ಶಿವಮೊಗ್ಗಜೂ.22:
ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಾಲ್ಕು ದಿನದ ಹಿಂದೆ ಗಂಡು ಮಗುವಿಗೆ ಜನ್ಮನೀಡಿ ಹಾರೈಕೆ ಪಡೆಯುತ್ತಿದ್ದ ಬಾಣಂತಿ ಮಹಿಳೆ ಆಸ್ಪತ್ರೆಯಲ್ಲೆ ಸಾವುಕಂಡಿರುವ ಘಟನೆ ವರದಿಯಾಗಿದೆ.
ಶುಕ್ರವಾರ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸರಿತಾ(27) ಮಂಗಳವಾರ ಬೆಳಿಗ್ಗೆ ದಿಢೀರ್ ಎಂದು ಸಾವನ್ನಪ್ಪಿದ್ದಾರೆ. ಈ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಗ್ಲಾಜುಗಳನ್ನು ಹೊಡೆದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರ:
ಶುಕ್ರವಾರ ಮೆಗ್ಗಾನ್ ಹೆರಿಗೆ ವಾರ್ಡ್‌ಗೆ ಬಂದು ದಾಖಲಾದ ಸರಿತಾಗೆ ಜೂ.18 ರಂದು ಸಿಜರಿನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಗಂಡು ಮಗುವಿವೂ ಜನಿಸಿದೆ. ಹೆರಿಗೆ ನಂತರ ಚೆನ್ನಾಗಿಯೇ ಇದ್ದ ಸರಿತಾ ಮಂಗಳವಾರ ಬೆಳಿಗ್ಗೆ 5 ಕ್ಕೆ ಕೊನೆಯುಸಿರೆಳೆದಿದ್ದಾಾರೆ. ಈಕೆಗೆ ಭಾನುವಾರ ಸುಸ್ತು ಕಾಣಿಸಿಕೊಂಡಿದೆ. ವೈದ್ಯರು ತಪಾಸಣೆ ನಡೆಸಿ ಸೋಮವಾರ ಎರಡು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆದರೆ, ಯಾವುದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ ಎಂಬುದನ್ನು ನಮಗೆ ತಿಳಿಸಿಲ್ಲ.
ಪರಿಸ್ಥಿತಿ ಗಂಭೀರವಾಗಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದ್ದೇವು. ಆದರೆ, ಇದಕ್ಕೆ ಇಲ್ಲಿಯ ವೈದ್ಯರು ಆರೋಗ್ಯ ಚೆನ್ನಾಾಗಿದೆ. ಕೂಡಲೇ ಸರಿಹೋಗುತ್ತಾಳೆ ಎಂದು ವೈದ್ಯರು ತಿಳಿಸಿದ್ದರಿಂದ ನಾವು ಸುಮ್ಮನಾಗಿದ್ದೇವು. ಆದರೆ, ಈಗ ಈಕೆ ಸಾವನ್ನಪ್ಪಿದ್ದಾಾಳೆ. ಇದಕ್ಕೆ ಯಾರು ಹೊಣೆ ಎಂದು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.