Davanagere Crime

ಶಿವಮೊಗ್ಗ, ಮಾ.10:

ಕೆರೆಗೂ ಬಾವಿಗೆ ಬಿದ್ದು ಸಾಯಿ ಎಂದ ಅತ್ತೆ ಮಾತಿಗೆ ನೊಂದ ಸೊಸೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ವರದಿಯಾಗಿದೆ.
ಅತ್ತೆ ಮಾತಿಗೆ ಬೇಸತ್ತ 23 ವರ್ಷದ ವಿವಾಹಿತ ಮಹಿಳೆ ನೋಡು ನೋಡುತ್ತಲೇ ಬಾವಿಗೆ ಹಾರಿ ಜೀವ ಕಳೆದುಕೊಂಡಿರುವ ಈ ಘಟನೆ ಭದ್ರಾವತಿ ತಾಲೂಕಿನ ನಾಗತಿಬೆಳಗಲಿನಲ್ಲಿ ನಡೆದಿದೆ.

ವಿವರ: ಕಳೆದ ನಾಲ್ಕು ವರ್ಷದ ಹಿಂದಷ್ಟೆ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ನಿವಾಸಿ ಬಸವರಾಜ್ ಮಗಳು ಶಶಿಕಲಾಳನ್ನ ನಾಗತಿ ಬೆಳಗಲಿನ ನಂಜುಡಪ್ಪ ಎಂಬುವರಿಗೆ ವಿವಾಹ ಮಾಡಿಕೊಟ್ಟಿರುತ್ತಾರೆ.  ಒಂದು ವರೆ ವರ್ಷದ ಹಿಂದೆ ಜೆನಿಶಾ ಎಂಬ ಹೆಣ್ಣುಮಗುವಿಗೆ ಶಶಿಕಲಾ ಜನ್ಮ ನೀಡಿರುತ್ತಾಳೆ. ಆದರೆ ಇದೇ ಎರಡು ವರ್ದಿಂದ ಅತ್ತೆ ಮಂಜುಳಮ್ಮ ಮತ್ತು ಶಶಿಕಲಾ ನಡುವೆ ಆಗಾಗ್ಗೆ ಜಗಳ ಆರಂಭವಾಗಿರುತ್ತದೆ.


ಜಗಳವನ್ನ ಪತಿ ನಂಜುಂಡೇಶ್ವರನಿಗೆ ಶಶಿಕಲಾ ವಿವರಿಸುತ್ತಾಳೆ. ನಂಜುಂಡೇಶ್ವರನೂ ತಾಯಿಗೆ ಎಷ್ಟು ಬುದ್ದಿವಾದ‌ಹೇಳಬೇಕೋ ಹೇಳಿರುತ್ತಾನೆ. ಅತ್ತ ಮಗ ಕೆಲಸಕ್ಕೆ ಹೋಗುತ್ತಿದ್ದಂತೆ ಮಗನನ್ನ ಚೂಬಿಡ್ತ್ಯಾ ಎಂದು ಶಶಿಕಲಾಳ ವಿರುದ್ಧ ಕ್ಯಾತೆ ತೆಗೆದು ಅತ್ತೆ ಜಗಳ ಮಾಡುತ್ತಿದ್ದಳು.
ಒಮ್ಮೆ ಶಶಿಕಲಾರ ತಂದೆ ತಾಯಿಯೂ ಸಹ ಮಂಜುಳಮ್ಮನಿಗೆ ಮಗಳ ಜೊತೆ ಅನೂನ್ಯತೆಯಿಂದ ಇರಲು ಬೇಡಿಕೊಂಡಿದ್ದಾರೆ ಅತ್ತ ಅವರು ಹೋಗುತ್ತಿದ್ದಂತೆ ತಂದೆ ತಾಯಿ ಹತ್ರನೇ ಬುದ್ದಿವಾದ ಹೇಳಸಕ್ಕೆ ಬರ್ತ್ಯಾ ಎಂದು ಮಂಜುಳಮ್ಮ ಜಗಳ ತೆಗೆದಿರುವುದು ಉಂಟು.


ನಾಗತಿ ಬೆಳಲಿನ ಯಲ್ಲಮ್ಮ(ಜೋಗತಿ ) ಶಶಿಕಲಾ‌ಳ ತಂದೆ ತಾಯಿಗೆ ಕರೆ ಮಾಡಿ ಮನೆ ಹತ್ತಿರದ ಬಾವಿಗೆ ಬಿದ್ದಿರುವುದಾಗಿ ತಿಳಿಸಿದ್ದಾರೆ. ಅವರು‌ ಭದ್ರಾವತಿಗೆ ಬಂದು ಭದ್ರಾವತಿಯ‌ ಶವಗಾರದಲ್ಲಿ ಮಗಳ ಶವವನ್ನ ನೋಡಿದ್ದಾರೆ. ಮಗಳ ಈ ಕೃತ್ಯಕ್ಕೆ ಕಾರಣ ಏನು ಎಂದು ಕೂಲಂಕುಶವಾಗಿ ತಿಳಿಯಲು ಮುಂದಾಗಿದ್ದಾರೆ. ಶಶಿಕಲಾ ಸಾಯುವ ಮುನ್ನ ಅತ್ತೆ ಮಂಜುಳಮ್ಮ ಜೊತೆ ಜಗಳ ಉಂಟಾಗಿರುವುದು ತಿಳಿದು ಬಂದಿದೆ.
ನೀನು‌ ಬಂದ ಮೇಲೆ ಸಂಸಾರ ಹಾಳಾಗಿದೆ. ಕೆರೆನೋ ಬಾವಿನೋ ನೋಡ್ಕೋ ನಾವು ನೆಮ್ಮದಿಯಿಂದ ಬದುಕುತ್ತೇವೆ ಎಂದು ಮಂಜುಳಮ್ಮ ಶಶಿಕಲಾಳಿಗೆ ಬೈದಿದ್ದಾಳೆ. ಮನನೊಂದ ಶಶಿಕಲಾ‌ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಂಜುಳಮ್ಮನ ಕಿರುಕುಳದಿಂದ ಮಗಳು ಶಶಿಕಲಾ‌ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಂದೆ ಬಸವರಾಜ್ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!