ತೀರ್ಥಹಳ್ಳಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟರು.

ಕಾರ್ಮಿಕ ಬರ್ಮಪ್ಪ (45) ಮತ್ತು ಮಾಲೀಕ ದುಗ್ಗಪ್ಪ ಗೌಡ (75) ಮೃತಪಟ್ಟವರು. ನಿವೃತ್ತ ಶಿಕ್ಷಕರಾಗಿರುವ ದುಗ್ಗಪ್ಪ ಗೌಡರ ತೋಟದ ಕೆಲಸಕ್ಕೆ ಬರ್ಮಪ್ಪ ಬಂದಿದ್ದರು. ಮಧ್ಯಾಹ್ನದವರೆಗೆ ಚೆನ್ನಾಗಿಯೇ ಕೆಲಸ ಮಾಡಿದ್ದರು. ಮದ್ಯಾಹ್ನ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಕುಸಿದು ಬಿದ್ದರು. ತಕ್ಷಣ ದುಗ್ಗಪ್ಪ ಗೌಡರ ಮನೆಯ ಸದಸ್ಯರು ಸ್ಥಳಕ್ಕೆ ಬಂದರು. ಅಷ್ಟು ಹೊತ್ತಿಗೆ ಬರ್ಮಪ್ಪ ಮೃತಪಟ್ಟಿದ್ದರು. ಈ ವಿಚಾರವನ್ನು ಬರ್ಮಪ್ಪನ ಮನೆಯವರಿಗೆ ತಿಳಿಸಲು ಹೊರಟಿದ್ದ ದುಗ್ಗಪ್ಪ ಗೌಡ ಅವರೂ ದಾರಿ ಮಧ್ಯೆಯೇ ಕುಸಿದು ಮೃತಪಟ್ಟರು.
