ಶಿವಮೊಗ್ಗ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣದಲ್ಲಿ 21 ದಿನಗಳ ಈಜು, ಲಾನ್‍ಟೆನ್ನಿಸ್ ಹಾಗೂ ಸ್ಕೇಟಿಂಗ್ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.


ಇಂದು ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣದಲ್ಲಿ ತರಬೇತಿ ಶಿಬಿರ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣದಲ್ಲಿ ನಗರದಲ್ಲೇ ಏಕೈಕ ಅಂತರಾಷ್ಟ್ರೀಯ ಮಟ್ಟದ ಈಜುಕೊಳ, ಲಾನ್‍ಟನ್ನಿಸ್ ಮತ್ತು ಸ್ಕೇಟಿಂಗ್ ರಿಂಗ್ ಅಂಕಣಗಳು, ತೆರೆದ ವ್ಯಾಯಾಶಾಲೆಯನ್ನೊಳಗೊಂಡಿದೆ ಹಾಗೂ ಸುರಕ್ಷಿತವಾಗ ವಾಕಿಂಗ್ ಪಥ ಮತ್ತು ಜಿಮ್ ವ್ಯವಸ್ಥೆ ಇದೆ. ಹಾಗೂ ಸಿಂಥೆಟಿಕ್ ಲಾನ್ ಕೆಲಸ ಕೂಡ ಆಗುತ್ತಿದ್ದು ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ವಿಶೇಷ ಈಜು ಶಿಬಿರ: ನಗರದಲ್ಲಿರುವ ಅಂತರಾಷ್ಟ್ರೀಯ ಗುಣಮಟ್ಟದ ಏಕೈಕ ಈಜುಕೊಳ ಇದಾಗಿದ್ದು, ಇಲ್ಲಿ 1ನೇ ಶಿಬಿರವು ಏ.03 ರಿಂದ 26 ರವರೆಗೆ ಹಾಗೂ 2ನೇ ಶಿಬಿರವು ಮೇ 02 ರಿಂದ 26 ರವರೆಗೆ ತಲಾ 21 ದಿನ ವಿಶೇಷ ಈಜು ಶಿಬಿರ ಕೈಗೊಳ್ಳಲಾಗಿದೆ.


ಅಂತರಾಷ್ಟ್ರೀಯ ಗುಣಮಟ್ಟದ 5025 ಅಳತೆಯ 10 ಲೈನ್ಸ್‍ನ್ನು ಈಜುಕೊಳ ಹೊಂದಿದೆ. ಮಕ್ಕಳು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಸಮಯ ನಿಗದಿಯಾಗಿದೆ. ಮಕ್ಕಳಿಗೆ ಪ್ರತ್ಯೇಕ ಬೇಬಿ ಪೂಲ್ ಸಹ ಇದೆ. ನುರಿತ ಈಜು ತರಬೇತುದಾರರಿಂದ ತರಬೇತಿ ನೀಡಲಾಗುವುದು. 21 ದಿನಗಳ ವಿಶೇಷ ಈಜು ತರಬೇತಿ ಶಿಬಿರವನ್ನು ಹೊರತುಪಡಿಸಿ ಮಾಸಿಕ ತರಬೇತಿ ಶಿಬಿರವನ್ನು ಸಹ ನೀಡಲಾಗುವುದು. ವಾಹನ ಪಾರ್ಕಿಂಗ್, ಪ್ರತ್ಯೇಕ ಸ್ನಾನಗೃಹ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು. ಲಾನ್‍ಟೆನ್ನಿಸ್ ಮತ್ತು ಸ್ಕೇಟಿಂಗ್ ಶಿಬಿರ: ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣದಲ್ಲಿರುವ ಲಾನ್‍ಟನ್ನಿಸ್ ಮತ್ತು ಸ್ಕೇಟಿಂಗ್ ರಿಂಗ್ ಅಂಕಣದಲ್ಲಿ ಮಕ್ಕಳು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಮಯದಲ್ಲಿ ನುರಿತ ಲಾನ್‍ಟೆನ್ನಿಸ್ ತರಬೇತುದಾರರಿಂದ 21 ದಿನಗಳ ವಿಶೇಷ ಲಾನ್‍ಟೆನ್ನಿಸ್ ಮತ್ತು ಸ್ಕೇಟಿಂಗ್ ತರಬೇತಿ ಶಿಬಿರ ನಡೆಸಲಾಗುವುದು. ಇದಲ್ಲದೇ ಮಾಸಿಕ ತರಬೇತಿ ಶಿಬಿರ ಕೂಡ ಸಂಘಟಿಸಲಾಗುವುದು.

