Tunga Taranga news, April 18, 2022 | Special News SMG

ಅನ್ನದಾತನಿಗೆ ಸಹಕಾರಿ ಬ್ಯಾಂಕ್ ಗಳು ನೆರವಾಗು ತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಹೇಳಿದರು.

ಹಿಂದೆ ಅಧ್ಯಕ್ಷರಾಗಿದ್ದ ಮಹಾನುಭಾವರೊಬ್ಬರು ಡಿಸಿಸಿ ಬ್ಯಾಂಕ್ ಕೊಳ್ಳೆ ಹೊಡೆದು ಸುಮಾರು ೬೨ ಕೋಟಿ ರೂ.ಗೂ ಹೆಚ್ಚು ನಷ್ಟವನ್ನುಂಟು ಮಾಡಿದ್ದರು. ನಷ್ಟದಲ್ಲಿದ್ದ ಬ್ಯಾಂಕ್ ಅನ್ನು ಈಗಿನ ಅಧ್ಯಕ್ಷರು ಲಾಭದತ್ತ ತೆಗೆದುಕೊಂಡು ಹೋಗಿರುವುದು ಸಾಧನೆ ಯಾಗಿದೆ ಎಂದು ಹಿಂದಿನ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡರಿಗೆ ಪರೋಕ್ಷ ಟಾಂಗ್ ನೀಡಿದರು.

ವರು ಇಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ವಿತರಣೆ ಹಾಗೂ ವಿವಿಧ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಬ್ಯಾಂಕ್ ಗಳು ರೈತನಿಗೆ ನೆರವಾಗುತ್ತಲಿವೆ. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದು ನಮ್ಮ ಅಧಿಕಾರ ವಧಿಯಲ್ಲಿ ನಡೆದಿದೆ. ಆ ಮೂಲಕ ಅನ್ನದಾತನ ನೆರವಿಗೆ ಸಹಕಾರ ಬ್ಯಾಂಕ್‌ಗಳು ಪ್ರಥಮ ಆದ್ಯತೆ ನೀಡುತ್ತಿವೆ. ಇದರ ಜೊತೆಗೆ ಮಹಿಳೆಯರು ಸ್ವಾವಲಂಬನೆ ಮತ್ತು ಸ್ವಾಭಿಮಾನದಿಂದ ಬದುಕಲು ನೆರವು ನೀಡುತ್ತಿವೆ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರೈತರ ಜೀವನಾಡಿಯಾಗಿದೆ. ಒಂದು ಹಂತದಲ್ಲಿ ಇದು ವಿಶ್ವಾಸ ಕಳೆದುಕೊಂಡಿತ್ತು. ಆದರೆ, ಜನಸಾಮಾನ್ಯರು ಈಗ ಅತಿ ಹೆಚ್ಚು ಠೇವಣಿ ಇಡುವುದರ ಮೂಲಕ ಬ್ಯಾಂಕ್ ಗೆ ಪುನರುಜ್ಜೀವನ ನೀಡಿದ್ದಾರೆ. ರೈತರ ಏಳಿಗೆಗಾಗಿ ಶ್ರಮಿಸಬೇಕಾದ ಬ್ಯಾಂಕ್ ನಲ್ಲಿ ಅಹಿತಕರ ಘಟನೆಗಳು ನಡೆದಾದ ಅಹೋರಾತ್ರಿ ನಾವು ಧರಣಿ ನಡೆಸಿದ್ದು, ಇನ್ನೂ ನೆನಪಿದೆ. ಈಗ ಬ್ಯಾಂಕ್ ಮತ್ತೆ ಲಾಭದತ್ತ ಮುನ್ನುಗ್ಗುತ್ತಿರುವುದು ಸಂತೋಷದ ವಿಷಯ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣ ಗೌಡ ಸಹಕಾರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ೨೩ ಕೋಟಿ ರೂ. ಲಾಭಗಳಿ ಸಿರುವುದು ದಾಖಲೆಯಾಗಿದೆ. ಇದು ಅತ್ಯಂತ ವಿಶ್ವಾ ಸಾರ್ಹ ಬ್ಯಾಂಕ್ ಆಗಿದೆ. ಈಗ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ವಿತರಿಸುವ ಮೂಲಕ ಗಣಕೀಕರಣದ ಹಾದಿಯಲ್ಲಿದೆ. ಕಾಲ ಕಾಲಕ್ಕೆ ರೈತರಿಗೆ ಸಾಲ ನೀಡುವ ಮೂಲಕ ಮತ್ತು ವಸೂಲಾತಿ ಮೂಲಕವೂ ಬ್ಯಾಂಕ್ ಅಭಿವೃದ್ಧಿ ಸಾಧಿಸಿರುವುದಕ್ಕೆ ಅಭಿನಂದನೆಗಳು ಎಂದರು.


ಸಂಸದ ಬಿ.ವೈ. ರಾಘವೇಂದ್ರ ಶಾಸಕರಾದ ಹರತಾಳು ಹಾಲಪ್ಪ, ಕೆ.ಬಿ. ಅಶೋಕ್ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜು ನಾಥ್, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ. ಉಪಾಧ್ಯಕ್ಷ ಹೆಚ್. ಎಲ್.ಷಡಾಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಎಂಎಡಿಬಿ ಅಧ್ಯಕ್ಷ ಗುರು ಮೂರ್ತಿ, ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗ್ಡೆ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!