ಶಿವಮೊಗ್ಗ, ಜೂ.
ಪಠ್ಯ ಪುಸ್ತಕ ಪರಿಷ್ಕರಣೆಯಿಂದ ಆಗಿರುವ ಅದ್ವಾನ ಸರಿಪಡಿಸುವಂತೆ ಆಗ್ರಹಿಸಿ ಜೂ.15 ರಂದು ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ನಡೆಸಲಾ ಗುತ್ತದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಂದು ಬೆಳಗ್ಗೆ ೭ ಗಂಟೆಗೆ ಕುವೆಂಪು ಸಮಾದಿಗೆ ಪುಷ್ಪನಮನ ಸಲ್ಲಿಸಿ ಪಾದಯಾತ್ರೆ ಆರಂಭವಾಗಲಿದೆ. ಸುಮಾರು ೧೮ ಕಿಮೀ ಈ ಜಥಾ ಮಧ್ಯಹ್ನ ೧೨ ಗಂಟೆ ಸುಮಾರಿಗೆ ತೀರ್ಥಹಳ್ಳಿಯ ಟೌನ್ ಹಾಲ್ಗೆ ಬಂದು ಬಹಿರಂಗ ಸಭೆ ನಡೆಸಲಾಗುತ್ತದೆ ಎಂದರು.
ಇದರಲ್ಲಿ ಮಾಜಿ ಸಿಎಂ ಸಿದ್ದರಾಮ ಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ವೈ.ಎಸ್.ವಿ. ದತ್ತಾ ಸೇರಿದಂತೆ ವಿವಿಧ ನಾಯಕರು, ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ರಮೇಶ್ ಹನಗವಾಡಿ, ರಾಜೇಂದ್ರ ಚೆನ್ನಿ, ರೈತ ಹೋರಾಟಗಾರ ರಾದ ಹೆಚ್.ಆರ್. ಬಸವರಾಜಪ್ಪ, ಕೆ.ಟಿ. ಗಂಗಾಧರ್ ಮೆದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.
ತಾವು ಶಿಕ್ಷಣ ಸಚಿವರಾಗಿದ್ದಾಗ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮಾಡಿದ್ದು, ಅದರಲ್ಲಿ ೨೭ ಉಪ ಸಮಿತಿಗಳಿದ್ದು, ಎರಡೂವರೆ ವರ್ಷ ಕಾಲ ದೀರ್ಘ ಅಧ್ಯ ಯನ ನಡೆಸಿ ಪರಿಷ್ಕರಣೆ ಮಾಡಲಾಗಿತ್ತು. ಆದರೆ ರೋಹಿತ್ ಚಕ್ರತೀರ್ಥ ಸಮಿತಿ ದಿಢಿ ರ್ ಹುಟ್ಟಿಕೊಂಡು ಪಠ್ಯಪುಸ್ತಕ ಪರಿಷ್ಕರಣೆ ಮಾಡಿ, ಸಮಿತಿಯೂ ವಿಸರ್ಜನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಿತಿ ವಿಸರ್ಜನೆಯಾಗಿದೆಯಾದರೂ ಅದ್ವಾನವಾದ ಪಠ್ಯಗಳು ಹಾಗೆಯೇ ಉಳಿದುಕೊಂಡಿವೆ. ಪರಿಷ್ಕರಣೆ ಸಂಬಂಧ ಇದುವರೆಗೂ ಪಿಡಿಎಫ್ ಬಿಡುಗಡೆ ಮಾಡಿಲ್ಲ. ಚಕ್ರತಿರ್ಥ ಅತ್ಯಂತ ಕ್ರೂರತನದಿಂದ ತಮ್ಮನ್ನು ತಾವೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದು ಒಂದು ಕೋಟಿ ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದೆ. ಯಾವುದೇ ಆಕ್ಷೇಪಾರ್ಹ ಪರಿಷ್ಕರಣೆ ಇಲ್ಲದಿದ್ದರೆ ಪಠ್ಯವನ್ನು ಬಹಿರಂಗಪಡಿಸಲಿಕ್ಕೆ ಸಮಸ್ಯೆ ಏನು? ರೋಹಿತ್ ಚಕ್ರತೀರ್ಥ ಅವರ ವಿದ್ಯಾರ್ಹತೆ ಏನು ?
ಬೋಧಾನಾ ಅನುಭವ ಏನೆಂಬುದು ಯಾರಿಗೂ ಗೊತ್ತಿಲ್ಲ ಎಂದರು.
ಪರಿಷ್ಕರಣೆ ಸಂಬಂಧಾಗಿ ವಿಧಾನ ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಇದು ಆಗದಿದ್ದರೆ ವಿಷಯ ತಜ್ಞರ ಜತೆಗಾದರೂ ಚರ್ಚಿಸಬೇಕಿತ್ತು. ಇದನ್ನು ಮಾಡಿಲ್ಲ. ಬರಗೂರು ರಾಮಚಂದ್ರಪ್ಪ ಪರಿಷ್ಕರಣೆ ಮಾಡಿದಾಗ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿದ್ದರು. ಆಗ ಅವರು ಏನನ್ನೂ ಮಾತನಾಡಲಿಲ್ಲ. ಆದರೆ ಈಗ ಅಂದಿನ ಪರಿಷ್ಕರಣೆ ತಪ್ಪಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ವಕೀಲ ಕೆ.ಪಿ.ಶ್ರೀಪಾಲ್, ಸಾಹಿತಿ ಚಂದ್ರೇಗೌಡ ಇದ್ದರು.