ಈ ಬೇಸಿಗೆ ಶಿಬಿರದಲ್ಲಿ ಸ್ಮಿಮ್ಮಿಂಗ್, ಲಾನ್‍ಟೆನ್ನಿಸ್ ಮತ್ತು ಸ್ಕೇಟಿಂಗ್‍ನ ಬೆಳಿಗ್ಗೆ ನಾಲ್ಕು ಹಾಗೂ ಸಂಜೆ ನಾಲ್ಕು ಬ್ಯಾಚ್‍ಗಳು ನಡೆಯಲಿವೆ. ಪ್ರತಿ ಆಟದ ತರಬೇತಿಗೆ ರೂ.1900 ಶುಲ್ಕ ನಿಗದಿಗೊಳಿಸಲಾಗಿದೆ. ಪ್ರತಿ ಸೋಮವಾರ ರಜೆ ಇದ್ದು, ಶಿಬಿರದ ಪ್ರವೇಶಕ್ಕಾಗಿ ಮೊಬೈಲ್ ಸಂಖ್ಯೆಗಳಾದ 9743820293, (ಈಜು) 7019475379, 9686419812, 9972333179, (ಟೆನ್ನಿಸ್) 7259867739, (ಸ್ಕೇಟಿಂಗ್): 7760921936 ನ್ನು ಸಂಪರ್ಕಿಸಬಹುದೆಂದು ಅವರು ತಿಳಿಸಿದರು.

ಸಾಗರ ಈಜುಕೊಳ : ಸಾಗರ ನಗರದ ವಿಜಯನಗರ 1ನೇ ತಿರುವಿನಲ್ಲಿ 2520 ಮೀಟರ್ ಅಳತೆಯ 8 ಲೈನ್ಸ್ ಹೊಂದಿರುವ ವ್ಯವಸ್ಥಿತವಾದ ಈಜುಕೊಳ ನಿರ್ಮಾಣವಾಗಿದ್ದು, ಇಲ್ಲಿಯೂ ಸಹ 21 ದಿನಗಳ ಬೇಸಿಗೆ ಈಜು ತರಬೇತಿ ಶಿಬಿರವನ್ನು ಏಪ್ರಿಲ್ 03 ರಿಂದ ಮೊದಲನೇ ಶಿಬಿರ ಮತ್ತು ಮೇ 02 ರಿಂದ ಎರಡನೇ ಶಿಬಿರವನ್ನು ಆರಂಭಿಸಲಾಗುವುದು. ತರಬೇತಿ ಶುಲ್ಕ ರೂ.1500 ಇದೆ. ಬೇಸಿಗೆ ಶಿಬಿರ ಹೊರತಾಗಿ 15 ವರ್ಷ ಒಳಗಿನವರಿಗೆ 03 ತಿಂಗಳಿಗೆ ರೂ.2200, ಒಂದು ವರ್ಷಕ್ಕೆ ರೂ.5500/- ಹಾಗೂ 15 ವರ್ಷ ಮೇಲ್ಪಟ್ಟವರಿಗೆ ಮೂರು ತಿಂಗಳಿಗೆ ರೂ.2500 ಹಾಗೂ ಒಂದು ವರ್ಷಕ್ಕೆ ರೂ.7700 ನಿಗದಿಪಡಿಸಲಾಗಿದೆ. ಪ್ರವೇಶಕ್ಕಾಗಿ ಮೊ.ಸಂ: 9731233184, 9008982197 ನ್ನು ಸಂಪರ್ಕಿಸಬಹುದು ಎಂದರು.


ಪತ್ರಿಕಾಗೋಷ್ಟಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ಕ್ರೀಡಾ ಸಂಕೀರ್ಣ ಸಮಿತಿಯ ಸದಸ್ಯ ಗೌತಮ್ ಇತರರು ಇದ್ದರು
.

By admin

ನಿಮ್ಮದೊಂದು ಉತ್ತರ

You missed

error: Content is protected !!