ಶಿವಮೊಗ್ಗ : ತಾಲೂಕಿನ ತೀರ್ಥಹಳ್ಳಿ ಸಮೀಪದ ಮುಡುಬ ಬಳಿ ಸ್ವಿಫ್ಟ್ ಕಾರ್ ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ತರೀಕೆರೆ ನಿವಾಸಿ ವಕೀಲ ಸಂಪತ್ ಕುಮಾರ್ (50) ಮೃತ ದುರ್ದೈವಿ. ಘಟನೆಯಲ್ಲಿ ಪತ್ನಿಗೆ ಗಂಭೀರ ಗಾಯಗಳಾಗಿದ್ದು,
ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗನಿಗೆ ಸಣ್ಣಪುಟ್ಟ ಗಾಯಗಾಳಾಗಿವೆ.
ಈ ಘಟನೆ ಮಗನಿಗೆ ಪಡುಬಿದ್ರೆ ಸಮೀಪದ ಆಳ್ವಾಸ್ ಕಾಲೇಜಿನಲ್ಲಿ ದಾಖಲಾತಿ ಮಾಡಿಸಿ ಹಿಂದಿರುಗುತ್ತಿರುವಾಗ ನಡೆದಿದೆ.
.