ಶಿವಮೊಗ್ಗ,
ಹಿಂದೂ ಸಮಾಜ ಬಿಜೆಪಿಯನ್ನು ಗೆಲ್ಲಿಸಿರುವುದು ಪಕ್ಷದ ನಾಯಕರನ್ನು ಕಾರ್ ನಲ್ಲಿ ಓಡಾಡಿಸಲು ಅಲ್ಲ, ಅವರಿಗೆ ಹಿಂದೂ ಸಮಾಜ ರಕ್ಷಣೆ ಮಾಡಲು ಆಗದಿದ್ದರೆ ಎಚ್ಚರಿಕೆ ಕೊಡಲಾಗುತ್ತದೆ ಎಂದು ಬಿಜೆಪಿ ನಾಯಕರ ಎದುರಿನ ಲ್ಲಿಯೇ ಹಿಂದೂ ಸಮಾಜದ ಮುಖಂಡ ಯಾದವಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.


ಪ್ರವೀಣ್ ನೆಟ್ಟಾರು ಹತ್ಯೆ ವಿರೋಧಿಸಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ನಗರದ ಗೋಪಿವೃತ್ತದಲ್ಲಿ ಇಂದು ಹಿಂದೂಪರ ಸಂಘಟನೆಗಳಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.


ಹಿಂದೂ ಯುವಕರ ಹತ್ಯೆಯಾಗುತ್ತಿ ದ್ದರೂ ಮೂಕ ಪ್ರೇಕ್ಷಕರಾಗುತ್ತಿದ್ದೇವೆ. ಕರಾವಳಿ ಭಾಗದಲ್ಲಿ ಬಿಜೆಪಿಯೇ ಗೆದ್ದಿದೆ. ಆರು ಸಲ ಗೆದ್ದು ಶಾಸಕರಾದವರು ಅಲ್ಲಿದ್ದಾರೆ. ಹಿಂದೂ ಸಮಾಜ ಬಿಜೆಪಿ ನಾಯಕರನ್ನು ಗೆಲ್ಲಿಸಿರುವುದು ಇವರನ್ನು ಕಾರ್ ನಲ್ಲಿ ಓಡಾಡಿಸಲು ಅಲ್ಲ. ಹಿಂದೂ ಸಮಾಜವನ್ನು ರಕ್ಷಣೆ ಮಾಡಬೇಕಾದ ಅವರು ಅದನ್ನು ಮರೆಯುತ್ತಿದ್ದಾರೆ. ಇದು ಹೀಗೆ ಮುಂದುವರೆಯಬಾರದು. ಇದು ನಮ್ಮ ಕೊನೆಯ ಎಚ್ಚರಿಕೆ. ಇನ್ನು ನಾವು ಬಿಜೆಪಿ ನಾಯಕರ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇವೆ. ಅದನ್ನು ಅವರು ಉಳಿಸಿಕೊಳ್ಳಬೇಕು ಎಂದರು.


ಭಾರತದ ಮುಸ್ಲಿಮರು ಒಂದು ಕ್ಷಣ ಯೋಚಿಸಬೇಕಾದ ಅಗತ್ಯ ಮತ್ತು ಅನಿವಾ ರ್ಯತೆ ಇದೆ. ಅದು ಎಚ್ಚೆತ್ತುಕೊಳ್ಳಬೇಕು. ಮುಸ್ಲಿಂ ಮುಖಂಡರು ತಮ್ಮ ಸಮಾಜದಲ್ಲಿ ರುವ ಇಂತಹ ಕೆಟ್ಟವರಿಗೆ ಬುದ್ಧಿ ಹೇಳಿ ತಿದ್ದಬೇಕು. ಅವರು ಹೆಬ್ಬಾವನ್ನು ಸಾಕುತ್ತಿ ದ್ದಾರೆ. ಕೊನೆಗೊಂದು ದಿನ ಹೆಬ್ಬಾವೇ ಅವರನ್ನು ನುಂಗುತ್ತದೆ. ಎಚ್ಚರವಿರಲಿ ಎಂದರು.


