ಬೆಂಗಳೂರಿನ ಪ್ರತಿಷ್ಠಿತ ಕೃಷ್ಣಯ್ಯಶೆಟ್ಟಿ ಆಭರಣ ಸಂಸ್ಥೆಯಿಂದ ಚಿನ್ನಾಭರಣ ಮೇಳ ಉತ್ತರ-ದಕ್ಷಿಣ ಭಾರತದ ಸಾಂಪ್ರದಾಯಿಕ ಒಡವೆಗಳ ಸಂಗ್ರಹ

ಶಿವಮೊಗ್ಗ, ಏ.22:
ಬೆಂಗಳೂರಿನ ಪ್ರತಿಷ್ಠಿತ ಚಿನ್ನ-ಬೆಳ್ಳಿ, ವಜ್ರ ವ್ಯಾಪಾರಿಗಳಾದ ಶ್ರೀ ಕೃಷ್ಣಯ್ಯಶೆಟ್ಟಿ ಗ್ರೂಪ್ ವತಿಯಿಂದ ಇಂದು ನಗರದ ರಾಯಲ್ ಆರ್ಕಿಡ್ ನಲ್ಲಿ ಆಯೋಜಿಸಿದ್ದ ವಜ್ರ, ಬಂಗಾರ ಹಾಗೂ ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹಾಗೂ ಅಖಿಲ ಭಾರತ ವೀರಶೈವ ಸಮಾಜದ ರಾಜ್ಯಾಧ್ಯಕ್ಷೆ ಎಸ್.ವೈ. ಅರುಣಾದೇವಿ ಚಾಲನೆ ನೀಡಿದರು.


ಇಂದಿನಿಂದ ಏ.೨೪ರ ವರೆಗೆ ಮೂರು ದಿನಗಳ ಕಾಲ ಆಯೋಜಿಸಿರುವ ಈ ಮೇಳದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಆಭರಣಗಳು ದೊರೆಯಲಿವೆ. ಬೆರಗುಗೊಳಿಸುವ, ರೋಮಾಂ ಚನ ನೀಡುವ ಸೃಜನಶೀಲತೆಯ ನವನವೀನ ವಿನ್ಯಾಸದ ಬಂಗಾರ, ಬೆಳ್ಳಿ, ವಜ್ರದ ಆಭರಣಗಳು ಇಲ್ಲಿ ಲಭ್ಯವಿದೆ.
ಹಾಗೆಯೇ ೧೫೦ ವರ್ಷಗಳ ಇತಿಹಾಸ ಶ್ರೀ ಕೃಷ್ಣಯ್ಯ ಶೆಟ್ಟಿ ಗ್ರೂಪ್‌ಗೆ ಇದ್ದು, ಈ ಸಂಸ್ಥೆಯು ೧೮೬೯ರಲ್ಲಿ ಪ್ರಾರಂಭಗೊಂಡಿದೆ. ವಿಶ್ವದಾದ್ಯಂತ ಗ್ರಾಹಕರ ವಿಶ್ವಾಸಗಳಿಸಿದ್ದು, ೧೫೦ ವರ್ಷಗಳ ಸಂಸ್ಥೆ ಪೂರೈಸಿದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಯಾಗಿ ೧೦೦ ಗ್ರಾಂ. ಚಿನ್ನ ಕೊಂಡರೆ ಅದರಲ್ಲಿ ೧೦ ಗ್ರಾಂ. ಚಿನ್ನಕ್ಕೆ ಪ್ರತಿ ಗ್ರಾಂ.ಗೆ ೧೮೬೯ ರೂ.ಗಳನ್ನು ಮಾತ್ರ ಪಡೆಯಲಾಗುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.


ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯೂ ರಿಯಾಯಿತಿ ದರದೊಂದಿಗೆ ಒಡವೆಗಳನ್ನು ಮಾರಾಟ ಮಾಡುತ್ತಿರುವುದು ವಿಶೇಷವಾಗಿದೆ. ಎಂದರು.
ಪ್ರದರ್ಶನ ಮತ್ತು ಮೇಳಕ್ಕೆ ಚಾಲನೆ ನೀಡಿದ ಎಸ್.ವೈ. ಅರುಣಾದೇವಿ ಮಾತನಾಡಿದರು.

ಇದು ಕೃಷ್ಣಯ್ಯಶೆಟ್ಟಿ ಚಿನ್ನಾಭರಣ ಮಳಿಗೆಯ ವಿಶೇಷ ಆಭರಣಗಳಲ್ಲೊಂದು. ಈ ಆಭರಣವು ನಕ್ಲೆಸ್ ಮಾದರಿಯದ್ದಾಗಿದ್ದು, ಇದರಲ್ಲಿ ನೀಲ ವಜ್ರ ಮತ್ತು ರೂಬಿ ಹಾಗೂ ಎಮರೆಲ್ಡ್ ಇವೆರೆಡರಿಂದ ಕೂಡಿದೆ. ಕಸುಮಲ ಎಂದರೆ ಸಾಕ್ಷಾತ್ ಲಕ್ಷ್ಮೀದೇವಿ ಧರಿಸುವ ಆಭರಣ. (ಸ್ವತಃ ಕೃಷ್ಣಯ್ಯಶೆಟ್ಟಿ ಸಂಸ್ಥೆಯೇ ತಯಾರಿಸಿದ್ದು, ಇದು ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣ. ವಿಶೇಷವಾಗಿ ಇದನ್ನು ಮದುವೆ ಹಾಗೂ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಬಳಸಲಾಗುತ್ತದೆ


ಕಾರ್ಯಕ್ರಮದಲ್ಲಿ ಸಂಸ್ಥೆಯ ಬ್ರಾಂಡ್ ಮುಖ್ಯಸ್ಥ ತೇಜಸ್, ಸ್ಟೋರ್ ಹೆಡ್‌ಗಳಾದ ಪ್ರಸಾದ್ ಮತ್ತು ಗೋಪಾಲ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಿಕರ್ತರ ಸಂಘದ ಖಜಾಂಚಿ ರಂಜಿತ್ ರಂಗಸ್ವಾಮಿ ಉಪಸ್ಥಿತರಿದ್ದರು.

.

By admin

ನಿಮ್ಮದೊಂದು ಉತ್ತರ

error: Content is protected !!