ವಿಶ್ವ ಕ್ಯಾನ್ಸರ್ ದಿನದ ( World Cancer Day) ಪ್ರಯಕ್ತ ಶಿವಮೊಗ್ಗದ Dr. ಮುಹಮ್ಮದ್ ಮುಂತಾಜೀಮ್ G, ಸಹಾಯಕ ಪ್ರಾಧ್ಯಾಪಕರು, ಸಮುದಾಯ ವೈದ್ಯಕೀಯ ವಿಭಾಗ, ಸುಬಯ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಶಿವಮೊಗ್ಗ ಅವರ ವಿಶೇಷ ಲೇಖನ

ಇಂದು ವಿಶ್ವ ಕ್ಯಾನ್ಸರ್ ದಿನ ( world cancer day). ಇಂದು ವಿಶ್ವದೆಲ್ಲೆಡೆ ಕ್ಯಾನ್ಸರ್ ಬರುವ ಕಾರಣಗಳು ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವರು.

ಕ್ಯಾನ್ಸರ್ ಬರಲು ಕಾರಣ ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ವಿವರಿಸುತ್ತೇನೆ.
ಕ್ಯಾನ್ಸರ್ (ಅರ್ಬುದ ) ರೋಗದಲ್ಲಿ ಅಸಾಮಾನ್ಯ ಕೋಶಗಳು ( abnormal cells) ಒಂದು ಅಂಗದಲ್ಲಿ ಬೆಳೆದು ಬೇರೆ ಅಂಗಗಳಲ್ಲಿ ಹರಡುವವು. ಇದರಿಂದ ಯಾವ ಅಂಗಕ್ಕೆ ಕ್ಯಾನ್ಸರ್ ತಗುಲಿದೇಯೋ ಆ ಅಂಗಕ್ಕೆ ಅನುಸಾರವಾಗಿ ಲಕ್ಷಣಗಳು ಕಾಣುವವು. ಅದನ್ನು ತಡೆಯದೇ ಹೋದಲ್ಲಿ ಬೇರೆ ಅಂಗಗಳಿಗೆ ಹರಡಿ ತೀವ್ರ ಗಂಡಾಂತರಗಳ ಸಂಭವ ಎದುರಾಗುವುದು ಹಾಗೂ ಕೊನೆಗೆ ಮರಣ ಹೊಂದುವ ಸಂಭವ ಹೆಚ್ಚಾಗುವುದು.
ಪುರುಷರಲ್ಲಿ ಕಾಣುವ ಐದು ಸಾಮಾನ್ಯ ಕ್ಯಾನ್ಸರ್ ಗಳು ಎಂದರೆ ಶ್ವಾಸಕೋಶದ ಕ್ಯಾನ್ಸರ್ , ತುಟಿಯ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್, ಜಠರದ ಕ್ಯಾನ್ಸರ್, ಗುದದ ಹಾಗೂ ಗಂಟಲಿನ ಕ್ಯಾನ್ಸರ್. ಮಹಿಳೆಯಾರಲ್ಲಿ ಕಾಣುವ ಕ್ಯಾನ್ಸರ್ ಎಂದರೆ ಸ್ಥನದ ಕ್ಯಾನ್ಸರ್ (breast cancer ), ಗರ್ಭಕೋಶದ ಕ್ಯಾನ್ಸರ್, ಗುದದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ (ovarian cancer ), ಬಾಯಿ ಹಾಗೂ ತುಟಿಯ ಕ್ಯಾನ್ಸರ್.


