ಶಿವಮೊಗ್ಗ, ಮೇ.30:
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ನಡೆಸುವ ನೇಮಕಾತಿ ಪರೀಕ್ಷೆಯ ಅಂತಿಮ ಫಲಿತಾಂಶ ಇಂದು ಸಂಜೆ ಪ್ರಕಟವಾಗಿದ್ದು 641 ನೇ ಅಭ್ಯರ್ಥಿಯಾಗಿ ಶಿವಮೊಗ್ಗದ ಡಾ.ಪ್ರಶಾಂತ್ ಕುಮಾರ್ ಬಿ.ಓ ಅವರು ಆಯ್ಕೆಯಾಗಿದ್ದಾರೆ.


ಈ ಬಾರಿ ಶ್ರುತಿ ಶರ್ಮಾ ಯುಪಿಎಸ್ ಸಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಅಂಕಿತಾ ಅಗರ್ವಾಲ್ 2ನೇ Rank, ಗಾಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಪರೀಕ್ಷೆಯಲ್ಲಿ ಕರ್ನಾಟಕದ 25 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಅವಿನಾಶ್ ಬಿ 31ನೇ ರRank, ಬೆನಕ ಪ್ರಸಾದ್ ಎನ್ ಜಿ 92ನೇ , ಮೆಲ್ವಿನ್ ವರ್ಗಿಸ್ 118 , ನಿಕಿಲ್ ಬಸವರಾಜ್ ಪಾಟೀಲ್ 139ನೇ , ವಿನಯ್ ಕುಮಾರ್ 151ನೇ , ಚಿತ್ರರಂಜನ್ ಎಸ್ 155ನೇ Rank, ಅಪೂರ್ವ ಬಾಸೂರ್ 191ನೇ , ಮನೋಜ್ ಆರ್ ಹೆಗ್ಡೆ 213ನೇ ,


ಮಂಜುನಾಥ್ ಆರ್ 219ನೇ , ರಾಜೇಶ್ ಪೊನ್ನಪ್ಪ 222ನೇ , ಕಲ್ಪಶ್ರೀ ಕೆ ಆರ್ 219ನೇ, ಹರ್ಷವರ್ಧನ್ 318ನೇ , ಗಜಾನನ ಬಾಲೆ 319ನೇ rank ಹಾಗೂ ಶಿವಮೊಗ್ಗದ 641 ನೇ Rank ನಲ್ಲಿ ಶಿವಮೊಗ್ಗದ ಡಾ.ಪ್ರಶಾಂತ್ ಕುಮಾರ್ ಬಿ.ಒ ತೇರ್ಗಡೆಯಾಗಿದ್ದಾರೆ.

ಡಾ. ಪ್ರಶಾಂತ್ ಶಿವಮೊಗ್ಗ ನಗರದ BH ರಸ್ತೆಯ ಸರಕಾರಿ ಜೂನಿಯರ್ ಕಾಲೇಜಿನ ಉಪನ್ಯಾಸಕ ಓಂಕಾರಪ್ಪ ಹಾಗೂ ಗೃಹಿಣಿ ಗೀತಾ ಅವರ ಪುತ್ರರಾಗಿದ್ದಾರೆ.
ನಗರದ ಸಿಮ್ಸ್‌ನಲ್ಲಿ ಮೆಡಿಕಲ್‌ನ್ನು 2020 ರಲ್ಲಿ ಮುಗಿಸಿದ ನಂತರ ಯುಪಿಎಸ್‌ಸಿ ಪರೀಕ್ಷೆ ಬರೆದು ಪ್ರಥಮ ಯತ್ನದಲ್ಲೇ ರ್‍ಯಾಂಕ್ ಮೂಲಕ ಯಶಸ್ವಿಯಾಗಿರುವುದು ವಿಶೇಷ.

By admin

ನಿಮ್ಮದೊಂದು ಉತ್ತರ

error: Content is protected !!