೇವಿಯ ಆವಾಹ ಮಾಡಲಾಗುತ್ತದೆ. ನಂತರ ಹನ್ನೆರಡು ಗಂಟಿನ ದಾರವನ್ನು ದೇವರ ಮುಂದಿಟ್ಟು ಪೂಜಿಸಿ ಆ ನಂತರ ಆ ದಾರವನ್ನು ಸುಮಂಗಲಿಯರು ಕೈಗೆ ಕಂಕಣದಂತೆ ಕಟ್ಟಿಕೊಳ್ಳುವ ರೂಡಿ ಇದೆ. ಈ ವ್ರತವನ್ನು ವಿವಾಹಿತ ಮಹಿಳೆಯರು ಒಂಬತ್ತು ವರ್ಷಗಳ ಕಾಲ ಸತತವಾಗಿ ಪೂಜೆ ಮಾಡುವುದರಿಂದ ಫಲ ಲಭಿಸುತ್ತದೆ ಎಂಬ ನಂಬಿಕೆ ಇದೆ.