ಶಿವಮೊಗ್ಗ, ಜು.04:
ಕುಡಿಯಲು ಹಣಬೇಕು, ಜೂಜಾಡಲು, ಜಾಲಿಯಾಗಿರಲು ಹಣಬೇಕು…, ನಮ್ಮನ್ನ ನೋಡಿದ್ರೆ ಜನ ಹೆದರಬೇಕು ಎಂದು ರಾತ್ರಿ ಬರುವ ಒಂಟಿ ಜನರಿಗೆ ಬೆದರಿಕೆ ಹಾಕಿ ದರೋಡೆ ಮಾಡಲು ಮುಂದಾಗಿದ್ದ ರೌಡಿ ಲೀಸ್ಟ್ ನಲ್ಲಿದ್ದ ನಾಲ್ವರು ಇತರೆ ಮೂವರು ಪುಡಿ ರೌಡಿಗಳು ಮಾಡಲೆತ್ನಿಸಿದ್ದ ಶೋಕಿ ಪ್ರಯತ್ನಕ್ಕೆ ಶಿವಮೊಗ್ಗ ವಿನೋಬನಗರ ಪೊಲೀಸ್ ಇನ್ನ್ ಸ್ಪೆಕ್ಟರ್ ರವಿ ಹಾಗೂ ಅವರ ತಂಡ ಕಡಿವಾಣ ಹಾಕಿ ಐವರನ್ನು ವಶಕ್ಕೆ ಪಡೆದಿದೆ.
ಒಬ್ಬಂಟಿಯಾಗಿ ಓಡಾಡುವ ವ್ಯಕ್ತಿಗಳನ್ನ ಬೆದರಿಸಿ ದರೋಡೆಗೆ ಹೊಂಚಾಕುತ್ತಿದ್ದ ವಿಚಾರವಾಗಿ 5 ಜನರನ್ನ ಬಂಧಿಸಲಾಗಿದ್ದು 7 ಜನರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಬೊಮ್ಮನಕಟ್ಟೆ, ಸಾನ್ವಿ ಲೇಔಟ್ ಹತ್ತಿರ ಬೆಕ್ಕು ರವಿ, ಕಡ್ಡಿ ಸುನೀಲ, ಸಮಂತ ನಾಯ್ಕ್ ಸೇರಿದಂತೆ 7 ಜನ ಕೈಲಿ ಖಾರದ ಪುಡಿ ಹಾಗೂ ಅಪಾಯಕಾರಿ ಆಯುಧಗಳಾದ ಡ್ರ್ಯಾಗರ್, ಲಾಂಗು ಮಚ್ಚು, ರೇಜರ್ ಗಳನ್ನ ಹಿಡಿದುಕೊಂಡು ತಿರುಗಾಡುತ್ತಿದ್ದಾಗ ಪೊಲೀಸರು ಚಾಟಿ ಬೀಸಿದ್ದಾರೆ.
ಇವರು ನಗರದಲ್ಲಿ ಒಬ್ವಂಟಿಯಾಗಿ ಓಡಾಡುವ ವ್ಯಕ್ತಿಗಳ ಮೇಲೆ ಅಟ್ಯಾಕ್ ಮಾಡಿ ದರೋಡೆ ಮಾಡಲು ಸಂಚು ರೂಪಿಸುತ್ತಿತ್ತು. ಈ
ಸಂಚನ್ನ ಅರಿತ ವಿನೋಬ ನಗರದ ಪಿಐ ರವಿಕುಮಾರ್ ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಈ ಗ್ಯಾಂಗ್ ನ್ನ ಸುತ್ತುವರಿಯುತ್ತಿದ್ದಂತೆ ಕಡ್ಡಿ ಸುನೀಲ ಮತ್ತು ಶಮಂತ ಪರಾರಿಯಾಗಿದ್ದಾರೆ. ಉಳಿದವರನ್ನು ವಶಕ್ಕೆ ಪಡೆಯಲಾಗಿದೆ.
ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ನಿವಾಸಿ ರವಿ ಯಾನೆ ಬೆಕ್ಕು ರವಿ, ಬೆಂಕಿನಗರದ ನಿವಾಸಿ ರಮೇಶ ಯಾನೆ ಜುಮಕಿ ಉಮೇಶ
ಮಣಿ ಯಾನೆ ಮುನಿಯಾ, ಅಲ್ ಮುನಾಫ್ ಬಿನ್ ರೇಖ್ ಮುಸ್ತಾಪ, ಅಕ್ಬರ್ ಯಾನೆ ಚಾರ್ಲಿ, ಅಕ್ಬರ್ ಕೈಯಲ್ಲಿ ಕಬ್ಬಿಣದ ರಾಡು ಇದ್ದರೆ, ಅಲ್ ಮುನಾಫ್ ಕೈಯಲ್ಲಿ ಚಾಕು ಹೊಂದಿದ್ದ. ಬೆಕ್ಕು ರವಿ ಕೈಯಲ್ಲಿ ಲಾಂಗು ಇದ್ದರೆ, ಮುನಿಯಾ ಮತ್ತು ಜುಮಕಿ ಉಮೇಶ್ ಇಬ್ಬರು ಚಾಕು ಹಿಡಿದುಕೊಂಡಿದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇವರನ್ನ ವಿಚಾರಿಸಿದ ಪೊಲೀಸರಿಗೆ ಈ ರೌಡಿಗಳು ಜೂಜಾಟ, ಕುಡಿತ ಮೊದಲಾದ ಶೋಕಿಗೆ ಹಣ ಬೇಕಿತ್ತು, ಈ ಹಣಕ್ಕಾಗಿ ರಾಬರಿ ನಡೆಸುವ ಅನಿವಾರ್ಯವಿತ್ತು. ರಾತ್ರಿಯ ವೇಳೆ ಒಬ್ಬಂಟಿಗರಾಗಿ ಓಡಾಡುವ ವ್ಯಕ್ತಿಗಳೇ ನಮ್ಮ ಟಾರ್ಗೆಟ್ ಎಂದಿದ್ದಾರೆ.
ಅಂತಹ ವ್ಯಕ್ತಿಗಳು ಸಿಕ್ಕಾಗ ಆಯುಧ ತೋರಿಸಿ ಖಾರದ ಪುಡಿ ಎರಚಿ ಅವರ ಬಳಿ ಹಣ ಒಡವೆ ಮತ್ತು ಮೊಬೈಲ್ ಕಳವು ಮಾಡಿಕೊಂಡು ಹೋಗುವ ಉದ್ದೇಶವಿತ್ತು. ಈ ಸಂಬಂಧ ಏಳು ಜನರ ವಿರುದ್ಧ ದೂರು ದಾಖಲಾಗಿದೆ. ಐವರನ್ಬ ಬಂಧಿಸಲಾಗಿದ್ದು ಒಂದು ಲಾಂಗ್, 02 ಚಾಕು, 02 ರೇಜರ್ ಮತ್ತು ಖಾರದ ಪುಡಿ ಪಾಕೇಟನ್ನು ವಶಕ್ಕೆ ಪಡೆಯಲಾಗಿದೆ.



