ಶಿವಮೊಗ್ಗ, ಜೂ.22:
ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಯ ಕಾಲಿಗೆ ಗುಂಡೇಟು ನೀಡಿ ಬಂಧಿಸಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗದ ಕೆಆರ್​ ಪುರಂ ರೋಡ್​ ಬಳಿ ಬರುವ ಭರ್ಮಪ್ಪ ನಗರ ಕ್ರಾಸ್​ ಬಳಿ ಎಂಒಬಿ ಆದ ತನ್ನನ್ನು ಹಿಡಿಯಲು ಬಂದ ಪೊಲೀಸರಿಬ್ಬರಿಗೆ ಚಾಕುವಿನಿಂದ ಇರಿದು ಅಲ್ಲಿಂದ ಪರಾರಿಯಾಗಿದ್ದ. ಘಟನೆಯಲ್ಲಿ ಹೆಡ್​ಕಾನ್​ಸ್ಟೇಬಲ್​ ಗುರುನಾಯಕ್ ಹಾಗೂ ಪಿಸಿ ರಮೇಶ್​ ಗಾಯಗೊಂಡಿದ್ದರು. ಈ ಪ್ರಕರಣ ನಿಜಕ್ಕೂ ಆಘಾತಕಾರಿಯಾಗಿತ್ತು. ಕಾರಣ, ಆರೋಪಿಯೊಬ್ಬ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದು ಸರಿಯಲ್ಲ ಎಂದೇ ಜನರು ಸಹ ಮಾತನಾಡಿಕೊಂಡಿದ್ದರು. ಅಷ್ಟರಲ್ಲಿಯೇ ಪೊಲೀಸರು ಆರೋಪಿಯನ್ನು ಹಿಡಿದು ಸೆಲ್​ಗೆ ತಳ್ಳಿದ್ದಾರೆ.


ಘಟನೆ ನಡೆದ ಕೇವಲ 2-3 ಗಂಟೆಯಲ್ಲಿಯೇ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಸೆರೆಯಾಗುವಾಗಲೂ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.

ಮೊದಲು ನಡೆದದ್ದು ಇಷ್ಟು

ಪೊಲೀಸರ ಮೇಲೆ ಹಲ್ಲೆ ಯತ್ನ ನಡೆಯುತ್ತಿರುವ ಪ್ರಯತ್ನಗಳ ಕಾರಣದಿಂದಲೇ ಪೊಲೀಸ್ ಇಲಾಖೆ ಎಲ್ಲಾ ತನ್ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಇಂತಹ ಪ್ರಕರಣಗಳಲ್ಲಿ ಹೋಗುವಾಗ ಆಯುದ ಸಮೇತ ಹೋಗುವಂತೆ ಸೂಚಿಸಿತ್ತು.
ಕ್ರೈಂ ನಂಬರ್​ 198 ಅಡಿಯಲ್ಲಿ 397 ಸೆಕ್ಷನ್​ ನಡಿ ದಾಖಲಾಗಿದ್ದ ಕೇಸ್​ ಆರೋಪಿ ಶಾಹಿದ್ ಖುರೇಶಿಯ ಇರುವಿಕೆ ಭರ್ಮಪ್ಪನಗರ ಕ್ರಾಸ್​ ಬಳಿಯಲ್ಲಿರುವುದು ಪೊಲೀಸರಿಗೆ ಸಿಕ್ಕಿತ್ತು. ಲಭಿಸಿದ ಖಚಿತ ಮಾಹಿತಿ ಅಡಿಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದರು.


