ಶಿವಮೊಗ್ಗ,
ಕೇಂದ್ರ ಸರ್ಕಾರ ಅಗತ್ಯ ವಸ್ತು ಗಳ ಮೇಲೆ ಜಿ.ಎಸ್.ಟಿ. ಹೇರಿರು ವುದು ಬಡ ಮತ್ತು ಮಧ್ಯಮ ವರ್ಗಕ್ಕೆ ಮಾಡಿದ ದ್ರೋಹವಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಾ. ಶ್ರೀನಿವಾಸ್ ಕರಿಯಣ್ಣ ಹೇಳಿದರು.


ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಹೊರೆಯಾಗುವಂತೆ ತೆರಿಗೆ ಹೆಚ್ಚಿಸಿದೆ. ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಮಿತಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದಾರೆ. ಅವರು ಹೇಗೆ ತಾನೇ ವಿರೋಧಿಸಲು ಸಾಧ್ಯ? ಬಡ ಮತ್ತು ಮಧ್ಯಮವರ್ಗದವರಿಗೆ ಇದರಿಂದ ತುಂಬಾ ತೊಂದರೆಯಾಗಿದೆ. ತಕ್ಷಣವೇ ಅಗತ್ಯವಸ್ತುಗಳ ಮೇಲೆ ವಿಧಿಸಿರುವ ತೆರಿಗೆಯನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.


ಇದರ ಜೊತೆಗೆ ಎಲ್‌ಇಡಿ ಬಲ್ಬ್ ಗಳು, ಸೋಲಾರ್ ವಾಟರ್ ಹೀಟರ್, ಬರೆಯಲು, ಮುದ್ರಿಸಲು ಇರುವ ಇಂಕ್ ಗಳ ಮೇಲೆ, ಮಕ್ಕಳು ಶಿಕ್ಷಣಕ್ಕಾಗಿ ಬಳಸುವ ಭೂಪಟಗಳು, ಗ್ಲೋಬ್ ಗಳ ಮೇಲೂ ಶೇಕಡ ೧೮ ರವರೆಗೆ ಜಿ.ಎಸ್.ಟಿ. ವಿಧಿಸಿ ಜನವಿರೋಧಿ ಸರ್ಕಾರ ಎಂದು ಸ್ಪಷ್ಟಪಡಿ ಸಿದೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಹಮ್ಮಿ ಕೊಳ್ಳಲಿದೆ ಎಂದರು.


ಈಶ್ವರಪ್ಪರಿಗೆ ಕ್ಲೀನ್ ಚಿಟ್ ನೀಡಿರುವುದು ದುರಾದೃಷ್ಟಕರ: ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಮತ್ತೋರ್ವ ಕಾಂಗ್ರೆಸ್ ಮುಖಂಡ ವೈ. ಹೆಚ್. ನಾಗರಾಜ್, ಶೇಕಡ ೪೦ ರ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನ ಆತ್ಮ ಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಎಸ್. ಈಶ್ವರಪ್ಪ ಅವರಿಗೆ ಉಡುಪಿ ಪೊಲೀಸರು ಕ್ಲೀನ್ ಚಿಟ್ ನೀಡಿರುವುದು ದುರಾದೃಷ್ಟಕರ ವಾಗಿದೆ. ಒಂದು ಕಡೆ ಗುತ್ತಿಗೆದಾರನ ಕಳೆದು ಕೊಂಡ ಕುಟುಂಬ ಕಣ್ಣೀರು ಹಾಕುತ್ತಿದ್ದರೆ, ಬಿಜೆಪಿ ಯವರು ಅದನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಸರ್ಕಾರದ ಮೇಲೆ ನಂಬಿಕೆಯೇ ಹೊರಟುಹೋಗಿದೆ ಎಂದರು.


ಅಧಿಕಾರಿಗಳ ಮೇಲೆ ಮತ್ತು ಪ್ರಭಾವಿಗಳ ಮೇಲೆ ಒತ್ತಡ ಹಾಕಿರುವ ಈಶ್ವರಪ್ಪ ಅವರು, ಸಂತೋಷ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ಫೋನ್ ನಲ್ಲಿದ್ದ ಎಲ್ಲಾ ಸಾಕ್ಷಿಗಳನ್ನು ನಾಶ ಮಾಡಲು ತಮ್ಮ ಪ್ರಭಾವ ಬಳಸಿಕೊಂಡಿದ್ದಾರೆ. ಗುತ್ತಿಗೆದಾರ ಆತ್ಮಹತ್ಯೆಗೆ ಮೊದಲು ಸ್ಪಷ್ಟವಾಗಿ ತನ್ನ ಆತ್ಮಹತ್ಯೆಗೆ ಕಾರಣ ಎಂದು ಹೇಳಿದ್ದರೂ ಪೊಲೀ ಸರು ಬಿ ರಿಪೋರ್ಟ್ ಹಾಕಿರುವುದು ಸಂಶಯಕ್ಕೆ ಕಾರಣವಾಗಿದೆ. ಇದು ಆದೇಶವೇನಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಿಪ್ಪೇಸ್ವಾಮಿ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!