ಪುಣ್ಯಕೋಟಿ ನೃತ್ಯ ನಾಟಕ
ಶಿವಮೊಗ್ಗ: ಹೊಂಗಿರಣ ಸಂಸ್ಥೆಯು ಜನವರಿ ೨ ರಂದು ಕುವೆಂಪು ರಂಗಮಂದಿರದಲ್ಲಿ ಗೋವಿನಹಾಡು ಕೃತಿ ಆಧಾರಿತ ಪುಣ್ಯಕೋಟಿ ನೃತ್ಯ ನಾಟಕವನ್ನು ಪ್ರದರ್ಶನ ಆಯೋಜಿಸಿದೆ.
ಶಿವಮೊಗ್ಗ ಹಾಗೂ ಹೊಳೆಹೊನ್ನೂರಿನ 40 ಮಕ್ಕಳು ಅಭಿನಯಿಸಲಿದ್ದು, ಸುಪ್ರಿಯಾ ರಾವ್ ನಿರ್ದೇಶನ, ಹಾಗೂ ಪ್ರವೀಣ್ ಡಿ.ರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮಾನಸ ಸಂತೋಷ್ ಸಹನಿರ್ದೇಶನ ಮಾಡಿದ್ದಾರೆ. ಉಚಿತ ಪ್ರವೇಶವಿದ್ದು, ನಾಟಕಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಡಾ.ಸಾಸ್ವೆಹಳ್ಳಿ ಸತೀಶ್ ಕೋರಿದ್ದಾರೆ.
ಶ್ರೀಚಂಡಿಕಾದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಂಡಿಕಾಯಾಗ
ಶಿವಮೊಗ್ಗ : ಕೋಟೆ ಶ್ರೀಚಂಡಿಕಾದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಬೆಳಗ್ಗೆ 9ರಿಂದ 1 ಗಂಟೆವರೆಗೆ ಚಂಡಿಕಾಯಾಗ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ವಿದ್ವಾನ್ ಶಂಕರಾನಂದ ಜೋಯ್ಸ್ ಕೋರಿದ್ದಾರೆ.
ನಿರ್ದೇಶಕರಾಗಿ ಮಂಜೇಗೌಡ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕರಾಗಿ
ಲಕ್ಷ್ಮೀ ಭೈರವ ಟ್ರೇಡರ್ಸ್ ಮಾಲೀಕ ಮಂಜೇಗೌಡ ಆಯ್ಕೆಯಾಗಿದ್ದಾರೆ. ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ೨೫೬ ಮತ ಪಡೆದು ಜಯಶಾಲಿಯಾಗಿದ್ದಾರೆ.
ಯುವ ಕಾಂಗ್ರೆಸ್ಗೆ ರಾಕೇಶ್ ನೇಮಕ

ಶಿವಮೊಗ್ಗ : ಜಿಲ್ಲಾ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಾಗಿ ರಾಕೇಶ್ ಎಂ. ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಮಾಡುವಂತೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಟಿ.ಎಸ್. ಕಾರ್ಯದರ್ಶಿ ಮಹಮದ್ ರಫಿ, ಜಿಲ್ಲಾದ್ಯಕ್ಷ ಎಚ್.ಪಿ.ಗಿರೀಶ್ ಸೂಚಿಸಿದ್ದಾರೆ.