ಭಾರತದ ಮುಸ್ಲಿಮರಿಗೆ ಭಾರತವೇ ಗತಿ. ಎಲ್ಲಾ ದೇಶಗಳು ಭಾರತದ ಮುಸ್ಲಿಮ ರನ್ನು ವಾಪಸ್ ಕಳಿಸುತ್ತಾರೆ. ಯಾವ ದೇಶದವರೂ ಅವರನ್ನು ಪ್ರೀತಿಸುವುದಿಲ್ಲ. ಅವರು ಈ ದೇಶದಲ್ಲೇ ಬದುಕಬೇಕು. ಇದನ್ನು ಅರ್ಥ ಮಾಡಿಕೊಳ್ಳಲಿ. ಜಿಹಾದ್ ಮನಸಿನಿಂದ ಹೊರ ಬರಲಿ. ಅಥವಾ ಜಿಹಾದಿಗಳನ್ನು ಹೊರಹಾಕಲಿ. ಕೆಲವು ಪಕ್ಷಗಳು ಮುಸ್ಲಿಮರನ್ನು ಓಲೈಸುವುದನ್ನು ಬಿಡಬೇಕು ಎಂದರು.


ಹಿಂದೂ ಸಮಾಜ ಇಂತಹ ಹತ್ಯೆಗಳಿಗೆ ಹೆದರುವುದಿಲ್ಲ. ಸಾವಿರಾರು ವರ್ಷಗಳಿಂದ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ಇತಿಹಾಸ ಅವರಿಗೆ ತಕ್ಕ ಪಾಠ ಕಲಿಸಿದೆ. ದೇಶದಲ್ಲಿ ಕೋಟಿಗಟ್ಟಲೇ ಹಿಂದೂ ಕಾರ್ಯಕರ್ತರಿದ್ದಾರೆ. ಹಿಂದೂ ಸಮಾಜ ಉಳಿವಿಗಾಗಿ ನಾವು ಹೋರಾಟ ನಡೆಸುತ್ತೇವೆ. ಮನೆ ಮನೆಗೂ ಹಿಂದೂ ಧರ್ಮದ ಸಾರವನ್ನು ಅದರ ಆಳವನ್ನು ತಿಳಿಸುತ್ತೇವೆ ಎಂದರು.


ಸಂಸದ ಬಿ.ವೈ. ರಾಘವೇಂದ್ರ ಮಾತ ನಾಡಿ, ಬಿಜೆಪಿ ಸರ್ಕಾರಕ್ಕೆ ಹಿಂದೂಗಳ ರಕ್ಷಣೆ ಒಂದು ಸವಾಲಾಗಿದೆ. ಆದರೆ, ಅದನ್ನು ನಾವು ಸಮರ್ಥವಾಗಿ ನಿಭಾಯಿಸುತ್ತೇವೆ. ಒಂದು ಸಮುದಾಯವನ್ನು ಓಲೈಸುವವರಿಂದ ಇಂತಹ ದುಷ್ಕೃತ್ಯಗಳು ನಡೆಯುತ್ತಿವೆ. ರಾಜಕಾರಣಕ್ಕಿಂತ ಹಿಂದುತ್ವ ದೊಡ್ಡದು ಎಂಬುದು ಬಿಜೆಪಿಗೆ ಗೊತ್ತಿದೆ. ಹಿಂದೂ ಕಾರ್ಯಕರ್ತರು ನೋವು ಪಡುವುದು ಬೇಡ. ಬಿಜೆಪಿಯನ್ನು ಅನುಮಾನದಿಂದ ನೋಡುವುದೂ ಬೇಡ, ಹಿಂದಿನ ಸರ್ಕಾರಗಳು ಕೊಟ್ಟ ಶಾಪವಿದು ಎಂದರು.


ಹಿಂದೂ ಸಮಾಜ ಕೊಟ್ಟ ಆಶೀರ್ವಾದದಿಂದಲೇ ನಾವು ಅಧಿಕಾರಕ್ಕೆ ಬಂದಿದ್ದೇವೆ. ಕಾರ್ಯಕರ್ತರ ಕಣ್ಣೀರು ನಮ್ಮ ಕಣ್ಣೀರು. ಯಾರೂ ಭಯಪ ಡಬೇಕಾಗಿಲ್ಲ ಎಂದರು.


ಪ್ರತಿಭಟನಾ ಸಭೆಯಲ್ಲಿ ಪ್ರಮುಖರಾದ ಕೆ.ಎಸ್. ಈಶ್ವರಪ್ಪ, ಪಟ್ಟಾಭಿರಾಂ, ವಾಸುದೇವ್, ಎಂ.ಬಿ. ಭಾನುಪ್ರಕಾಶ್, ಡಿ.ಎಸ್. ಅರುಣ್, ಎಸ್. ರುದ್ರೇಗೌಡ, ಸುನಿತಾ ಅಣ್ಣಪ್ಪ, ಚನ್ನಬಸಪ್ಪ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!