ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ತಾಲ್ಲೂಕಿನ ಕುಂಚಿಗನಾಳು ತಾಂಡ್ಯದಲ್ಲಿ ಆರ್ , ಶೇಜೇಶ್ವರ. ಸಹಾಯಕ ನಿರ್ದೇಶಕರು , ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ , ಶಿವಪ್ಪನಾಯಕ ಅರಮನೆ , ಶಿವಮೊಗ್ಗ , ಇವರು ಕ್ಷೇತ್ರ ಕಾರ್ಯ ಕೈಗೊಂಡಾಗ ಈ ಗ್ರಾಮದ “ ಹಾಳೂರು ” ಎಂದು ಕರೆಯುವ ಸ್ಥಳದಲ್ಲಿ ಲಿಂಗಮುದ್ರೆ ಕಲ್ಲಿನ ಶಾಸನ ಪತ್ತೆಯಾಗಿದೆ .
ಲಿಂಗಮುದ್ರೆ ಕಲ್ಲು ; ಪ್ರಾಚೀನ ಕಾಲದಲ್ಲಿ ಗಡಿಯನ್ನು ಗುರುತಿಸಲು ಬೆಟ್ಟ , ಗುಡ್ಡ , ನದಿ , ಹಳ್ಳ , ವೃಕ್ಷಗಳಾದ ವಟ ವೃಕ್ಷ . ಹುಣಸೆಮರ ಮೊದಲಾದವುಗಳ ಮುಖಾಂತರ ಗುರುತಿಸುತ್ತಿದ್ದರು . ನಂತರ ಇವುಗಳ ಜೊತೆಯಲ್ಲಿಯೇ ಕಲ್ಲುಗಳನ್ನು ಗಡಿಕಲ್ಲುಗಳಾಗಿ ನಿಲ್ಲಿಸುತ್ತಾ , ಸೀಮೆ , ಊರು ಹಾಗೂ ದಾನವಾಗಿ ನೀಡಿದ ಭೂಮಿಗೆ ಗಡಿಕಲ್ಲುಗಳನ್ನು ಧರ್ಮಧಾರಿತವಾಗಿ ನಿಲ್ಲಿಸುತ್ತಾ ಬಂದರು . ಇಲ್ಲಿ ಪ್ರಮುಖವಾಗಿ ಜೈನರು ಮುಕ್ಕೊಡ ಕಲ್ಲನ್ನು , ವೈಷ್ಣವರು ಚಕ್ರಕಲ್ಲು , ಶಂಕ ಚಕ್ರದಕಲ್ಲು , ವಾಮನ ಮುದ್ರೆಯ ಕಲ್ಲನ್ನು , ಶೈವರು ನಂದಿಕಲ್ಲು , ತ್ರಿಶೂಲದ ಕಲ್ಲು ಹಾಗೂ ಲಿಂಗಮುದ್ರೆ ಕಲ್ಲನ್ನು ನಿಲ್ಲಿಸುತ್ತಿದ್ದರು . ಇಲ್ಲಿ ಪ್ರಧಾನವಾಗಿ ದಾನ ನೀಡಿರುವ ಭೂಮಿಯ ಗಡಿಕಲ್ಲಾಗಿ ಶಾಸನವಿರುವ ಲಿಂಗಮುದ್ರೆಯ ಕಲ್ಲನ್ನು ನಿಲ್ಲಿಸಿ ಇದರಲ್ಲಿ ದಾನ ನೀಡಿರುವ ವಿವರವನ್ನು ಶಾಸನ ರೂಪದಲ್ಲಿ ಬರೆಯಿಸಿ , ಇದರ ಮೇಲೆ ಶಿವಲಿಂಗ ಹಾಗೂ ಸೂರ್ಯ ಚಂದ್ರರನ್ನು ಕೆತ್ತಲಾಗಿದೆ . ಈ ಶಿಲ್ಪಗಳ ಆಧಾರದ ಮೇಲೆ ಇದನ್ನು ಲಿಂಗಮುದ್ರೆಕಲ್ಲು ಎಂದು ಕರೆಯಲಾಗಿದೆ . ಇಲ್ಲಿ ಪ್ರಮುಖವಾಗಿ ಶೈವ ಧರ್ಮದವರು ದಾನ ನೀಡುವಾಗ ಲಿಂಗಮುದ್ರೆ ಕಲ್ಲುಗಳನ್ನು ನಿಲ್ಲಿಸುತ್ತಿದ್ದರು ಎಂದು ತಿಳಿಯಬಹುದಾಗಿದೆ . ಶಾಸನ : ಈ ಶಾಸನವು ಲಿಂಗಮುದ್ರೆಯ ಕಲ್ಲಿನ ಮೇಲಿದ್ದು , 5 ಸಾಲಿನಿಂದ ಕೂಡಿದ್ದು , 60 ಸೆಂ.ಮೀ ಉದ್ದ , 35 ಸೆಂ.ಮೀ ಆಗಲವಾಗಿದೆ .
ಶಾಸನದ ಪಾಠ :

