ಶಿವಮೊಗ್ಗ : ನಗರದ ಬೊಮ್ಮನಕಟ್ಟೆಯಲ್ಲಿ ಸಹೋದರರ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ವರದಿಯಾಗಿದೆ.
ಆಶ್ರಯ ಬಡಾವಣೆ ಬೊಮ್ಮನಕಟ್ಟೆಯ ವಾಸಿ ಗುರುಪ್ರಸಾದ್, ಟಿ 26 ವರ್ಷ ಮೃತ ಕಂಡ ದುರ್ದೈವಿ.
ಪ್ರಕರಣದ ವಿವರ:
ಗುರುಪ್ರಸಾದ್ ತನ್ನ ತಾಯಿಯ ಬಳಿ ಆಟೋ ಕೊಡಿಸಿ ಇಲ್ಲದಿದ್ದರೆ ಆಸ್ತಿಯಲ್ಲಿ ಭಾಗ ಮಾಡಿಕೊಡಿ ಎಂದು ತನ್ನ ಮಾಡುತ್ತಿದ್ದ ಈ ಸಂದರ್ಭದಲ್ಲಿ ಸಹೋದರನಾದ ವಿಶ್ವನಾಥನು ಮಧ್ಯಪ್ರವೇಶಿಸಿ ನೀನೆ ದುಡಿದು ಆಟೋ ತೆಗೆದುಕೋ ಅಮ್ಮ ಏಕೆ ಕೊಡಿಸಬೇಕು ನಿನಗೆ ಎಷ್ಟು ಹೇಳಿದರು ಅರ್ಥವಾಗುದಿಲ್ಲವೇ ಎಂದು ಜಗಳವಾಡುತ್ತಿದ್ದಾಗ ಮಾತಿಗೆ ಮಾತು ಬೆಳೆದು ವಿಶ್ವನಾಥನು ಗಾರೆ ಕೆಲಸಕ್ಕೆ ಬಳಸುವ ಮಟ್ಟಗೋಲನ್ನು ತೆಗೆದುಕೊಂಡು ಗುರುಪ್ರಸಾದ್ನ ತಲೆ ಮತ್ತು ಬಲಗಿವಿಗೆ ಹಲ್ಲೆ ನಡೆಸಿದ ಪರಿಣಾಮವಾಗಿ ಗುರುಪ್ರಸಾದ್ ನ ತಲೆ ಮತ್ತು ಕಿವಿಯಲ್ಲಿ ರಕ್ತ ಸ್ರಾವವಾಗಿ ಮೃತಪಟ್ಟಿರುತ್ತಾನೆ.
ಈ ಪ್ರಕರಣ ವಿನೋಬನಗರ ಠಾಣೆಯಲ್ಲಿ ದಾಖಲಾಗಿದೆ.
