ಶಿವಮೊಗ್ಗ ಮೇ.31:
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಒಂದಿಷ್ಟು ಕಡಿಮೆಯೇನೋ ಆಯ್ತು ನಿಜ. ಆದರೆ, ಇದು ಪೆಟ್ರೋಲ್ ಬಂಕ್ ಮಾಲಿಕರಿಗೆ ಹೆಚ್ಚಿನ ಹೊರೆ ನೀಡಿದೆ. ಅವರ ಬಳಿ ಇರುವ ಸಂಗ್ರಹದ ಪೆಟ್ರೋಲನ್ನ ಕಡಿಮೆ ಬೆಲೆಗೆ ಮಾರಬೇಕಾದ ಪರಿಸ್ಥಿತಿ ತಂದ ಹಿನ್ನೆಲೆಯಲ್ಲಿ ಇಂದು ನಗರದ ಎಲ್ಲಾ ಬಂಕ್ ಗಳು ಬಾಗಿಲು ಹಾಕಲು ನಿರ್ಧರಿಸಿವೆಯಂತೆ….!
ಹೀಗೊಂದು ಸುದ್ದಿ ಹರಡಿದಾಕ್ಷಣ ಶಿವಮೊಗ್ಗ ನಗರದ ಎಲ್ಲಾ ಬಂಕ್ ಗಳ ಬಳಿ ಜನರೋ ಜನ.
ಸಾಕಷ್ಟು ದೂರದ ಸರದಿ ಸಾಲುಗಳಲ್ಲಿ ನಿಂತು ವಾಹನ ಹಾಗೂ ಕ್ಯಾನ್ ಗಳಿಗೆ ಪೆಟ್ರೋಲ್ ಮತ್ತು ಡಿಸೇಲ್ ತುಂಬಿಸಿಕೊಳ್ತಿದ್ದ ಚಿತ್ರಣ ನಿನ್ನೆ ರಾತ್ರಿ ಎಂಟು ಮುವತ್ತರಿಂದ ಹನ್ನೊಂದರ ವರೆಗೆ ನಡೆದಿದೆ.
ಇಂದು ಪೆಟ್ರೋಲ್ ಬಂಕ್ ಮಾಲೀಕರು ಪೆಟ್ರೋಲ್ ಮತ್ತು ಡಿಸೇಲ್ ದರಗಳನ್ನ ದಿಡೀರನೇ ಇಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಲಕ್ಷಾಂತರ ರೂ ನಷ್ಟವಾಗುತ್ತಿದೆ ಎಂಬ ಆರೋಪ ಮಾಡಿರುವ ಹಿನ್ನಲೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇದರ ಜೊತೆ ಕಮಿಷನ್ ಏರಿಸಬೇಕು ಎಂಬ ಬೇಡಿಕೆಯೂ ಸೇರಿದಂತೆ ಇತರೆ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ.
ಇಂದು ಬಂಕ್ ಗಳು ಒಪನ್ ಮಾಡೋದು ಕಷ್ಟ ಎನ್ನಲಾಗಿದೆ. ಈ ವಿಷಯ ತಿಳಿದು ಭೀತಿಗೆ ಬಿದ್ದ ಜನ ಕ್ಯಾನ್ ಗಳನ್ನ ಹಿಡಿದುಕೊಂಡು ಬಂದು ತೈಲಗಳನ್ನ ತುಂಬಿಸಿಕೊಂಡು ಹೋಗುತ್ತಿದ್ದರು.
ಬಹಳಷ್ಟು ಬಂಕ್ ಗಳು ಒಂಬತ್ತು ಮುವತ್ತರ ಹೊತ್ತಿಗೆ ಬಾಗಿಲು ಹಾಕಿದ್ದವು. ಜನ ಸಾಲು ಸಾಲಾಗಿ ಬಂದು ಪೆಟ್ರೋಲ್ ಸಿಗದೇ ಆಕ್ರೋಶದಿಂದಲೇ ಮನೆಗೆ ಹೋಗುತ್ತಿದ್ದರು.