ಶಿವಮೊಗ್ಗ, :
ಯೋಗ ಭಾರತೀಯ ಪ್ರಾಚೀನ ಆರೋಗ್ಯ ವಿಜ್ಞಾನದ ಪ್ರಮುಖ ಅಂಗ ಎಂದು ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ ಹೇಳಿದರು.


ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಆವರಣದಲ್ಲಿ ಶಿವಗಂಗ ಯೋಗ ಕೇಂದ್ರದ ರಾಘವ ಶಾಖೆ ವತಿಯಿಂದ ಹಾಗೂ ವಿವಿಧ ಶಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಎಂಟನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.


ಯೋಗಾಭ್ಯಾಸದಿಂದ ನಮ್ಮ ದೇಹದಲ್ಲಿ ಜೈವಿಕ ಶಕ್ತಿಗಳನ್ನು ಸಮತೋಲನವಾಗಿಟ್ಟು ದೇಹದ ಆಂತರಿಕ, ಭೌತಿಕ ಮತ್ತು ರಾಸಾಯನಿಕ ಪರಿಸರಗಳನ್ನು ಸುಸ್ಥಿತಿಯಲ್ಲಿ ಡುತ್ತದೆ. ಹಾಗೂ ಪ್ರೀತಿ, ದೈರ್ಯ, ಸಂತೋಷ, ಸಹಕಾರ, ಆತ್ಮವಿಶ್ವಾಸ ಜೀವನೋತ್ಸಾಹ ಸಕರಾತ್ಮಕ ಭಾವನೆಗಳು ನಮ್ಮಲ್ಲಿ ಮೈಗೂಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಪ್ಪದೇ ನಮಗಾಗಿ ಮಾಡಲು ಏಕೈಕ ಕೆಲಸವೆಂದರೆ ಯೋಗ. ಪ್ರತಿನಿತ್ಯ ಒಂದು ಗಂಟೆಗಳ ಕಾಲ ಯೋಗ, ಪ್ರಾಣಾಯಮ, ಧ್ಯಾನವನ್ನು ತಪ್ಪದೇ ಮಾಡಬೇಕೆಂದು ಕರೆ ನೀಡಿದರು.


ಯೋಗ ಹಬ್ಬ ಕಾರ್ಯಕ್ರಮದಲ್ಲಿ ಶಿವಗಂಗ ಯೋಗ ಕೇಂದ್ರದ ಕಾರ್ಯದರ್ಶಿ ಎಸ್.ಎಸ್.ಜ್ಯೋತಿ ಪ್ರಕಾಶ್, ಯೋಗ ಶಿಕ್ಷಕರಾದ ಜಿ.ಎಸ್.ಓಂಕಾರ್, ವಿಜಯಕೃಷ್ಣ, ಹರೀಶ್ ಹೆಚ್.ಕೆ., ಅನುರಾಧ, ಕೇಶವ, ಕಾಟನ್ ಜಗದೀಶ್, ಜಿ.ವಿಜಯಕುಮಾರ್ ಹಾಗೂ ವಿವಿಧ ಶಾಖೆಯ ಶಿಕ್ಷಕರು ಯೋಗ ಶಿಬಿರಾರ್ಥಿಗಳು ಪಾಲ್ಗೊಂಡು ಆಯುಷ್ ಇಲಾಖೆಯ ಆದೇಶದಂತೆ ಕ್ರಮ ಬದ್ಧವಾಗಿ ಯೋಗ, ಪ್ರಣಾಯಮ, ಧ್ಯಾನವನ್ನು ಮಾಡುವುದರ ಮುಖಾಂತರ ೮ನೇ ಅಂತರಾಷ್ಟ್ರೀಯ ಯೋಗ ದಿನಾಚಾರಣೆ ಸಂಭ್ರಮದಿಂದ ಆಚರಣೆ ಮಾಡಲಾಯಿತು.

By admin

ನಿಮ್ಮದೊಂದು ಉತ್ತರ

error: Content is protected !!