ಶಿವಮೊಗ್ಗ : ಕಾಂಗ್ರೆಸ್ನಲ್ಲಿ ಅತೃಪ್ತ ಆತ್ಮಗಳೇ ತುಂಬಿದ್ದು ಅವರನ್ನು ತೃಪ್ತಿಪಡಿಸಲು ಆಗುವುದಿಲ್ಲವೆಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಪುಟ ಘೋಷಣೆಯಾದ ಬಳಿಕ ಈಗಾಗಲೇ ಅಸಮಾಧಾನ ಭುಗಿಲೆದ್ದಿದೆ. ಮೊದಲ ವಿಕೆಟ್ ಪಥನವಾಗಿದೆ ನಾನು ಹೇಳುವುದಿಲ್ಲ. ರಾಮಲಿಂಗಾರೆಡ್ಡಿ ರಾಜೀನಾಮೆ ಅವರ ವೈಯಕ್ತಿಕ ನಿರ್ಧಾರ ಇರಬಹುದು.

ಆದರೆ ಈ ಸರ್ಕಾರ 2ವರ್ಷ ಅಧಿಕಾರದಲ್ಲಿರುತ್ತೆ ಎಂಬ ವಿಶ್ವಾಸ ನನಗಿಲ್ಲ. ಎಲ್ಲರೂ ಮಂತ್ರಿ ಪದವಿಯ ಆಕಾಂಕ್ಷಿಗಳೇ ಇದ್ದಾರೆ. ಅಭಿವೃದ್ಧಿ ಮರೀಚಿಕೆ ಆಗಿದೆ. ರಾಜ್ಯದಲ್ಲಿ ಹಲವಾರು ಗಂಭೀರ ಸಮಸ್ಯೆಗಳಿವೆ. ಈ ಸಂದರ್ಭದಲ್ಲಿ ಮಂತ್ರಿ ಪದವಿಯ ಕಿತ್ತಾಟ ಈ ಸರ್ಕಾರವನ್ನು ಉಳಿಸುವುದಿಲ್ಲ ಎಂದರು.
ನೀವು ಯಾವಾಗ ಬಿಜೆಪಿ ಸೇರುತ್ತೀರಿ ಎಂಬ ಪ್ರಶ್ನೆಗೆ ಕಾಲ ಬರಲಿ ನೋಡೋಣ. ನಾನು ಕಾಯುತ್ತಾ ಇದ್ದೇನೆ ಎಂದರು.