ಕ್ಯಾನ್ಸರ್ ಬರಲು ಕಾರಣಗಳು
ತಾಂಬಾಕು ಸೇವನೆ : ದೀರ್ಘಕಾಲದಿಂದ ಸಿಗರೇಟ್, ಬೀಡಿ ಸೇದುವವರು ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೇ ಹೆಚ್ಚು. ಅದು ಬಿಟ್ಟರೆ ಗಂಟಲು, ಬಾಯಿ, ಅನ್ನನಾಳ, ಮೂತ್ರ ಪಿಂಡ, ಮೇದೋಜೀರಾಕಾಂಗದ ಕ್ಯಾನ್ಸರ್ ಗೆ ತುತ್ತಾಗುವ ಸಂಭವ ಹೆಚ್ಚು.
ಮದ್ಯಪಾನ : ಅತಿಯಾದ ಸೇವನೆ ಇಂದ ಯಕೃತದ ಕ್ಯಾನ್ಸರ್ ( Liver cancer ) ಹಾಗೂ ಅನ್ನನಾಳದ ಕ್ಯಾನ್ಸರ್ ಆಗುವ ಸಂಭವ ಇರುವುದು. ಹೆಚ್ಚು ಖಾರ ಪದಾರ್ಥ ಸೇವನೆ ಯಿಂದ ಹೊಟ್ಟೆಯ ಕ್ಯಾನ್ಸರ್, ಅತಿಯಾದ ಕೊಬ್ಬಿನಾ ಆಹಾರ ಸೇವನೆ ಯಿಂದ ಸ್ಥನ ಕ್ಯಾನ್ಸರ್ ಆಗುವ ಸಂಬಂವ ಹೆಚ್ಚು.
ಕೆಲವು ಸೂಕ್ಷ್ಮ ಜೀವಿಗಳು ಕ್ಯಾನ್ಸರ್ ಅನ್ನು ತರುವುದು.
H. pylori : ಇದು ಒಂದು ಬ್ಯಾಕ್ಟೀರಿಯಾ. ಇದರಿಂದ ಹೊಟ್ಟೆಯ ಕ್ಯಾನ್ಸರ್ ಆಗುವುದು.
Hepatitis B virus : ಇದರಿಂದ ಯಕೃತದ ( Liver cancer ) ಬರುವುದು.
HPV( Human papiloma virus): ಇದರಿಂದ ಗರ್ಭಕೋಶದ ಕ್ಯಾನ್ಸರ್ ಬರುವುದು.
Epstein barr virus: ಇದರಿಂದ burkit lymphoma ಹಾಗೂ nasopharyngeal ಕ್ಯಾನ್ಸರ್ ಬರುವುದು.
Schistostomia haematobium : ಇದು ಒಂದು ಪರಾವಲಂಬಿ ಜೀವಿ ಆಗಿದ್ದು ಮೂತ್ರ ಕೋಶದ ಅಂಗದ ಕ್ಯಾನ್ಸರ್ ತರುವುದು. ಮೇಲಿನ ಈ ಕಾರಣಗಳಿಂದ ಕ್ಯಾನ್ಸರ್ ಬರುವುದು.


ಕ್ಯಾನ್ಸರ್ ರೋಗದ ತಡೆಗಟ್ಟುವಿಕೆ:
ಕ್ಯಾನ್ಸರ್ ಅನ್ನು ಆರಂಭದ ಹಂತದಲ್ಲಿ ಗುರುತಿಸಿದರೆ ಖಂಡಿತವಾಗಿ ರೋಗವನ್ನು ಗುಣಪಡಿಸಲು ಸಾಧ್ಯವಿದೆ. ಕೊನೆ ಹಂತಕ್ಕೆ ಹೋದರೆ ರೋಗಿಯು ಬದುಕುವ ಸಾಧ್ಯತೆ ಕಡಿಮೆ.
ಕ್ಯಾನ್ಸರ್ ರೋಗವನ್ನೂ ಬಾರದ ಹಾಗೆ ನೋಡಿಕೊಳ್ಳುವುದು ಉತ್ತಮ. ಅದರ ವಿಧಾನಗಳೆಂದರೆ
ಪ್ರಾಥಮಿಕ ಹಂತದ ತಡೆ :
ಕ್ಯಾನ್ಸರ್ ಕಾಯಿಲೆಗಳ ಕುರಿತು ಆರೋಗ್ಯ ಶಿಕ್ಷಣ ಕೊಡುವುದು, ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳುವುದು, ಸರಿಯಾಗಿ ಮಿತವಾಗಿ ಆರೋಗ್ಯ ಸೇವನೆ ಹಾಗೂ ಈ ಕಾಯಿಲೆ ಕಂಡುಹಿಡಿಯಲು ಇರುವ ಸೌಲಭ್ಯಗಳು ಇದನ್ನು ವಿವರಿಸುವುದು.
ದ್ವಿತೀಯ ಮಟ್ಟದ ತಡೆ :
ಇಲ್ಲಿ ರೋಗವನ್ನೂ ಶೀಘ್ರ ಪತ್ತೆ ಹಚ್ಚಿ ಅದನ್ನು ಗುಣಪಡಿಸುವುದಾಗಿದೆ.
ಉದಾಹರಣೆ: ಸ್ವತಹ ಸ್ಥನಗಳನ್ನು ಪರೀಕ್ಷೆ ಮಾಡಿ ( self breast examination )ಗೆಡ್ಡ ಕಂಡುಬಂದಾಗ ವೈದ್ಯರನ್ನು ಸಂಪರ್ಕಿಸುವುದು.
ಗರ್ಭಕೋಶದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್ ಸರಿಯಾಗಿ ಪತ್ತೆ ಹಚ್ಚುವ ಕ್ರಮ ಮಾಡಿದರೆ ಕಾಯಿಲೆಯನ್ನು ಬೇಗ ಕಂಡುಹಿಡಿಯಬಹುದು ಹಾಗೂ ಶೀಘ್ರ ಚಿಕಿತ್ಸೆಯನ್ನು ಪ್ರಾರಂಭ ಮಾಡಬಹುದು.
ಆರೋಗ್ಯದ ಹಿತಕ್ಕಾಗಿ ಕೇವಲ ಕ್ಯಾನ್ಸರ್ ಅಲ್ಲದೆ ಬೇರೆ ಅಸಾಂಕ್ರಾಮಿಕ ಕಾಯಿಲೆಗಳನ್ನು ನಿಯಂತ್ರಣ ಮಾಡಲು ಕೆಲವು ಚಟುವಟಿಕೆಗಳನ್ನು ಅಳವಡಿಸಿಕೊಳ್ಳುಬೇಕು ಅವು ಏನೆಂದರೆ
1.ಸರಿಯಾದ ಸಮತೋಲನ ಆಹಾರ ಸೇವಿಸುವುದು.

