Tunga Taranga| April, 11, 2022 |Taluku News
ರಿಪ್ಪನ್ಪೇಟೆ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹದ ಕುರಿತು ದೂರು ದಾಖಲಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹೊಂಬುಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಗದ್ದೆ ಗ್ರಾಮದ ಯಲ್ಲದಕೋಣೆ ನಿವಾಸಿ ಪುಟ್ಟಪ್ಪ ಹಾಗೂ ಸರ್ವಮಂಗಳ ಅವರ ಪುತ್ರ ರಮೇಶ್ ಎಂಬುವವರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೆ. ಕರ್ನಾರ ಹಟ್ಟಿ ಗ್ರಾಮದ 14 ವರ್ಷದ ಬಾಲಕಿಯನ್ನು ಫೆಬ್ರವರಿ 27 ರಂದು ವಿವಾಹವಾಗಿದ್ದರು.

ಈ ಕುರಿತು ಹೊಸನಗರ ತಾಲ್ಲೂಕು ಸಿಡಿಪಿಒ ಕಚೇರಿಗೆ ದೂರವಾಣಿ ಮೂಲಕ ದೂರು ಆಧರಿಸಿ ಸಿಡಿಪಿಒ ದಿವ್ಯಾ ಎಚ್.ಡಿ. ತನಿಖೆ ನಡೆಸಿ ರಿಪ್ಪನ್ಪೇಟೆ ಠಾಣೆಯಲ್ಲಿ ಏಪ್ರಿಲ್ ೪ರಂದು ದೂರು ದಾಖಲಿಸಿದ್ದರು.

ಬಾಲ್ಯವಿವಾಹಕ್ಕೆ ಸಹಕರಿಸಿದ ಆರೋಪ ಸಂಬಂಧ ವರ ರಮೇಶ್, ತಾಯಿ ಸರ್ವಮಂಗಳ, ವಧುವಿನ ತಂದೆ ಆನಂದ್, ತಾಯಿ ಮುತ್ಯಾಲಮ್ಮ ಹಾಗೂ ಪುರೋಹಿತ, ಪ್ರಿಂಟಿಂಗ್ ಪ್ರೆಸ್ ಮಾಲೀಕ ಹಾಗೂ ಛಾಯಾಗ್ರಾಹಕರ ವಿರುದ್ಧ ಪ್ರಕರಣ ದಾಖಲಾಗಿದೆ.