ಶಿವಮೊಗ್ಗ: ಸೈಕಲ್ ತುಳಿಯುವುದರಿಂದ ಮನಸ್ಸು ಸದೃಢವಾಗುವುದರಜತೆಯಲ್ಲಿ ಸದಾ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ಕುಮಾರ್ ಹೇಳಿದರು.
ನಗರದ ನೆಹರುಕ್ರೀಡಾಂಗಣದಲ್ಲಿ ಶಿವಮೊಗ್ಗ ಸೈಕಲ್ಕ್ಲಬ್ ಹಾಗೂ ಡೆಕತ್ಲಾನ್ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ಸೈಕಲ್ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.

ಸಾಮಾಜಿಕ, ಆರೋಗ್ಯಜಾಗೃತಿ, ಎಚ್ಐವಿ, ಏಡ್ಸ್ಜಾಗೃತಿ, ಪರಿಸರಜಾಗೃತಿ, ಮಧುಮೇಹ ಸೇರಿದಂತೆ ಅನೇಕ ರೀತಿಜಾಗೃತಿ ಚಟುವಟಿಕೆಗಳಲ್ಲಿ ಶಿವಮೊಗ್ಗ ಸೈಕಲ್ಕ್ಲಬ್ ನಿರಂತರವಾಗಿ ತೊಡಗಿಸಿಕೊಂಡು ಬರುತ್ತಿದೆ.ರಾಜ್ಯದಲ್ಲಿಯೇ ಮಾದರಿ ಸೈಕಲ್ಕ್ಲಬ್ ಆಗಿ ಕಾರ್ಯ ನಿರ್ವಹಿಸುತ್ತಿರುವುದುಅತ್ಯಂತ ಸಂತೋಷದ ಸಂಗತಿ. ಶಿವಮೊಗ್ಗ ಸೈಕಲ್ಕ್ಲಬ್ನಲ್ಲಿ 39 ಜನರುಗಿನ್ನೆಸ್ದಾಖಲೆ ಪ್ರಶಸ್ತಿ ಪುರಸ್ಕೃತರಿದ್ದಾರೆಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸೈಕಲ್ಜಾಥಾವನ್ನು ಹಿರಿಯ ಸೈಕಲ್ಪಟು ಜಗನ್ನಾಥ ಆರಾಧ್ಯ ಚಾಲನೆ ನೀಡಿ ಮಾತನಾಡಿದರು.

ಡೆಕತ್ಲಾನ್ ಸಂಸ್ಥೆ ಮುಖ್ಯಸ್ಥ ಅರುಣ್ ಮಾತನಾಡಿ, ಮುಂದಿನ ತಿಂಗಳು ಕ್ರೀಡೆಗೆ ಸಂಬಂಧಿಸಿದ ಎಲ್ಲ ಸಾಮಾಗ್ರಿಗಳನ್ನು ಶಿವಮೊಗ್ಗದಲ್ಲಿ ದೊರೆಯುವಂತೆ ಹಾಗೂ ಪ್ರತಿ ತಿಂಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸೈಕಲ್ ಜಾಥಾವು ಶಿವಮೊಗ್ಗ ನಗರದ ನೆಹರು ಸ್ಟೇಡಿಯಂನಿಂದ ಗೋಪಿ ವೃತ್ತ, ಎಎ ವೃತ್ತ, ಬಸ್ನಿಲ್ದಾಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.
ಶಿವಮೊಗ್ಗ ಸೈಕಲ್ಕ್ಲಬ್ಅಧ್ಯಕ್ಷ ಶ್ರೀಕಾಂತ್ ಸೈಕಲ್ಕ್ಲಬ್ ನಡೆದುಬಂದ ಹಾದಿಯನ್ನು ವಿವರಿಸಿದರು.ಸೈಕಲ್ ಸವಾರರಿಗೆಡೆಕತ್ಲಾನ್ ಕಂಪನಿ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು.ಜಾಥಾದಲ್ಲಿ ಶಿವಮೊಗ್ಗ ಸೈಕಲ್ಕ್ಲಬ್ ಕಾರ್ಯದರ್ಶಿ ಗಿರೀಶ್ಕಾಮತ್, ಸಂಜಯ್, ವಿಜಯ್ಕುಮಾರ್, ಪ್ರೀತಮ್, ಅರುಣ್, ಸೌಮ್ಯ, ಅಮೃತ್, ಸಚಿನ್, ಎಂ.ಪಿ.ನಾಗರಾಜ್, ಹರ್ಷ, ಮನೋಜ್, ಶ್ರೀನಿವಾಸ್, ಶ್ರೀಧರ್, ಶಶಿಕಾಂತ್ ಮತ್ತಿತರರು ಉಪಸ್ಥಿತರಿದ್ದರು.