ಶಿವಮೊಗ್ಗ, ಜೂ.01:
ಇಲ್ಲೊಂದು ಡಿಫರೆಂಟ್ ಘಟನೆ ನಡೆದಿದೆ. ಇಬ್ಬರೂ ಸರ್ಕಾರಿ ಉದ್ಯೋಗಿಗಳು. ಬದುಕಿಗೇನೂ ಕಷ್ಟವಿಲ್ಲ. ಮನಸಾರೆ ಇಷ್ಟಪಟ್ಟಿದ್ದಾರೆ. ಕಟ್ಟಿಕೊಂದು ಹೊಸ ಬದುಕು ರೂಪಿಸಿಕೊಳ್ಳಲು ನಿರ್ಧರಿಸಿದ್ದಾರೆ. ಮದುವೆಯಾಗಿದ್ರೆ ಮುಗಿಯುತ್ತಿತ್ತು. ಆದರೂ ಇಬ್ಬರೂ ಒಟ್ಟಾಗಿ ವಿಷ ಸೇವಿಸಿದ್ದಾರೆ. ಕಾರಣ ಮದುವೆಗೆ ಮನೆಯರು ಒಪ್ಪಿಲ್ಲವಂತೆ…!
ಒಳ್ಳೆ ಉದ್ಯೋಗದಲ್ಲಿರುವ ಇವರೇ ಬದುಕು ಕಟ್ಟಿಕೊಳ್ಳಬಹುದಿತ್ತು. ಜಾತಿ ಅಡ್ಡ ಬಂದಿರಬೇಕು. ಮನೆಯವರು ಒಪ್ಪಿಲ್ಲ. ವಿಷ ಸೇವಿಸಿದ್ದಾರೆ.
ಈ ಇಬ್ಬರು ಸರ್ಕಾರಿ ನೌಕರರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಯಲ್ಲಿ ಮದುವೆಗೆ ಒಪ್ಪದ ಹಿನ್ನಲೆಯಲ್ಲಿ ಇಬ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಘಟನೆ ವಿವರ ಇಂತಿದೆ
ತೀರ್ಥಹಳ್ಳಿ ಪೊಲೀಸ್ ಠಾಣೆಯ ಮಹಿಳಾ ಉದ್ಯೋಗಿ (ಕಾನ್ಸ್ ಸ್ಟೇಬಲ್) ಹಾಗೂ ಬೆಳಗಾವಿ ಮೂಲದ ಪ್ರವೀಣ ಎಂಬ ಅರಣ್ಯ ಫಾರೆಸ್ಟರ್ ಇಬ್ವರು ಆತ್ಮಹತ್ಯೆಗೆ ಯತ್ನಿಸಿ ಮೆಗ್ಗಾನ್ ಗೆ ದಾಖಲಾಗಿದ್ದಾರೆ.
ನಿನ್ನೆ ರಾತ್ರಿ 7.30ರ ಸಮಯದಲ್ಲಿ ತೀರ್ಥಹಳ್ಳಿ ಪಿಸಿ ಮತ್ತು ಪ್ರವೀಣ ಭದ್ರಾವತಿ ಆರ್ ಎಂಸಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕಳೆದ 6 ವರ್ಷಗಳಿಂದ ಇವರು ಪ್ರೀತಿಸುತ್ತಿದ್ದು ಮನೆಯವರ ಒಪ್ಪಿಗೆ ಇಲ್ಲದೆ ಇದ್ದುದರಿಂದ ಈ ಕೃತ್ಯಕ್ಕೆ ಕೈಹಾಕಿದ್ದಾರೆ ಎನ್ನಲಾಗಿದೆ.
ಯುವತಿ ಭದ್ರಾವತಿ ತಾಲ್ಲೂಕು ಕಲ್ಲಾಪುರ ವಾಸಿಯಾಗಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಡಬ್ಲೂ ಪಿ ಸಿ ಆಗಿದ್ದಾರೆ. ಮತ್ತು ಪ್ರವೀಣ ತೀರ್ಥಹಳ್ಳಿಯಲ್ಲಿ ಅರಣ್ಯ ಸಿಬ್ಬಂದಿಯಾಗಿದ್ದು ಸ್ವಂತ ಊರು ಸಂಕೇಶ್ವರ ಬೆಳಗಾವಿ ಜಿಲ್ಲೆಯವರಾಗಿದ್ದಾರೆ.
ಇವರು ಒಟ್ಟಿಗೆ ವಿಷವನ್ನು ಕುಡಿದಿರುತ್ತಾರೆ.
ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಿ ಕೊಟ್ಟಿರುತ್ತಾರೆ ಭದ್ರಾವತಿ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.