ಶಿವಮೊಗ್ಗ,ಏ.30:
ಶಿವಮೊಗ್ಗ ನಗರದ ತುಂಗಾ ನಗರ ಪೊಲೀಸ್ ಠಾಣೆ ಪಕ್ಕದಲ್ಲಿಯೇ 11 ಕೆ ವಿ ವಿದ್ಯುತ್ ಕಂಬಗಳು ಹರಿದು ಹೋಗಿವೆ. ಅದರಲ್ಲಿ ಠಾಣೆ ಸಮೀಪದ ಕಂಬವೊಂದು ಕೊನೆ ದಿನಗಳನ್ನು ಎಣಿಸುತ್ತಿದೆ. ಫೋಟೋ ದಲ್ಲಿ ಕಾಣುವ ಈ ಕರೆಂಟ್ ಕಂಬ ಸಧ್ಯದಲ್ಲಿಯೇ ಮುರಿದು ಬೀಳುವುದು ಗ್ಯಾರಂಟಿ.
ಆದರೆ ಇದು ಇಲ್ಲಿಯವರೆಗೂ ಮೆಸ್ಕಾಂ ನವರ ಕಣ್ಣಿಗೆ ಬೀಳದೆ ಇರುವುದು ದುರಂತ. ಈ ಮೆಸ್ಕಾಂ ನವರು ಯಾರಾದ್ದಾದರೂ ಪ್ರಾಣ ಹೋದಮೇಲೆ ಎಚ್ಚೆತ್ತು ಕೊಳ್ಳಬಹುದೇನೋ ಎಂಬ ಅನುಮಾನ ಕಾಣುತ್ತಿದೆ.
ಪ್ರತಿದಿನ ಸಾವಿರಾರು ಜನ ಇಲ್ಲಿನ ಪೊಲೀಸ್ ಠಾಣೆಗೆ ಬರುತ್ತಾರೆ ಹಾಗೂ ಇದು ಹೈವೇ ರಿಂಗ್ ರೋಡ್ ಸಹ ಆಗಿದೆ. ಹೌದು ಇಲ್ಲಿ ಪ್ರತಿ ದಿನ ಸಾವಿರಾರು ಜನ ವಾಹನ ಓಡಾಡುವ ರಾಜ ಮಾರ್ಗ ಸಹ ಆಗಿದ್ದು ದುರಂತ ಸಂಬವಿಸುವ ಮುನ್ನ, ಪ್ರಾಣ ಹೋಗುವ ಮೊದಲು ಕೆ ಈ ಬಿ ಯವರು ಈ ಕಂಬ ಸರಿ ಮಾಡಬೇಕು ಎಂಬುದು ಇಲ್ಲಿನ ನಾಗರಿಕರು ಹಾಗೂ ಪೋಲೀಸರ ಒತ್ತಾಯ.
–
ಡೇಂಜರಸ್ ಗುಂಡಿ, ಹೊಸನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ….?!
ಹೊಸನಗರ,ಏ.30: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಹನಿಯ ಶಾಲೆಯ ಎದುರು ಅವೈಜ್ಞಾನಿಕ ಕಾಮಗಾರಿಯ ಕಾರಣದಿಂದ ಮೊನ್ನೆ ಬಿದ್ದ ಸಣ್ಣ ಮಳೆಗೇ ಇಡೀ ರಸ್ತೆ ಹಾಳಾಗಿದೆ. ಸೇತುವೆ ಮಾಡಿ ಕಲ್ಲು ಕಟ್ಟದೆ ಮಣ್ಣು ಹೊಯ್ದ ಪರಿಣಾಮ ಎದುರು ಬರುವ ವಾಹನಕ್ಕೆ ದಾರಿ ಬಿಡಲು ಸ್ವಲ್ಪ ಪಕ್ಕ ಸರಿದರೂ ಖೆಡ್ಡಾಕ್ಕೆ ಬೀಳುವುದು ಖಚಿತ.
ತಕ್ಷಣ ಸಂಬಂಧಪಟ್ಟವರ ಗಮನಕ್ಕೆ ತಂದು ಸರಿಪಡಿಸಿ. ದುರಂತವೆಂದರೆ ಹೊಸನಗರ ತಾಲೂಕಿನಲ್ಲಿ ಇಬ್ಬರು ಸ್ಟಾಂಡರ್ಡ್ ಶಾಸಕರಿದ್ದಾರೆ. ಈಗ ಒಬ್ಬರು ಗೃಹಸಚಿವರು ಹಾಗೂ ಇನ್ನೊಬ್ಬರು ಎಂಎಸ್ ಐಎಲ್ ಅಧ್ಯಕ್ಷರು. ಈ ಹರತಾಳು ಹಾಲಪ್ಪ ಹಾಗೂ ಆರಗ ಜ್ಞಾನೇಂದ್ರ ಅವರು ಇದ್ರೇನು ಭಾಗ್ಯ. ಇದು ಹೊಸನಗರ ತಾಲೂಕಿನಿಂದ ಕೇವಲ ಸುಮಾರು 10 ಕಿಲೋಮೀಟರ್ ಅಂತರದಲ್ಲಿನ ಮುಖ್ಯ ರಸ್ತೆಯಾದರೂ ಈ ಜನಪ್ರತಿನಿದಿನಗಳ ಕಣ್ಣಿಗೆ ಬೀಳದೆ ಇರುವುದು ದುರಂತವೇ ಹೌದು.
ಚಿತ್ಹ ಮಾಹಿತಿ: ನಗರ ನಾಗೇಶ್