ಆರೋಪಿಯನ್ನು ಬಂಧಿಸಲು ತೆರಳಿದ್ದ ಕ್ರೈಂ ಪೊಲೀಸರನ್ನ ನೋಡುತ್ತಲೇ ಶಾಹಿದ್​ ತನ್ನ ಆಟಾಟೋಪ ಮೆರೆದಿದ್ದಾನೆ. ಗಾಂಜಾ ಮತ್ತಿನಲ್ಲಿದ್ದನೋ!? ಏನೋ? ಪೊಲೀಸರ ಮೇಲೆ ಎರಗಿದ ಆತ ತನ್ನ ಹಿಡಿಯಲು ಬಂದ ರಮೇಶ್ ಮೇಲೆ ಅಟ್ಯಾಕ್​ ಮಾಡಿದ್ಧಾನೆ. ಅವರ ಕೈಗೆ ಗಾಯ ಮಾಡಿದ್ದ ಶಾಹಿದ್ ನಂತರ ಪೊಲೀಸ್ ಗುರುನಾಯಕ್​ರ ಎದೆಗೆ ಚುಚ್ಚಿದ್ದಾನೆ.ನಂತರ ಶಾಹಿದ್ ತಪ್ಪಿಸಿಕೊಂಡಿದ್ಧಾನೆ. ಸ್ಥಳೀಯರು ಸೇರಿದಂತೆ ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸರು ಮೊದಲು ತಮ್ಮ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೆಗ್ಗಾನ್ ಆಸ್ಪತ್ರೆಗೆ ಬಂದ ಎಸ್​ಪಿ ಲಕ್ಷ್ಮೀಪ್ರಸಾದ್​ ಸಿಬ್ಬಂದಿಯ ಆರೋಗ್ಯದ ಬಗ್ಗೆ ಮೊದಲು ಗಮನ ಹರಿಸಿ, ತೆಗೆದುಕೊಳ್ಳಬೇಕಾದ ಅವಶ್ಯಕ ಚಿಕಿತ್ಸೆ ಬಗ್ಗೆ ಆಸ್ಪತ್ರೆ ಸಿಬ್ಬಂದಿಯ ಜೊತೆ ಸಮಾಲೋಚಿಸಿದ್ದಾರೆ. ಅಲ್ಲದೆ ಇಬ್ಬರು ಸಿಬ್ಬಂದಿಗೂ ಧೈರ್ಯ ತುಂಬಿದ್ದಾರೆ. ಇದರ ಬೆನ್ನಲ್ಲೆ ನ್ಯೂಸ್​ವೊಂದು ಹರಿದಾಡಲು ಆರಂಭಿಸಿತ್ತು. ಆರೋಪಿ ಶರಣಾಗತಿ ಆಗಿದ್ಧಾನೆ ಎಂಬ ವದಂತಿ ಕೇಳಿಬಂದಿತ್ತು. ಆದರೆ ಇದು ಸತ್ಯವಾಗಿರಲಿಲ್ಲ. ಏಕೆಂದರೆ, ಆರೋಪಿಯನ್ನ ಪೊಲೀಸರು ಎಲ್ಲೆಡೆ ಹುಡುಕಾಡುತ್ತಿದ್ರು. ಆರೋಪಿಯ ಬೆನ್ನಹತ್ತಿದ್ದ ಕೋಟೆ ಪೊಲೀಸರು ರಾಜೀವ್ ಗಾಂಧಿ ಬಡಾವಣೆ ಬಳಿ ಆರೋಪಿ ಇರುವುದನ್ನ ಮಾಹಿತಿ ಪಡೆದುಕೊಂಡು ಅಲ್ಲಿಗೆ ತೆರಳಿದ್ದಾರೆ. ಅಲ್ಲಿಯೂ ಆರೋಪಿ, ಪೊಲೀಸರ ಕಂಡೊಂಡನೆ ಮತ್ತೆ ಈಗಲೂ ಹಲ್ಲೆ ಮಾಡಲು ಮುಂದಾಗಿದ್ದಾನೆ. ಹೀಗಾಗಿ ಕೋಟೆ ಠಾಣೆ ಪಿಐ ಚಂದ್ರಶೇಖರ್​ ಆರೋಪಿ ಕಾಲಿಗೆ ಗುಂಡು ಹಾರಿಸಿದ್ಧಾರೆ.

By admin

ನಿಮ್ಮದೊಂದು ಉತ್ತರ

error: Content is protected !!