  1. ಶ್ರೀ ಮಕೆಳದಿ ! ಮಲ್ಲಂಮ್ಮಾ
  2. ಜಿ ಆರಮಾನಯರು ಭಕ್ತಿ 3 , ಭದ್ರರಾಜಪುರದ ಭೂ 4 , ಮಿ ದತ್ತಿ ಮಾಡೋಕೆ ನಾಕು
    5, ಕಲ್ಲು
    ಶಾಸನದ ಸಾರಂಶ : ಕೆಳದಿ ಸಾಮ್ರಾಜ್ಯದ ಮಲ್ಲಮಾಜಿಯ ಅರಮನೆಯವರು ಪ್ರತಿನಿಧಿಯಾಗಿ ಬಂದು ಭಕ್ತಿಯಿಂದ ಭದ್ರರಾಜಪುರವನ್ನು ಮಾಡಿ ಇದಕ್ಕೆ ಭೂಮಿಯನ್ನು ದಾನ ನೀಡಿ , ದಾನ ನೀಡಿದ ಭೂಮಿಯ ನಾಲ್ಕು ದಿಕ್ಕಿನಲ್ಲಿಯೂ ಲಿಂಗಮುದ್ರೆ ಕಲ್ಲನ್ನು ನಿಲ್ಲಿಸಿರುವುದು ತಿಳಿದು ಬರುತ್ತದೆ , ಶಾಸನಗಳ ಮಹತ್ವ : ಕೆಳದಿ ಅರಸರು ಕೆಳದಿ , ಇಕ್ಕೆರಿ ಹಾಗೂ ಬಿದನೂರನ್ನು ರಾಜಧಾನಿಯಾಗಿ ಮಾಡಿಕೊಂಡು ಕ್ರಿ.ಶ. 1638 ರಿಂದ ಕ್ರಿ.ಶ. 1763 ರವರೆಗೆ ಆಳ್ವಿಕೆ ಮಾಡಿದ್ದು , ಇವರಲ್ಲಿ ಕಿರಿಯ ವೆಂಕಟಪ್ಪನಾಯಕ ಕ್ರಿ .ಶ . 1661 ರಿಂದ ಕ್ರಿ.ಶ. 1662 ರವರೆಗೆ ಎರಡು ವರ್ಷಗಳ ಕಾಲ ಆಳ್ವಿಕೆ ಮಾಡಿದ್ದು , ಇವನ ಪತ್ನಿಯೇ ರಾಣಿ ಮಲ್ಲಮಾಜಿ , ಇವರು ಭದ್ರಪ್ಪನಾಯಕನಿಗೆ ಒಳ್ಳೆಯದಾಗಲಿ ಎಂದು ಭದ್ರರಾಜಪುರವನ್ನು ಮಾಡಿ ಕ್ರಿ.ಶ. 1661-62 ರ ಕ್ರಿ.ಶ. 17 ನೇ ಶತಮಾನದಲ್ಲಿ ದಾನ ನೀಡಿದ್ದು , ಇದನ್ನು ತೀರ್ಥಹಳ್ಳಿ ತಾಲ್ಲೂಕಿನ ತುಂಗಾ ನದಿ ತೀರದ ಭದ್ರರಾಜಪುರ ಎಂದು ತಿಳಿಯಲಾಗಿದ್ದು , ಇದು ಅಗ್ರಹಾರವಾಗಿರುವುದು ಕಂಡುಬರುತ್ತದೆ . ಶೈವ ಧರ್ಮದವರು ದಾನ ನೀಡಿದರೆ ಲಿಂಗಮುದ್ರೆ ಕಲ್ಲನ್ನು ದಾನದ ಹಾಗೂ ಗಡಿಕಲ್ಲಿನ ಸಂಕೇತವಾಗಿ ನಿಲ್ಲಿಸುತ್ತಿದ್ದರು . ಇಂತಹ ಲಿಂಗಮುದ್ರೆಯ ಶಾಸನದ ಕಲ್ಲನ್ನು ಇಲ್ಲಿ ನಿಲ್ಲಿಸಿರುವುದು ವಿಷೇಷವಾಗಿದೆ . ಕೃತಜ್ಞತೆಗಳು : ಈ ಶಾಸನವನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪೂರ್ಣಿಮ ಹಾಗೂ ಕುಂಚಿಗನಾಳು ತಾಂಡ್ಯದ ಗ್ರಾಮಸ್ಥರಾದ ಲಂಕೇಶ್ ನಾಯ್ಕ , ದಿನೇಶ ನಾಯ್ಕ , ಹನುಮಂತ ನಾಯ್ಕ , ನಾಗರಾಜ ನಾಯ್ಕ , ರಾಕೇಶನಾಯ್ಕ ಹಾಗೂ ಶಾಸನವನ್ನು ಓದಿಕೊಟ್ಟ ಡಾ.ಜಗದೀಶ ಇವರಿಗೆ ಆರ್ . ಶೇಜೇಶ್ವರ ಧನ್ಯವಾದಗಳನ್ನು ತಿಳಿಸಿದ್ದಾರೆ .
    ತಮ್ಮ ವಿಶ್ವಾಸಿ
    ಆರ್ . ಶೇಜೇಶ್ವರ . ಸಹಾಯಕ ನಿರ್ದೇಶಕರು ಶಿವಪ್ಪನಾಯಕ ಆರಮನೆ .
    ಶಿವಮೊಗ್ಗ.

By admin

ನಿಮ್ಮದೊಂದು ಉತ್ತರ

You missed

error: Content is protected !!