
ಶಿವಮೊಗ್ಗ, ಜೂ.5:
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದ ದೇವಂಗಿ
ರತ್ನಾಕರ್ ಪಾಕ್೯ ನಲ್ಲಿ
ವಿಶ್ವಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಮ್ಮ ಸುತ್ತ ಮುತ್ತಲಿನ


ಪರಿಸರ ವನ್ನು ಹಸಿರಾಗಿಸುವ ಉದ್ದೇಶ ನಮ್ಮದಾಗಬೇಕಿದೆ. ಸ್ವಚ್ಚತೆ ಜೊತೆ ಗಿಎ ಮರ ಬೆಳೆಸುವ ಹೊಣೆಗಾರಿಕೆ ನಮ್ಮದಾಗಬೇಕಿದೆ ಎಂಬುದನ್ನ ಹೇಳುವ ಉದ್ದೇಶದ ಆಚರಣೆಯಾಯಿತು.

ಕೇವಲ ಒಂದು ಈ ದಿನಚರಣೆ ಅಗಬಾರದು ಅದು ನಮ್ಮ ಜೀವನದ ಒಂದು ಭಾಗವಾಗಬೇಕು. ಪಾಲಿಕೆಯ ಸ್ವಚ್ಚತೆ, ಪ್ಲಾಸ್ಟಿಕ್ ಮುಕ್ತ ನಗರದ ವಿಷಯಕ್ಕೆ ಸರ್ವರೂ ಜೊತೆಯಾಗಿರಬೇಕೆಂಬುದು ಮುಖ್ಯ ಉದ್ದೇಶವಾಗಿತ್ತು.
ಇಲ್ಲಿ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ವಿಶೇಷ
ಶಪಥ ನೀಡುವ ಜೊತೆ ಪರಿಸರ ದಿನಾಚರಣೆ ಆಚರಿಸಲಾಯಿತು.

ಬರೀ ಗಿಡ ನೆಟ್ಟರೇ ಸಾಲದು, ಅದನ್ನ ಬೆಳೆಸುವ ಹೊಣೆಗಾರಿಕೆ ನಮ್ಮದಾಗಬೇಕು.
ಪ್ಲಾಸ್ಟಿಕ್ ನಿಷೇದ ಹಾಗೂ ಅದರ ಮರುಬಳಕೆಯ ತಿಳಿಹೇಳುವ ಜೊತೆಗೆ
ತ್ಯಾಜ್ಯ ವಸ್ತುಗಳು ನಮ್ಮ ಭೂಮಿಯ ಅರೋಗ್ಯಕ್ಕೆ ಎಷ್ಟು ಅನಾನುಕೂಲ ಎಂಬ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಇದಾಗಿತ್ತು.
ಹಸಿಕಸ, ಒಣಕಸ ಸರಿಯಾದ ವಿಲೇವಾರಿ ಎಷ್ಟು ಮುಖ್ಯ ಎಂದು ಎಲ್ಲರಿಗೂ ಮನವರಿಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನೂರಾರು ಮರಗಳ ಸಸಿಗಳನ್ನು ನೆಡಲಾಯಿತು.

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ ಯನ್ನು ಶಿವಮೊಗ್ಗ ನಗರದ ದೇವಂಗಿ ರತ್ನಾಕರ ಬಡಾವಣೆ ಯ ಪಾರ್ಕ್ ನಲ್ಲಿ ಬೃಹತ್ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು.

ಸದರಿ ಕಾರ್ಯಕ್ರಮದಲ್ಲಿ ಸೆಲ್ವಕುಮಾರ್, ನಿವೃತ್ತ ನ್ಯಾಯಾಧೀಶರು, ಟಿ.ಎಸ್ ಮಹದೇವಸ್ವಾಮಿ ಪರಿಸರ ಕಾರ್ಯಕರ್ತರು, ನಿರ್ಮಲ ತುಂಗಾ ಅಭಿಯಾನ ಪ್ರಮುಖರಾದ ತ್ಯಾಗರಾಜ್ ಮಿತ್ಯಂಥ, ಪರ್ಯಾವರಣ ಟ್ರಸ್ಟ್ ನ ಪ್ರಮುಖ ಗಿರೀಶ್ ಪಟೇಲ್, ಸಹೋದರಿ ನಿವೇದಿತ ಟ್ರಸ್ಟ್ ನ ಪ್ರಮುಖರಾದ ಭಾಗಿರತಿ, ತುಷಾರ್ ಬಿ ಹೊಸೂರು, ಉಪ ಆಯುಕ್ತರು (ಆಡಳಿತ) ಶಿವಮೊಗ್ಗ ಮಹಾನಗರ ಪಾಲಿಕೆ, ಗೋವಿಂದಣ್ಣ, ಅಧ್ಯಕ್ಷರು ಮಹಾನಗರ ಪಾಲಿಕೆ ಪೌರಕಾರ್ಮಿಕರ ಸಂಘ, ಎಚ್ ಪ್ರಭಾಕರ್ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ), ತ್ರಿವೇಣಿ ಸಹಾಯಕ ಅಭಿಯಂತರರು (ಪರಿಸರ), ಅನುಪಮಾ ಸಮುದಾಯ ಸಂಘಟಕರು
ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಎಲ್ಲಾ ಆರೋಗ್ಯ ನಿರೀಕ್ಷಕರು ಮತ್ತು ಸಮುದಾಯ ಸಂಚಾಲಕರು ಹಾಗೂ ಪೌರಕಾರ್ಮಿಕರು ಹಾಗೂ ದೇವಾಂಗಿ ರತ್ನಾಕರ ಬಡಾವಣೆ ನಿವಾಸಿಗಳ ಸಂಘದ ಸರ್ವ ಸದಸ್ಯರು, ದುರ್ಗಿ ಗುಡಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.