Tungataranga News, April 18, 2022 | SPECIAL NEWS
ವಿಶೇಷ ಬರಹ: ಗಜೇಂದ್ರ ಸ್ವಾಮಿ
ಯಡಿಯೂರಪ್ಪ ಅಂದ್ರೆ ಹಾಗೇ…, ಶಿವಮೊಗ್ಗ ಜಿಲ್ಲೆಯಷ್ಟೆ ಅಲ್ಲ ವಿಶೇಷವಾಗಿ ಶಿಕಾರಿಪುರ ಹಾಗೂ ಇಡೀ ರಾಜ್ಯದ ಅಭಿವೃದ್ಧಿ ಬಗ್ಗೆ ದಿನವಿಡೀ ಚಿಂತಿಸಿದವರು.
ಅಧಿಕಾರವಿರಲಿ, ಇಲ್ಲದಿರಲಿ ನಮ್ಮ ರಾಜ್ಯ, ಜಿಲ್ಲೆ, ನಮ್ಮೂರು ಎಂದೇ ಯೋಚಿಸುತ್ತಿದ್ದ ಅಲ್ಲಿನ ಬದುಕಿನ ಹಾಗೂ ಅಭಿವೃದ್ದಿ ಬಗ್ಗೆ ಯೋಚಿಸುತ್ತಿದ್ದ ಯಡಿಯೂರಪ್ಪ ಅವರ ಬಗ್ಗೆ ಜನರಿಗೆ ತಿಳಿ ಹೇಳುವುದೇ ಬೇಡ. ಜನರೆಲ್ಲರಿಗೂ ಅವರ ಕಾಳಜಿ, ಕಳಕಳಿ ಗೊತ್ತು.
ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಎಂದಾಕ್ಷಣ ಕೇಳಿ ಬರುವ ಒಂದರಡು ಹೆಸರುಗಳಲ್ಲಿ ಯಡಿಯೂರಪ್ಪ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ.
ಬಂಗಾರಪ್ಪ ಎಂದಾಕ್ಷಣ ತೋರುವ ವಿಶ್ವಾಸವನ್ನು ಕಾಗೋಡು ತಿಮ್ಮಪ್ಪ ಎಂದಾಕ್ಷಣ ಕಾಣುವ ಪ್ರೀತಿಯನ್ನು ಮಿಗಿಲಾದ ಕೆಲಸ ಮಾಡಿ ತೋರಿದ ಯಡಿಯೂರಪ್ಪ ಅವರಿಗೆ ಅವರೇ ಸಾಟಿಯಾಗಬಲ್ಲರಷ್ಟೇ..!
ಹಿಂದೆ, ಉಪಮುಖ್ಯಮಂತ್ರಿಯಾಗಿದ್ದ ದಿನದಿಂದ ಇಂದಿನ ನಿಕಟಪೂರ್ವ ಮುಖ್ಯಮಂತ್ರಿ ಅವಧಿಯವರೆಗೂ ಸಿಕ್ಕ ಕಡಿಮೆ ಅವಕಾಶಗಳಲ್ಲೂ ಶಿವಮೊಗ್ಗ ಜಿಲ್ಲೆಗೊಂದು ಹೊಸತನ ನೀಡಿದವರು.
ಕೋಮುಗಲಭೆ, ಹೊಡೆದಾಟ ಬಡಿದಾಟಗಳನ್ನು ಅತ್ಯಂತ ನಿಕೃಷ್ಟವಾಗಿ ಜಾಡಿಸಿದ ಯಡಿಯೂರಪ್ಪ ಅವರು ಯಾವುದೇ ಧರ್ಮ, ಆಚಾರ ವಿಚಾರಗಳಿಗೆ ಜೋತು ಬಿದ್ದವರಲ್ಲ. ಜಾತ್ಯಾತೀತ ಮನೋಭಾವದ ಯಡಿಯೂರಪ್ಪ ಅವರ ಹಿಂದೆ ಇಡೀ ಶಿವಮೊಗ್ಗ ಜನತೆ ಅಷ್ಟೇ ಅಲ್ಲ ರಾಜ್ಯದ ಜನ ನಿಲ್ಲುತ್ತಾರೆಂದರೆ ಅದು ಉತ್ಪೇಕ್ಷೆಯ ಮಾತಲ್ಲ.
ಈ ಪೀಠಿಕೆಗೆ ಕಾರಣವಿಷ್ಟೇ. ಯಡಿಯೂರಪ್ಪ ಹೇಗೆ ಅಂತ ಗೊತ್ತಾಗಲು ಕಾರಣ ಅವರಿಂದು ನಿಕಟಪೂರ್ವ ಮುಖ್ಯಮಂತ್ರಿ ಆಗಿದ್ದರೂ ಶಿವಮೊಗ್ಗಕ್ಕೆ ಬಂದಿದ್ದಾಗ ಆ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ನ ಕನಸಿನ ಶಿವಮೊಗ್ಗ ಅಭಿವೃದ್ಧಿಯ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸಿದರು. ಬೇಗ ಮುಗಿಸಲು ಸೂಚಿಸಿದರು.
ಸಂಸದ ಹಾಗೂ ಪುತ್ರ ರಾಘವೇಂದ್ರ ಸಾಥ್ ನೀಡಿದರು.
ಶಿವಮೊಗ್ಗದ ಸೊಗನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಇಂದು ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಸಂಸದರಾದ ಬಿ. ವೈ. ರಾಘವೇಂದ್ರ ಅವರು ಭೇಟಿ ನೀಡಿ ರನ್-ವೇ, ಎಪ್ರಾನ್, ಪ್ಯಾಸೆಂಜರ್ ಟರ್ಮಿನಲ್ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸೂಡಾ ಮಾಜಿ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್, ಪ್ರಮುಖರಾದ ಎನ್. ಜೆ. ರಾಜಶೇಖರ್ (ಸುಭಾಷ್), ಬಿ. ಆರ್, ಜಂಗಲ್ ಲಾಡ್ಜ್ ನಿರ್ದೇಶಕರಾದ ರಾಜೇಶ್ ಕಾಮತ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಸಂಪತ್ ಮತ್ತಿತರರು ಉಪಸ್ಥಿತರಿದ್ದರು.