ಸೊರಬ, ಜೂ.


ತಾಲ್ಲೂಕಿನ ಕೈಸೋಡಿ ಗ್ರಾಮದಲ್ಲಿ ಸುಮಾರು ೯ನೇ ಶತಮಾನಕ್ಕೆ ಸೇರಿರಬಹುದಾದ ತೃಟಿತ ತುರುಗೋಳ್ ಜಿನ ಶಾಸನವನ್ನು ತಾಲ್ಲೂಕಿನ ಉಳವಿ ಗ್ರಾಮದ ಅವಿನಾಶ್ ಚಕ್ರಸಾಲಿ ಪತ್ತೆ ಮಾಡಿದ್ದಾರೆ.
ಅಪಹರಣಕಾರರಿಂದ ಗೋವುಗಳನ್ನು ರಕ್ಷಿಸಿ ವೀರಮರಣ ಹೊಂದಿದ ಕೈಸೋಡಿ ಗ್ರಾಮದ ವೀರ ಹಾಗೂ ಆತನ ಮಕ್ಕಳು ಕೆರೆ ಹಾಗೂ ದೇಗುಲವನ್ನು ಕಟ್ಟಿಸಿದ್ದರ ಉಲ್ಲೇಖವಿದ್ದು, ಕೈಸೋಡಿ ಗ್ರಾಮದ ಹೆಸರು ಕೆಸೈರ್ವಂ ಎಂದು ಉಲ್ಲೇಖವಿದೆ.


ಅಪಹರಣಕಾರರಿಂದ ಗೋವುಗಳನ್ನು ರಕ್ಷಿಸಿ ವೀರಮರಣ ಹೊಂದಿದ ಕೈಸೋಡಿ ಗ್ರಾಮದ ವೀರ ಹಾಗೂ ಆತನ ಮಕ್ಕಳು ಕೆರೆ ಹಾಗೂ ದೇಗುಲವನ್ನು ಕಟ್ಟಿಸಿದ್ದರ ಉಲ್ಲೇಖವಿದ್ದು, ಕೈಸೋಡಿ ಗ್ರಾಮದ ಹೆಸರು ಕೆಸೈರ್ವಂ ಎಂದು ಉಲ್ಲೇಖವಿದೆ. ಶಾಸನದ ಮುಂಭಾಗದಲ್ಲಿ ೯ ಸಾಲುಗಳಲ್ಲಿ ಹಾಗೂ ಹಿಂಭಾಗದಲ್ಲಿ ೧೨ ಸಾಲುಗಳಲ್ಲಿ ಶಾಸನ ಪಾಠವಿದ್ದು, ಶಾಸನದ ಶೇಕಡ ೬೦ ಭಾಗ ಸವೆದಿದೆ.

ಶಾಸನ ಪತ್ತೆಯಾದ ಸ್ವಲ್ಪ ದೂರದಲೇ ಕೆರೆ ಹಾಗೂ ಒಂದು ಶಿವಾ ಲಯವಿದ್ದು ಶಾಸನದ ಸಾಲುಗಳನ್ನು ಪುಷ್ಟೀಕರಿಸು ತ್ತದೆ. ಶಾಸನ ತಜ್ಞರಾದ ಡಾ.ಜಗದೀಶ್ ಅಗಸೇ ಬಾಗಿಲು ಶಾಸನ ಪಾಠವನ್ನು ಓದಿ ಸಹಕರಿಸಿದ್ದು, ಇತಿಹಾಸ ಸಂಶೋಧಕರಾದ ರಮೇಶ್ ಕಾರಂತ್ ಅವರು ಕ್ಷೇತ್ರಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದಾರೆ.


ಸಚಿನ್ ಉಳವಿ ಹಾಗೂ ಕುಮಾರ್ ಕೈಸೋಡಿ ಶಾಸನ ಪತ್ತೆ ಹಚ್ಚಲು ಅವಿನಾಶ್ ಚಕ್ರಸಾಲಿ ಅವರಿಗೆ ಸಹಕರಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!