ಶಿವಮೊಗ್ಗ, ಜೂ.೧೬:
ರೋಟರಿ ಪೂರ್ವ ಆಂಗ್ಲ ಪ್ರೌಢ ಶಾಲೆಯಲ್ಲಿ ಏಪ್ರಿಲ್2022 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಹಮ್ಮಿಕೊಂಡ ಸಮಾರಂ ಭದಲ್ಲಿ ಬಿ.ಹೆಚ್. ರಾಮಪ್ಪ ಗೌಡ, ಜಿಲ್ಲಾ ಹಿರಿಯ ಶಿಕ್ಷಣಾಧಿಕಾರಿ, ಶಿವಮೊಗ್ಗ, ಇವರು ಮುಖ್ಯ ಅತಿಥಿ ಗಳಾಗಿ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುತ್ತಾ, ವಿದ್ಯಾ ರ್ಥಿಗಳ ಪ್ರತಿಭೆಯನ್ನು ಪುರಸ್ಕರಿಸಿ ಪ್ರೋತ್ಸಾಹಿಸುವುದನ್ನು ಶಿಕ್ಷಣ ಸಂಸ್ಥೆಗಳು ಸಂಸ್ಕಾರವಾಗಿ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

3
ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್‌ನ ಅಡಿಯಲ್ಲಿ ನಡೆಯುತ್ತಿರುವ ರೋಟರಿ ಪೂರ್ವ ಆಂಗ್ಲ ಪ್ರೌಢ ಶಾಲೆಯಲ್ಲಿ ಏಪ್ರಿಲ್2022 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಡಿಸ್ಟಿಂ ಕ್ಷನ್ ಹಾಗೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಒಟ್ಟು10 ವಿದ್ಯಾರ್ಥಿಗಳಿಗೆ ಟ್ರಸ್ಟ್‌ನ ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ರೊ. ಪಿ.ಡಿ.ಜಿ. ಹೆಚ್.ಎಲ್. ರವಿ ಹಾಗೂ ಟ್ರಸ್ಟ್‌ನ ಮಾಜಿ ಆಂತರಿಕ ಲೆಕ್ಕ ಪರಿಶೋಧಕರಾದ ರೊ. ಪುರುಷೋತ್ತಮ್ ಕೆ.ಎಸ್. ಇವರುಗಳು ಕೊಡಮಾಡಿದ ನಗದು ಹಣ ನೀಡುವುದರ ಜೊತೆಗೆ ಶಾಲು ಹೊದಿಸಿ

ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಈ ಪರೀಕ್ಷೆಯಲ್ಲಿ ಶಾಲೆಗೆ ಒಟ್ಟು ಶೇ.೮೬ ಫಲಿತಾಂಶವನ್ನು ಹಾಗೂ ತಮ್ಮ ತಮ್ಮ ಬೋಧನಾ ವಿಷಯಗಳಲ್ಲಿ ಶೇ.೧೦೦ ಹಾಗೂ ಶೇ.೯೨ರಷ್ಟು ಫಲಿತಾಂಶ ತಂದು ಕೊಡುವಲ್ಲಿ ಶ್ರಮವಹಿಸಿದ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರಿಗೆ ಮುಖ್ಯ ಅತಿಥಿಗಳು ಹಾಗೂ ಅತಿಥಿಗಳು ಗೌರವಾರ್ಪಣೆ ಮಾಡಿದರು.


ಇದೇ ಸಂದರ್ಭದಲ್ಲಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ರಾಮಪ್ಪ ಗೌಡ ಬಿ.ಹೆಚ್., ಹಿರಿಯ ಶಿಕ್ಷಣಾಧಿಕಾರಿಗಳು ಮತ್ತು ಇನ್ನೋರ್ವ ಮುಖ್ಯ ಅತಿಥಿಗಳು ಹಾಗೂ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರ ಹುದ್ದೆಯಿಂದ ನಿರ್ಗಮಿಸಲಿರುವ ರೊ. ಮಂಜುನಾಥ್ ಕದಂ ಇವರುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮ್ಯಾನೇಜಿಂಗ್ ಟ್ರಸ್ಟಿ, ರೊ. ಚಂದ್ರಶೇಖರಯ್ಯ ಎಂ., ಇವರು ಮಾತನಾಡುತ್ತಾ, ಪ್ರತಿಭೆಯ ಜೊತೆಗೆ ನಿರಂತರ ಕಲಿಕೆ, ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಯಶಸ್ಸನ್ನು ಕಾಣಬಹುದು ಎನ್ನುತಾ, ಉತ್ತಮ ಫಲಿತಾಂಶ ತಂದುಕೊಡುವಲ್ಲಿ ದುಡಿದ ಶಿಕ್ಷಕ ವೃಂದಕ್ಕೆ ಕೃತಜ್ಞತೆ ಸಲ್ಲಿಸಿದರು.


ಟ್ರಸ್ಟ್‌ನ ಉಪಾಧ್ಯಕ್ಷರಾದ ರೊ. ಡಾ. ಪರಮೇಶ್ವರ್ ಡಿ. ಶಿಗ್ಗಾಂವ್, ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಇವರುಗಳು ಮಾತನಾಡಿ ವಿದ್ಯಾರ್ಥಿಗಳ ಸಾಧನೆಯನ್ನು ಹಾಗೂ ಶಿಕ್ಷಕರ ಪರಿಶ್ರಮವನ್ನು ಪ್ರಶಂಸಿ ಸಿದರು. ಈ ಸಮಾರಂಭದಲ್ಲಿ ಟ್ರಸ್ಟ್‌ನ ಖಜಾಂಚಿ ರೊ. ವಿಜಯ್ ಕುಮಾರ್ ಜಿ., ಸಹಕಾರ್ಯದರ್ಶಿ(ಆಡಳಿತ), ರೊ. ನಾಗವೇಣಿ ಎಸ್.ಆರ್., ಬೋರ್ಡ್ ಆಫ್ ಟ್ರಸ್ಟಿ ರೊ. ಪ್ರವೀಶ್ ಡಿ., ವಿಶೇಷ ಆಹ್ವಾನಿತರಾದ ರೊ. ಪುರುಷೋತ್ತಮ್ ಕೆ.ಎಸ್. ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!