ಶಿವಮೊಗ್ಗ: ಶಿವಮೊಗ್ಗದ ರಾಜಕಾಲುವೆಯ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವ ಹಿನ್ನೆಲೆಯಲ್ಲಿ ಪೆನ್ಷನ್ ಮೊಹಲ್ಲಾ 2ನೇ ತಿರುವಿನ ಜನ ಮಲೀನ ಸಾಮ್ರಾಜ್ಯದಲ್ಲಿ ಬದುಕುವ ಪರಿಸ್ಥಿತಿಗೆ ತಲುಪಿರುವುದು ದುರಂತವೇ ಹೌದು.


ಈ ರಾಜಕಾಲುವೆಯ ಮೇಲೆ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಗೋಡೆಯನ್ನು ನಿರ್ಮಿಸಲಾಗಿದ್ದು, ದುರಂತವೆಂದರೆ ಇದೇ ರಾಜಕಾಲುವೆಯಲ್ಲಿ ಶೌಚಾಲಯವನ್ನು ನಿರ್ಮಿಸಿಕೊಂಡಿರುವುದನ್ನು ತೆಗೆದು ಹಾಕಲಾಗದ ಶಿವಮೊಗ್ಗ ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ ವ್ಯವಸ್ಥೆಯ ವಿರುದ್ಧ ಜನತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.


ರಾಜಕಾಲುವೆಯ ನೀರು ಮುಂದೆ ಹೋಗದಂತಹ ವ್ಯವಸ್ಥೆ ಒಂದುಕಡೆಯಾದರೆ ಇದೇ ರಾಜಕಾಲುವೆಗೆ ಶಾಹಿಎಕ್ಸ್‌ಪೋರ್ಟ್ ಹಿಂಭಾಗದಿಂದ ಯುಜಿಡಿ ಸಂಪರ್ಕ ಸಹ ಹರಿದು ಬರುತ್ತಿದೆ. ಹೀಗಾಗಿ ಆ ಭಾಗದ ಜನ ನಿತ್ಯ ಕೊಳಕು ವಾಸನೆಯಲ್ಲೇ ಕಾಲಕಳೆಯಬೇಕಾಗಿದೆ. ಈ ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆಗೆ ಕಳೆದ ಒಂದೂವರೆ ತಿಂಗಳ ಹಿಂದೆ ದೂರು ನೀಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಸ್ಮಾರ್ಟ್‌ಸಿಟಿಯ ಇಂಜಿನಿಯರ್‌ಗಳಿಗಾಗಲಿ, ಕನಿಷ್ಠ ಜನರ ಕಷ್ಟ ಕೇಳದ ಪಾಲಿಕೆ ಸದಸ್ಯರ ವಿರುದ್ಧ ಸಾರ್ವಜನಿಕರು ಪ್ರತಿಭಟನೆಗೆ ಇಳಿಯಲು ಮುಂದಾಗಿದ್ದಾರೆ.


ಯುಜಿಡಿ ಸಂಪರ್ಕ ಪಡೆಯದವರಿಗೆ ದಂಡ ವಿಧಿಸಿ ಕೂಡಲೇ ಸಂಪರ್ಕ ಪಡೆಯುವಂತೆ ಮಾಡಬೇಕಾಗಿದೆ. ಹಾಗೂ ರಾಜಕಾಲುವೆಯ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ವ್ಯವಸ್ಥಿತವಾದ ರಾಜಕಾಲುವೆಯನ್ನು ನಿರ್ಮಿಸಲು ಆಗ್ರಹಿಸಿದ್ದಾರೆ.


ಮಳೆಗಾಲ ಆರಂಭಗೊಳ್ಳುವ ಮೊದಲೇ ಮಾಡಿದಿದ್ದರೆ ಪೆನ್ಷನ್ ಮೊಹಲ್ಲಾದ ೨ನೇ ತಿರುವಿನ ಮನೆಗಳಿಗೆ ದುರ್ಗಂಧದ ಸಹಿತ ನೀರು ಹರಿಯಲಿದ್ದು, ಮಳೆಬರುವುದರೊಳಗೆ ಈ ಕೆಲಸ ಮಾಡಲು ಆಗ್ರಹಿಸಿದ್ದಾರೆ.
ಈಗಲಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಣು ಬಿಟ್ಟು ನೋಡುವರೇ?

By admin

ನಿಮ್ಮದೊಂದು ಉತ್ತರ

You missed

error: Content is protected !!