ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್ ಖಡಕ್ ಸೂಚನೆ

ಶಿವಮೊಗ್ಗ, ಮೇ.28:
ಕಳೆದ 20 ವರ್ಷಗಳಿಂದ ಬೊಮ್ಮನಕಟ್ಟೆಯಲ್ಲಿ ಆಶ್ರಯ ನಿವೇಶನ ಪಡೆದು ಇಲ್ಲಿಯವರೆಗೂ ಆ ಯೋಜನೆಯನ್ನು ಸಮರ್ಪವಾಗಿ ಬಳಸಿಕೊಳ್ಳದೆ ಕಾಲಿಯಾಗಿಯೇ ಬಿಟ್ಟಿರುವ ನಿವೇಶನಗಳನ್ನು ರದ್ದುಗೊಳಿಸಿ ಅವುಗಳನ್ನು ಹೊಸ ನಿವೇಶನಾಕಾಂಕ್ಷಿಗಳಿಗೆ ಅರ್ಹತೆಯ ಆಧಾರದ ಮೇಲೆ ನೀಡಲು ಆಶ್ರಯ ಸಮಿತಿ, ಸ್ಥಳೀಯ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ತೀರ್ಮಾನಿಸಿದೆ.


ಈಗಾಗಲೇ ನಿವೇಶನ ನೀಡಿ ಎರಡು ದಶಕಗಳಷ್ಟು ವರ್ಷವಾಗುತ್ತಿದ್ದರೂ ಸಹ ಖಾಲಿಯಾಗಿ ಬಿಟ್ಟಿರುವುದರಿಂದ ಇಲ್ಲಿ ಕೆಲ ಕಿಡಿಗೇಡಿಗಳು ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ಅಕ್ರಮವಾಗಿ ನಿವೇಶನಗಳನ್ನು ಬಡ-ಬಗ್ಗರಿಗೆ ಮಾರಿ ಮೋಸ ಮಾಡುತ್ತಿರುವ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಈಗಾಗಲೆ ನಡೆಸಿರುವ ಖಾಲಿ ನಿವೇಶನಗಳ ಗುರುತಿಸುವಿಕೆಯನ್ನು ಮತ್ತೊಮ್ಮೆ ಪುನರ್ ಪರಿಶೀಲನೆ ನಡೆಸಿ ಅವುಗಳನ್ನು ಸಮರ್ಪಕವಾಗಿ ಕ್ರೂಢಿಕರಿಸುವ ಮೂಲಕ ಖಾಲಿ ನಿವೇಶನಗಳ ಖಾತೆಯನ್ನು ರದ್ದುಗೊಳಿಸಲು ಶಾಸಕರು ಸೂಚಿಸಿದರು.
ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್ ಅವರ ನೇತೃತ್ವದಲ್ಲಿ ಅದಷ್ಟು ಬೇಗನೆ ಮುಗಿಯಬೇಕು. ಖಾಲಿ ಹಾಗೂ ಅಕ್ರಮ ನಿವೇಶನಗಳನ್ನು ರದ್ದುಮಾಡುವ ಜೊತೆಗೆ ಬೊಮ್ಮನಕಟ್ಟೆಯ ಆಶ್ರಯ ನಿವೇಶನದಲ್ಲಿ ನಡೆಯುತ್ತಿರುವ ನಕಲಿ ದಾಖಲೆ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ಸೂಚಿಸಿದರು.

ಹೊಸ ಮನೆಗಳ ನಿರ್ಮಾಣದ ಟೆಂಡರ್‌ದಾರರಿಗೆ ಕೊನೆ ಎಚ್ಚರಿಕೆ

ಶಿವಮೊಗ್ಗ ಗೋಪಶೆಟ್ಟಿಕೊಪ್ಪ ಹಾಗೂ ಗೋವಿಂದಾಪುರದಲ್ಲಿ ಸುಮಾರು ೪ವರೆ ಸಾವಿರದಷ್ಟು ಜಿ+2 ಮಾದರಿಯ ಮನೆಗಳು ನಿರ್ಮಾಣವಾಗಬೇಕಿದೆ. ಹಾಲಿ ಟೆಂಡರ ಪಡೆದಿರುವ ಗುತ್ತಿಗೆದಾರರು ಕೇವಲ ೨೫೬ ಮನೆಗಳನ್ನಷ್ಟೆ ನಿರ್ಮಿಸಿದ್ದಾರೆ. ಹಾಗಾಗಿ ಅವರಿಗೆ ಸ್ಪಷ್ಟ ಹಾಗೂ ಕೊನೆಯ ಸೂಚನೆ ನೀಡಿದ ಆದಷ್ಟು ಬೇಗನೆ ಮನೆಗಳ ಕಾರ್ಯ ಮುಗಿಸಬೇಕೆಂದು ಶಾಸಕರು ಎಚ್ಚರಿಕೆ ನೀಡಿದರು.


ರೈತರಿಗೆ ಬಾಕಿ ಹಣ ನೀಡಲು ತೀರ್ಮಾನ


ಆಶ್ರಯ ನಿವೇಶನಗಳಿಗಾಗಿ ಸಾಕಷ್ಟು ಜಮೀನು ನೀಡಿರುವ ರೈತರ ಹಣವನ್ನು ಸಕಾಲದಲ್ಲಿ ನೀಡಬೇಕಿತ್ತು. ಆದರೆ ಆ ಹಣವನ್ನು ನೀಡುವಲ್ಲಿ ವಿಳಂಬವಾಗಿದೆ. ಕೂಡಲೇ ರೈತರ ಎಲ್ಲಾ ಬಾಕಿ ಹಣವನ್ನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.


ಶಿವಮೊಗ್ಗ ಗೋಪಶೆಟ್ಟಿಕೊಪ್ಪ ಹಾಗೂ ಗೋವಿಂದಾಪುರದಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಮನೆಗಳ ಜಾಗಕ್ಕೆ ಅಗತ್ಯವಿರುವ ನೀರಿನ ಹಾಗೂ ವಿದ್ಯುತ್ ಸೌಕರ್ಯದ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಅದಷ್ಟು ಬೇಗ ಮುಗಿಸಲು ಈಶ್ವರಪ್ಪ ಸೂಚಿಸಿದರು.
ಸಭೆಯಲ್ಲಿ ಆಯುಕ್ತ ಮಾಯಣ್ಣಗೌಡ, ಆಶ್ರಯ ಸಮಿತಿ ಅಧ್ಯಕ್ಷ ಎಸ್.ಶಶಿಧರ್, ಸದಸ್ಯರು, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!