ಅಅಂತರಾಳ ಜಾಲತಾಣದ ಚಿತ್ರ
ಶಿಕಾರಿಪುರ,ಜು.04:
ಮಕ್ಕಳ ಲಿಂಗ ನಿರ್ಧಾರಕ್ಕೆ ಸತಿ ಪತಿಯರಿಬ್ಬರೂ ಕಾರಣ ಎಂಬ ವಾಸ್ತವಾಂಶ ಸತ್ಯ ತಿಳಿಯದ ವ್ಯಕ್ತಿ ಹಾಗೂ ಆತನ ಮನೆಯವರ ವರ್ತನೆ ವಿರುದ್ದ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಲ್ಕು ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟ ಹಿನ್ನಲೆಯಲ್ಲಿ ಹೆಂಡತಿಯನ್ನು ಆಕೆಯ ಪತಿ ಮತ್ತು ನಾದನಿಯರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆಂದು ಈ ಮೂವರ ವಿರುದ್ಧ ಶಿಕಾರಿಪುರದಲ್ಲಿ ದೂರು ದಾಖಲಿಸಲಾಗಿದೆ.
ಶಿಕಾರಿಪುರ ತಾಲೂಕು ತಿಮಾಪುರ ವಾಸಿ ಕರಿಯಪ್ಪ 2013 ರಲ್ಲಿ ಶೃತಿಯೊಂದಿಗೆ ಮದುವೆಯಾಗಿದ್ದರು. ಅವರಿಗೆ ವಿಶ್ವತಾ , 2, ಪ್ರತೀಕ್ಷಾ. 3, ಧನ್ಯಾ, 4, ಬೃಂದಾ ಎಂಬ ನಾಲ್ಕು ಜನ ಹೆಣ್ಣು ಮಕ್ಕಳಿದ್ದರು. ಮನೆಮಾಲಿಕನ ಗಂಡು ಮಕ್ಕಳ ಆಸೆಯೇ ಇದಕ್ಕೆ ಕಾರಣ.
ಮೊದಲೆರಡು ಮಕ್ಕಳು ಹುಟ್ಟುವ ವರೆಗೂ ಚೆನ್ನಾಗಿದ್ದ ಕರಿಬಸಪ್ಪನವರು ಮೂರನೆಯವಳೂ ಹೆಣ್ಣು ಎಂದಾಕ್ಷಣ ಪತ್ನಿಯನ್ನ ಹಿಯಾಳಿಸಯಲು ಮುಂದಾಗಿದ್ದಾರೆ. ಕನಿಷ್ಟ ಇದಕ್ಕೆ ನಾನೂ ಕಾರಣ ಎಂಬ ಚಿಕ್ಕ ಯೋಚನೆಯೂ ಇದ್ದಂತಿಲ್ಲ. ಈಗೆ ಒಂದು ವರ್ಷದಿಂದ ನಾಲ್ಕನೇ ಮಗುವೂ ಸಹ ಹೆಣ್ಣಾಗಿದ್ದರಿಂದ ಮನೆಯವರು ಕಿರುಕುಳ ನೀಡಲು ಆರಂಭಿಸಿದ್ದಾರೆ.
ಗಂಡ ಕರಿಬಸಪ್ಪ ಮತ್ತು ನಾದಿನಿಯರಾದ ಯಶೋದಮ್ಮ ಮತ್ತು ತಂಗಿಯಾದ ಸುನೀತಾ ಸೇರಿ ಹಲವರು ಇವಳು ಹೆಣ್ಣು ಮಕ್ಕಳನ್ನು ಹಡೆದು ನಮ್ಮ ಮನೆತನಕ್ಕೆ ಗಂಡು ಸಂತಾನ ಇಲ್ಲದಂಗೆ ಮಾಡಿದವಳು ಎಂದು ಅವ್ಯಾಚ್ಯ ಶಬ್ದಗಳಿಂದ ಬೈಯಲು ಆರಂಭಿಸಿದ್ದಾರೆ.
ಪತಿ ಮತ್ತು ಪತ್ನಿಯರ ನಡುವೆ ಈ ವೈಮನಸ್ಸನ್ನ ಕುಟುಂಬದ ಮತ್ತು ಗ್ರಾಮಸ್ಥರು ಸುಧಾರಿಕೊಂಡು ಹೋಗುವಂತೆ ಪ್ರಯತ್ನಿಸಿದರು ಯಾವುದೇ ಪ್ರಯೋಜನವಾಗಿಲ್ಲ. ನಾದಿನಿಯರಾದ ಯಶೋದಮ್ಮಮತ್ತು ಸುನೀತಾರು ತವರುಮನೆಗೆ ಬಂದಾಗ ಮತ್ತೆ ಶೃತಿಯವರನ್ನ ನಿಂದಿಸಿ ಮಾತನಾಡಿದ್ದಾರೆ.
ಇದಕ್ಕೆ ಪ್ರತ್ಯುತ್ತರ ಕೊಟ್ಟ ಶೃತಿ ಹೀಗೆ ಹೆಣ್ಣು ಮಕ್ಕಳನ್ನ ಹೆತ್ತವಳು ಎಂದು ಹೀಯಾಳಿಸಿದರೆ ಸರಿಯಿರಲ್ಲ ಎಂದು ಜೋರು ಮಾಡಿದ್ದಾರೆ. ಇದನ್ನ ಕೇಳಿಸಿಕೊಂಡ ಕರಿಬಸಪ್ಪ ಪತ್ನಿಯ ಜಡೆ ಹಿಡಿದು ನನ್ನ ಅಕ್ಕ ತಂಗಿಯರ ಎದುರು ಉತ್ತರ ಕೊಡ್ತೀಯಾ ಎಂದು ಜೋರು ಮಾಡಿ ಮೂವರು ತಳಿಸಿದ್ದಾರೆ. ಈ ಬಗ್ಗೆ ಶೃತಿ ಶಿಕಾರಿಪುರ ಟೌನ್ ಪೊಲೀಸ್ ಠಾಣೆಗೆ ಪತಿ ಮತ್ತು ನಾದನಿಯರ ವಿರುದ್ಧ ದೂರು ನೀಡಿದ್ದಾರೆ.


