ಶಿವಮೊಗ್ಗ: ಜಿಲ್ಲೆಯಲ್ಲಿ ಒಟ್ಟಾರೆ ಅಪರಾಧ ಪ್ರಕರ ಣಗಳಲ್ಲಿ ಶೇ.10 ರಷ್ಟು ಕಡಿಮೆ ಮಾಡಲು ಮುಂದಿನ ಆರು ತಿಂಗಳಲ್ಲಿ ಕ್ರಮಕೈಗೊಳ್ಳಲಾವುದೆಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಇಂದಿಲ್ಲಿ ಹೇಳಿದರು.
ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನ ಸಂವಾದದಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಗಾಂಜಾ, ಮಟ್ಕಾ ಹಾಗೂ ಅಬಕಾರಿ ಪ್ರಕರಣಗಳನ್ನು ಕಡಿಮೆ ಮಾಡಲು ಯತ್ನಿಸಲಾಗುತ್ತಿದೆ. ಇವು ಕಡಿಮೆ ಯಾದರೆ ಪ್ರತಿಶತ ಅಪಾರಧಗಳು ಕಡಿಮೆಯಾಗಲಿವೆ ಎಂದರು.


ಐಪಿಸಿ ಅಪರಾಧ ಪ್ರಕರಣಗಳು ಶೇ.8 ರಷ್ಟು ಕಡಿಮೆಯಾದರೆ, ಸಿಆರ್‌ಪಿಸಿ ಪ್ರಕರಣ ಗಳು ಶೇ.೨೫ ರಷ್ಟು ಹೆಚ್ಚಾಗಿವೆ. ಇವು ಹೆಚ್ಚಾಗಲು ಅನಧಿಕೃತ ಮದ್ಯ ಮಾರಾಟ, ಭೂ ವಿವಾದ, ಗಾಂಜಾ ಮಾರಾಟ ಕೂಡ ಕಾರಣವಾಗಿವೆ. ಮನೆಗಳ್ಳತನ, ವಾಹನ ಕಳ್ಳತನ ಹಾಗೂ ರಾಬರಿ ಪ್ರಕರಣಗಳು ಹೆಚ್ಚಾಗಿವೆ. ಮೊಬೈಲ್ ಕಳ್ಳತನವನ್ನು ರಾಬರಿ ಪ್ರಕರಣವೆಂದು ಪರಿಗಣಿಸಲಾಗುತ್ತಿದೆ ಎಂದರು.


ಫೋಕ್ಸೋ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂದ ಅವರು, ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಒಟ್ಟಾರೆ ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ಅಪಘಾತ ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಕರಣಗಳಲ್ಲಿಯೂ ಶಿಕ್ಷೆ ಪ್ರಮಾಣದ ಹೆಚ್ಚಾಗುವಂತೆ ಕ್ರಮಕೈಗಗೊಳ್ಳಲಾಗುತ್ತದೆ ಎಂದರು.


ನಗರದಲ್ಲಿ ಸಂಚಾರ ವ್ಯವಸ್ಥೆಗೆ ಸುಧಾರಣೆಗೆ ಇಷ್ಟರಲ್ಲೇ ಸಭೆ ನಡೆಸಲಾಗುತ್ತದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಯಾದ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಫಲಕ ಅಳವಡಿಸಲಾಗುತ್ತದೆ. ಶಾಲೆ ಬಿಡುವ ಸಂದರ್ಭದಲ್ಲಿ ಹೋಂ ಗಾರ್ಡ್ ಅಥವಾ ಪೊಲೀಸರನ್ನು ನಿಯೋಜನೆ ಮಾಡಿ ಅಪಘಾತ ನಿಯಂತ್ರಿಸಲಾಗುತ್ತದೆ. ಇದಕ್ಕಾಗಿ ಸಿಆರ್‌ಪಿ, ಬಿಆರ್‌ಪಿ ಹಾಗೂ ಬಿಇಓಗಳನ್ನೊಳಗೊಂಡ ತಂಡ ರಚನೆ ಮಾಡಲಾಗುತ್ತದೆ ಎಂದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜು ನಾಥ್ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!