  1. ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ವ್ಯಾಯಾಮ ಮಾಡುವುದು.
  2. ಬೊಜ್ಜು ನಿಯಂತ್ರಣ: ದೇಹದ BMI (body mass index) 23 ಕಿಂತ ಕಡಿಮೆ ಇರಬೇಕು.
  3. ಮದ್ಯಪಾನ ನಿಲ್ಲಿಸುವುದು. ಮದ್ಯಪಾನ ನಿಲ್ಲಿಸುವುದು ಕಷ್ಟವಾದರೆ ಮಿತವಾಗಿ ಸೇವಿಸುವುದು.
  4. ತರಕಾರಿಗಳು, ಧಾನ್ಯಗಳು ಹಾಗೂ ಹಣ್ಣುಗಳ್ಳನ್ನು ಸೇವಿಸುವುದು,
  5. ದಿನಕ್ಕೆ 5gm ಗಿಂತ ಕಡಿಮೆ ಉಪ್ಪು ಸೇವಿಸುವುದು
  6. ಜಂಕ್ ಆಹಾರ ಪದಾರ್ಥಗಳು ಹಾಗೂ ಅತೀ ಕೊಬ್ಬುಯುಕ್ತ ಆಹಾರವನ್ನೂ ನಿಲ್ಲಿಸುವುದು.
  7. Red meat( ಕೆಂಪು ಮಾಂಸ )ಗಳಾದ ಬೀಫ್, ಮಟನ್ ಸೇವನೆ ಕಡಿಮೆ ಮಾಡುವುದು.
  8. Hepatitis B ಲಸಿಕೆ ಹಾಗೂ HPV ಲಸಿಕೆ ( ಮಹಿಳೆಯರು ) ತೆಗೆದುಕೊಳ್ಳುವುದು.
  9. ಬಾಯಿಯ ಹಾಗೂ ಸ್ಥನದ ಪರೀಕ್ಷೆಯನ್ನು ತಿಂಗಳಿಗೆ ಮಾಡುವುದು. ಏನಾದರೂ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಶೀಘ್ರವಾಗಿ ಸಂಪರ್ಕಿಸುವುದು.
    ಈ ಕ್ರಮಗಳನ್ನೂ ಅಳವಡಿಸಿಕೊಂಡರೆ ಕ್ಯಾನ್ಸರ್ ರೋಗವನ್ನೂ ತಡೆಗಟ್ಟಬಹುದು.

By admin

ನಿಮ್ಮದೊಂದು ಉತ್ತರ

You missed

error: Content is protected !!