ಶಿವಮೊಗ್ಗ : ಆಣೆ-ಪ್ರಮಾಣಕ್ಕೆ ನಾನು ಸದಾ ಸಿದ್ದ. ಶಾಸಕ ಹಾಲಪ್ಪನವರೇ, ತಾವು ತಮ್ಮ ಹುಂಡಿಯಾದ ವಿನಾಯಕ ಭಟ್ಟರ ಜೊತೆ ಬಂದು ಇಬ್ಬರೂ ಆಣೆ ಮಾಡಲು ಸಿದ್ದರಾಗಿ. ಮೊದಲು ಹೇಳಿದ್ದ ಈ ತಿಂಗಳ 13ನೇ ತಾರಿಖನ್ನು 12ಕ್ಕೆ ಬದಲಿಸಿದಿರಿ. ನಾನು ಗೋವಾ ಚುನಾವಣೆಗೆ ಹೋಗಬೇಕಾರುವ ಹಿನ್ನೆಲೆಯಲ್ಲಿ ಈ ದಿನಾಂಕವನ್ನು ಈ ತಿಂಗಳ 23ರ ನಂತರ ಯಾವತ್ತಾದರೂ ನಿಗದಿ ಮಾಡಿ ನಾನು ಸಿದ್ದ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಾಗರ ಶಾಸಕ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಟಾಂಗ್ ನೀಡಿದರು.
ಅವರು ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಧರ್ಮಸ್ಥಳದ ಮಂಜುನಾಥ ಸ್ವಾಮಿ ಎದುರು ಆಣೆ ಮಾಡುವುದಾಗಿ ಹೇಳಿದ್ದ ನೀವು, ನಿಮ್ಮ ಮರಳು ವ್ಯವಹಾರದ ಹುಂಡಿಯಾಗಿರುವ ವಿನಾಯಕ ಭಟ್ಟರನ್ನು ಕರೆದುಕೊಂಡು ಬಂದು ಆಣೆ ಮಾಡಿಸಬೇಕು. ಆಗ ನಾನು ಬರುತ್ತೇನೆ ಎಂದು ಹೇಳಿದರು.
ಭ್ರಷ್ಟಾಚಾರಿಗಳೇ, ಕಳ್ಳರೇ ಆಣೆ, ಪ್ರಮಾಣಕ್ಕೆ ಮುಂದಾಗಿರುವಾಗ ನಾನು ಏಕೆ ಬರುವುದಿಲ್ಲ ಎನ್ನಲ್ಲಿ. ನಿಮ್ಮ ಪರ್ಸೆಂಟೇಜ್ ವ್ಯವಹಾರ ಚೆನ್ನಾಗಿ ಗೊತ್ತಿದೆ. ಎಲ್ಲಾ ಗುತ್ತಿಗೆದಾರರನ್ನು ಕರೆದು ಅವರ ಮೊಬೈಲ್‌ಗಳನ್ನು ಒಂದೆಡೆ ಸಂಗ್ರಹಿಸಿ ನಂತರ ನೀವು ಕೇಳಿರುವ ಪರ್ಸೆಂಟೇಜ್ ವ್ಯವಹಾರ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಪಂಚಾಯತ್ ರಾಜ್ ಇಲಾಖೆಗೆ ಬಂದ 19 ಕೋಟಿ ಹಣವನ್ನು ಕೆಐಆರ್ ಡಿಎಲ್‌ಗೆ ಹಂಚಿರುವ ಉದ್ದೇಶವೇನು.ನೀರಾವರಿ ಇಲಾಖೆಗೆ ಬಂದ 50 ಕೋಟಿ ಹಣವನ್ನು ನಿರ್ಮಿತಿ ಕೇಂದ್ರಕ್ಕೆ ಕೊಟ್ಟದ್ದು ಏಕೆ.? ಕಲೆಕ್ಷನ್ ಕಿಂಗ್ ಜೊತೆ ಬನ್ನಿ ಆಣೆ ಮಾಡಿ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ನ ಜಿ.ಮಂಜುನಾಥ್,ರಾಜ್‌ಕುಮಾರ್, ವಜೀದ್ ಹಾಗೂ ಇತರರಿದ್ದರು.