Tunga TARANGA | July , 26, 2022 |Kicca sudeep fans rayli
ಶಿವಮೊಗ್ಗ : ರಾಜ್ಯದಾದ್ಯಂತ ಜು.28 ರಂದು ಸುದೀಪ್ ನಟಿಸಿರು ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಯಾಗುತ್ತಿದ್ದು. ಇಂದು ಸಂಜೆ ಶಿವಮೊಗ್ಗ ನಗರದಲ್ಲಿ ಅಭಿಮಾನಿಗಳಿಂದ ರ್ಯಾಲಿ ಆಯೋಜಿಸಲಾಗಿತ್ತು.
ಎಂಆರ್ ಎಸ್ ಸರ್ಕಲ್ ನಿಂದ ಹೆಚ್ ಪಿಸಿ ಚಲನ ಚಿತ್ರದ ವರೆಗೆ
ಆಯೋಜಿದ್ದ ರ್ಯಾಲಿಯಲ್ಲಿ ಅಭಿಮಾನಿಗಳು ಕಿಚ್ಚ ಸುದೀಪ್ ಫೋಟೋ ಇರುವ ಬಾವುಟಗಳನ್ನು ಹಿಡಿದು… ಘೋಷಣೆಗಳನ್ನು ಕೂಗುತ್ತಾ ಅಭಿಮಾನ ಮೆರೆದರು.
ಸಿನಿಮಾ ಬಿಡುಗಡೆಗೆ ನಗರದಲ್ಲಿ ಭರ್ಜರಿ ಸಿದ್ಧತೆಗಳು ನಡೆದಿದೆ.
ಮೆರವಣಿಗೆ ಎಂಆರ್ ಎಸ್ ವೃತ್ತದಿಂದ ಹೊರಟು ವಿದ್ಯಾನಗರ, ಸೇತುವೆ, ಬಿ.ಹೆಚ್ ರಸ್ತೆ, ಶಿವಪ್ಪ ನಾಯಕನ ವೃತ್ತ, ಎಎ ವೃತ್ತ ನೆಹರೂ ರಸ್ತೆಯ ಮೂಲಕ ಹೆಚ್ ಪಿಸಿ ಚಲನ ಚಿತ್ರ ಮಂದಿರ ತಲುಪಿದೆ. ಅಲ್ಲಲ್ಲಿ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು.
