.
ಶಿವಮೊಗ್ಗ (ರಾಜಕಾಲುವೆ) ನಿವೇಶನದ ಸ್ಥಳಪರಿಶೀಲನೆ ನಡೆಸಿದ ಮುಖ್ಯನ್ಯಾಯಾಧೀಶರು


ಶಿವಮೊಗ್ಗ, ಜೂ.೧೬:
ಶಿವಮೊಗ್ಗ ಬಿ.ಹೆಚ್.ರಸ್ತೆ ಹಾಗೂ ಎಲ್‌ಎಲ್‌ಆರ್ ನಡುವಿನ ರಸ್ತೆಯ ಸುಮಾರು ೧೮೫೦ ಅಳತೆ ಯ ಜಾಗದ ಹಿಂದಿನ ಪ್ರಕರಣದ ಕುರಿತು ಇಂದು ರಾಜ್ಯ ಉಚ ನ್ಯಾಯಾಲಯದ ಸೂಚನೆ ಮೇರೆಗೆ ಶಿವಮೊಗ್ಗ ಜಿಲ್ಲಾ ಮುಖ್ಯ ನ್ಯಾಯಾ ಧೀಶರು, ನಗರ ಪಾಲಿಕೆ ಅಧಿ ಕಾರಿಗಳು ಹಾಗೂ ನಿವೇಶನ ದಾರರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಇಂದು ಮದ್ಯಾಹ್ನ ರಾಜ ಕಾಲುವೆ ಎಂದು ಕರೆಯಲ್ಪಡುವ ಈ ಸ್ಥಳದಲ್ಲಿ ನ್ಯಾಯಾಧೀಶರು ಆಗಮಿಸಿ ಸಮಗ್ರ ಮಾಹಿತಿಯನ್ನು ಪಡೆದರು. ಕುಮಾರಸ್ವಾಮಿ ಹಾಗೂ ವಿಲಿಯಂ ಎಂಬುವವರಿಗೆ ಎಲ್‌ಎಲ್‌ಆರ್ ರಸ್ತೆಯ ಭಾಗಕ್ಕೆ ಹೊಂದಿಕೊಂಡಂತೆ ೧೦೫೦ ಹಾಗೂ ೮*೫೦ ಅಳತೆಯ ಎರಡು ನಿವೇಶನಗಳನ್ನು ೧೯೭೭ರ ಸುಮಾರಿ ನಲ್ಲಿ ಶಿವಮೊಗ್ಗ ನಗರಸಭೆ ನೀಡಿತ್ತು. ಖಾತೆ ಮಾಡಿತ್ತು. ಈಗಲೂ ಕಂದಾಯ ಕಟಿ ಸಿಕೊಳ್ಳುತ್ತಿದೆ. ಈ ಮದ್ಯೆ ಸುಮಾರು ೧೦ವರ್ಷದ ಹಿಂದೆ ಇದು ರಾಜ ಕಾಲುವೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ಅಲ್ಲಿದ್ದ ಕಟ್ಟಡಗಳನ್ನು ನಗರಸಭೆ ಧ್ವಂಸಮಾಡಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಉಚ್ಛನ್ಯಾಯಾಲಯಕ್ಕೆ ಮೊರೆ ಹೋಗಿದ್ದ ಕುಮಾರಸ್ವಾಮಿ ಅವರ ಪ್ರಕರಣದ ಪರಿಶೀಲನೆ ನಂತರ ಸಮಗ್ರ ಮಾಹಿತಿ ಸಂಗ್ರಹಿಸಿ ನೀಡುವಂತೆ ಶಿವಮೊಗ್ಗ ಜಿಲ್ಲಾ ಮುಖ್ಯನ್ಯಾಯಾಧೀಶರಿಗೆ ಕೋರಲಾಗಿತ್ತು.

ಈ ಸಂದರ್ಭಲ್ಲಿ ಕುಮಾರಸ್ವಾಮಿ ಅವರು ತಮ್ಮ ಹೆಸರಿನಲ್ಲಿರುವ ದಾಖಲೆಗಳನ್ನು ಪ್ರಸ್ತುತ ಪಡಿಸಿದರು. ಮಹಾನಗರ ಪಾಲಿಕೆಯಆಯುಕ್ತ ಮಾಯಣ್ಣಗೌಡ ಹಾಗೂ ಇತರ ಅಧಿಕಾರಿಗಳು ಇದು ರಾಜಕಾಲುವೆಎಂದು ಪ್ರಬಲವಾಗಿ ತಿಳಿಸಲು ಪ್ರಯತ್ನಿಸಿದರು. ನ್ಯಾಯಾಧೀಶರು ಇಲ್ಲಿ ನಾನು ಮಾಡುತ್ತಿರುವುದು ಪೋಸ್ಟ್‌ಮ್ಯಾನ್ ಕೆಲಸವಷ್ಟೆ. ಉಚ್ಛನ್ಯಾಯಾಲಯದ ಮಾಹಿತಿಯಂತೆ ಇಲ್ಲಿನ ಸ್ಥಳಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಬಂದಿದ್ದೇನೆ. ನಿಮ್ಮ ಅಹವಾಲು, ಮಾಹಿತಿಗಳನ್ನು ಅಲ್ಲಿಗೆ ನೀಡಿ ಎಂದರು.

ಇದೇ ಸಂದರ್ಭದಲ್ಲಿ ಹಿಂದಿನಿಂದ ಅಂದರೆ ರಾಜಕಾಲುವೆ ಎನ್ನುವ ಸ್ಥಳದಿಂದ ರಸ್ತೆಯನ್ನು ಮಾಡಿಕೊಂಡು ಕಟ್ಟಡ ಕಟ್ಟಬೇಕು ಎಂಬ ಆಕಾಂಕ್ಷೆಯಿಂದ ನಿವೇಶನಕೊಂಡಿದ್ದವರು ತಬ್ಬಿಬ್ಬಾಗಿ ಯಾವುದೇ ಕಾರಣಕ್ಕೂ ಇಲ್ಲಿ ಕಟ್ಟಡ ಕಟ್ಟಬೇಡಿ. ಇಲ್ಲಿನ ನಿವೇಶನದಾರರಿಗೆ ಅನ್ಯಾಯವಾಗಿದ್ದರೆ ಪರ್ಯಾಯ ಮಾರ್ಗ ಅನುಸರಿಸಿ ಎಂದು ವಿನಂತಿಸಿದರು.
ಈ ಸಂಬಂಧ ಪಾಲಿಕೆಯ ಆಯುಕ್ತರೊಂದಿಗೆ ಚರ್ಚಿಸಿ ಎಂದು ಹೇಳಿದ ಮುಖ್ಯನ್ಯಾಯಾಧೀಶರು ವರದಿಯನ್ನು ಸಲ್ಲಿಸುವುಷ್ಟೆ ನಮ್ಮ ಇಂದಿನ ಕರ್ತವ್ಯವೆಂದರು. ಪ್ರಕರಣ ರಾಜ್ಯ ಉಚ್ಛನ್ಯಾಯಾಲಯದ ಅಂಗಳದಲ್ಲಿ ಅಂತಿಮ ಹಂತದಲ್ಲಿದೆ ಎನ್ನಲಾಗಿದ್ದು, ನ್ಯಾಯಾಲಯದ ತೀರ್ಪು ಈ ವಿಷಯಕ್ಕೆ ಮುಕ್ತಾಯ ಹಾಡಬೇಕಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!