ಶಿವಮೊಗ್ಗ,
ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅತ್ಯುತ್ತಮ ಅಭೂತಪೂರ್ವ ಕೆಲಸ ಮಾಡಿದ್ದು, ಕಾಂಗ್ರೆಸ್ಸಿಗರು ವಿನಾಕಾರಣ ವಿವಾದ ಎಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ಎನ್.ಚನ್ನಬಸಪ್ಪ (ಚೆನ್ನಿ) ಆರೋಪಿಸಿದರು.


ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋ ಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕಕ್ಕೆ ಸಂಬಂಧಿ ಸಿದಂತೆ ನಾಡಿನಾದ್ಯಂತ ಕಾಂಗ್ರೆಸ್ ಮತ್ತು ಕೆಲವು ಸಾಹಿತಿಗಳು ವಿರೋಧದ ಮಾತುಗಳನ್ನಾಡುತ್ತಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದು ಅವರಿಗೆ ಇಷ್ಟವಿಲ್ಲ. ಬ್ರಿಟಿಷರು ಬಿಟ್ಟುಹೋದ ಸಂಗತಿಗ ಳನ್ನೇ ಪಠ್ಯದಲ್ಲಿ ಮುಂದುವರೆಸಲು ಇಚ್ಛಿಸುತ್ತಿದ್ದಾರೆ. ರೋಹಿತ್ ಚಕ್ರತೀರ್ಥರವರನ್ನು ಬಂಧಿಸಬೇಕೆಂದು ಕೂಗಾಡುತ್ತಿದ್ದಾರೆ. ಆದರೆ, ಚಕ್ರತೀರ್ಥರು ಭಾರತೀಯ ಪರಂಪರೆ, ಸಂಸ್ಕೃತಿ, ಇತಿಹಾಸದ ಸತ್ಯಸಂಗತಿಗಳನ್ನ ಪಠ್ಯಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ ಎಂದರು.


ಈ ದೇಶದಲ್ಲಿ ಕಾಂಗ್ರೆಸ್ ಇದೂವರೆಗೂ ಯಾವುದೇ ಪೂರಕವಲ್ಲದ, ಬೇಡವಲ್ಲದ, ಮಾರಕವೆ ನಿಸುವ ಪಠ್ಯಗಳನ್ನೇ ತುರುಕಿದ್ದಾರೆ. ಶ್ರೀರಾಮನನ್ನೇ ಟೀಕಿಸಿದ್ದಾರೆ. ಮಕ್ಕಳ ಭವಿಷ್ಯದ ಜೊತೆ ಆಟವಾಡಿದ್ದಾರೆ. ಮೂರು ಬಾರಿ ಪಠ್ಯಪುಸ್ತಕಗಳ ಪರಿಷ್ಕರಣೆಯಾಗಿದೆ. ಅದೇ ರೀತಿ ಈಗಲೂ ಆಗುತ್ತಿದೆ ಅಷ್ಟೆ. ರಚನಾ ಸಮಿತಿ, ನಂತರ ಪರಿಶೀಲನೆ, ನಂತರ ಪರಿಷ್ಕರಣೆ ಇವೆಲ್ಲವೂ ಸಹಜವಾದ ಪ್ರಕ್ರಿಯೆಗಳು. ಈ ದೇಶದ ನಿಜವಾದ ವಿಚಾರವನ್ನ ಪಠ್ಯಪುಸ್ತಕಗಳಲ್ಲಿ ಸೇರಿಸುವುದು ಯಾವ ತಪ್ಪು ಎಂದು ಪ್ರಶ್ನೆ ಮಾಡಿದರು.


ಕಾಂಗ್ರೆಸ್ ವಂದೇ ಮಾತರಂ ಗೀತೆಯನ್ನು ತುಂಡರಿಸಿದೆ. ಧರ್ಮದ್ರೋಹದಂತಹ ಕೆಲಸ ಮಾಡಿದ. ಮೌಲ್ಯಗಳನ್ನ ನಾಶಮಾಡಿದೆ. ಶ್ರೇಷ್ಠತೆಯನ್ನ ತಿಳಿಸುವಲ್ಲಿ ವಿಫಲವಾಗಿದೆ. ಹೀಗಿರುವಾಗ ಈಗ ಯಾವ ನೈತಿಕ ಆಧಾರದಲ್ಲಿ ಪಠ್ಯಪುಸ್ತಕಗಳ ಬಗ್ಗೆ ಮಾತನಾಡುತ್ತಾರೆ ? ಸಿದ್ದರಾಮಯ್ಯ ಅವರು ದೊಡ್ಡ ಕಳಂಕವಾಗಿದ್ದಾರೆ. ಕೆಲವು ಸಾಹಿತಿಗಳು ತಮ್ಮ ಪ್ರಶಸ್ತಿಯನ್ನೇ ವಾಪಾಸ್ಸು ಮಾಡುತ್ತಿದ್ದಾರೆ ಎಂದರು.


ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಇಲ್ಲದ ಉಸಾಬರಿಯ ಮಾತನಾಡುತ್ತಿ ದ್ದಾರೆ. ಅವರು ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು. ಹೀಗೆಯೇ ಅವರು ಮುಂದುವರೆದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಚಕ್ರತೀರ್ಥರ ಬಗ್ಗೆ ಮಾತನಾಡಿದರೆ ಅವರ ಚಕ್ರವೇ ಬದಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ್, ಜ್ಞಾನೇಶ್ವರ್, ನಾಗರಾಜ್ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!