ಶಿವಮೊಗ್ಗ: ಭಾರತೀಯ ಸೈನ್ಯದಲ್ಲಿ 20 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಶಿವಮೊಗ್ಗಕ್ಕೆ ಆಗಮಿಸಿದ ಭಾರತೀಯ ಸೇನೆಯಲ್ಲಿ ಲ್ಯಾನ್ಸ್ ನಾಯಕರಾಗಿ ಸೇವೆಸಲ್ಲಿಸಿದ ವೀರಯೋಧ ಚಂದ್ರನಾಯಕ ರವರನ್ನು ರೋಟರಿ ಶಿಮೊಗ್ಗ ಪೂರ್ವ ಹಾಗೂ ಜೆಸಿಐ ಶಿವಮೊಗ್ಗ, ಬೀರನಕೆರೆ ಗ್ರಾಮಸ್ಥರು ಸ್ವಾಗತಿಸಿ ನಗರಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಗ್ರಾಮದ ಯುವಕರು ರೋಟರಿ ಶಿವಮೊಗ್ಗ ಪೂರ್ವ ಮತ್ತು ಜೆಸಿಐ ಶಿವಮೊಗ್ಗ ಸಹ್ಯಾದ್ರಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಸದಸ್ಯರು ಒಳಗೊಂಡಂತೆ ಸುಮಾರು ಸಾರ್ವಜನಿಕರು ವೀರ ಯೋಧನನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಗೋಪಿ ವೃತ್ತದಲ್ಲಿ ರೋಟರಿ ಹಾಗೂ ಜೆಸಿಐ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೀರಯೋಧ ಚಂದ್ರನಾಯಕ, ಈ ದಿನ ನನಗೆ ತುಂಬಾ ಸಂತೋಷವಾದ ದಿನ ನಾನು ಭಾರತೀಯ ಸೈನ್ಯದಲ್ಲಿ ಸುಮಾರು ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಹೊಂದಿ ತವರೂರಾದ ಶಿವಮೊಗ್ಗ ಜಿಲ್ಲೆಯ ಬೀರನಕೆರೆ ಗ್ರಾಮಕ್ಕೆ ಆಗಮಿಸಿದ್ದು, ನನ್ನನ್ನು ಗೌರವಪೂರ್ವಕವಾಗಿ ಸನ್ಮಾನಿಸಿ ಸ್ವಾಗತಿಸಿರುವುದು ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.
ಹಾಗೆ ನಾನು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ರಾಜಸ್ಥಾನ್, ಚಂಡಿಗಡ್, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಗಡಿ ರಕ್ಷಣೆಯಲ್ಲಿ ಸೇವೆ ಸಲ್ಲಿಸಿದ್ದು, ಹೆಮ್ಮೆ ತಂದಿದೆ ಭಾರತಾಂಬೆಯ ರಕ್ಷಣೆಗೆ ನಮ್ಮ ಸೈನ್ಯ ಸದಾ ಸಿದ್ಧವಿರುತ್ತದೆ ಹಾಗಾಗಿ ನಾನು ಇನ್ನು ಹೆಚ್ಚಿನ ಯುವಕರಲ್ಲಿ ದೇಶಪ್ರೇಮ ಹಾಗೂ ನಮ್ಮ ದೇಶ ನಮ್ಮ ಗಡಿ ಎಂಬ ದೇಶಪ್ರೇಮದಿಂದ ಸೇನೆಗೆ ಸೇರಲು ವಿನಂತಿಸುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಕಮಿನಿಟಿ ನಿರ್ದೇಶಕರಾದ ವಿಜಯ್ ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ, ಜೆಸಿಐ ಅಧ್ಯಕ್ಷ ಸತೀಶ್ ಚಂದ್ರ, ಹಾಗೂ ಸದಸ್ಯರಾದ ಗಣೇಶ ಎಸ್, ಮಲ್ಲಿಕಾರ್ಜುನ ಕಾನೂರು, ಅನುಷ್ಕ ಗೌಡ, ಶುಭಂ ಚಂದ್ರಹಾಸ್ ಶೆಟ್ಟಿ, ಸುರೇಂದ್ರ ಕೋಟ್ಯಾನ್, ಸಂತೋಷ್ ಕುಮಾರ್ ಮತ್ತಿತರರಿದ್ದರು.