ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಿಗೆ ಸನ್ಮಾನ

ಶಿವಮೊಗ್ಗ, ಡಿ.22:
9 ವರ್ಷಗಳ ನಂತರ ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎನ್. ಗೋಪಿನಾಥ್ (೪೨೮), ಉದಯಕುಮಾರ್ (೪೦೫), ಬಿ. ಗೋಪಿನಾಥ್ (೩೮೨), ಪ್ರದೀಪ್ ವಿ,ಯಲಿ (೩೫೬), ಪರಮೇಶ್ವರ ಇ (೩೫೩), ರಾಜು ಎಂ (೩೪೯), ವಿಜಯಕುಮಾರ್ ಜಿ (೩೪೦), ಜಗದೀಶ್ ಮಾತನವರ್ (೩೨೨), ವಸಂತ್ ಹೋಬಳಿದಾರ್ (೩೦೮), ಸಂತೋಷ್ ಬಿ. ಆರ್ (೩೦೭), ಮದುಸೂದನ ಐತಾಳ (೩೦೬), ಗಣೇಶ್ ಎಂ. ಅಂಗಡಿ (೨೬೩), ಸುಕುಮಾರ್ ಕೆ.ಎಸ್.(೨೬೪), ಮಂಜೇಗೌಡ (೨೫೬), ಮರಿಸ್ವಾಮಿ (೨೫೧) ಅವರುಗಳು ಆಯ್ಕೆಯಾಗಿದ್ದಾರೆ.


ಆಯ್ಕೆ ಯಾಗಬೇಕಿರುವ ೧೫ ಸ್ಥಾನಗಳಿಗೆ ೨೮ ಜನರ ತಂಡಗಳು ಸ್ಪರ್ಧಿಸಿದ್ದವು. ಇಬ್ಬರು ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ೭೫೦ ಮತದಾರರು ಎರಡೂ ಕಡೆಯ ೧೩ ಜನರ ಜೊತೆಗೆ ಸ್ವತಂತ್ರವಾಗಿ ನೀಮತಿದ್ದ ಇಬ್ಬರನ್ನೂ ಗೆಲ್ಲಿಸಿದ್ದಾರೆ. ವಿಶೇಷವೆಂದರೆ ಗಣೇಶ್ ಸ್ಟೀಲ್ಸ್‌ನ ಪ್ರಧೀಪ್ ಅವರು ಅತಿ ಹೆಚ್ಚು ಮತ ಪಡೆಯುವ ಮೂಲಕ ಸ್ಪರ್ಧಾಳುಗಳಲ್ಲೇ ಅಚ್ಚರಿ ಮೂಡಿಸಿದ್ದಾರೆ.
ಮಥುರಾ ಪ್ಯಾರಡೈಸ್‌ನ ಎನ್. ಗೋಪಿನಾಥ್ ಪ್ರಥಮ ಸ್ಥಾನದಲ್ಲಿ ಗೆದ್ದಿದ್ದರೆ ಜನತಾ ಸ್ಟೀಲ್ಸ್‌ನ ಉದಯಕುಮಾರ್ ಎರಡನೇ ಸ್ಥಾನದಲ್ಲಿ ಗೆದ್ದು ಸಂಘದ ಸಕ್ರಿಯತೆಗಳ ಉದಾಹರಣೆ ಬಿಂಬಿಸಿದ್ದಾರೆ. ಉಳಿದಂತೆ ಮೂರನೇ ಸ್ಥಾನದಲ್ಲಿರುವ ಶಕ್ತಿ ಇನ್ನೋವೇಷನ್ಸ್‌ನ ಗೋಪಿನಾಥ್ ಹಾಗೂ ನಾಲ್ಕನೇ ಸ್ಥಾನದಷ್ಟು ಮತ ಪಡೆದಿರುವ ಗಣೇಶ್ ಸ್ಟೀಲ್ಸ್‌ನ ಪ್ರದೀಪ್ ಯೆಲಿ ಅವರ ಜನಾನುರಾಗಿ ಭಾವನೆ ಮತವಾಗಿ ಪರಿವರ್ತನೆಯಾಗಿದೆ

.
ಇಲ್ಲಿಯವರೆಗೆ ಅತ್ಯಂತ ವ್ಯವಸ್ಥಿತವಾಗಿ ವರ್ತಕರ, ಕೈಗಾರಿಕಾ, ಸೇವಾ ವಿಭಾಗದ ಮೂರು ಕಡೆಗಳಿಂದ ಸಮರ್ಪಕ ಅಭ್ಯರ್ಥಿಗಳ ಆಯ್ಕೆ ಅವಿರೋಧವಾಗಿಯೇ ನಡೆಯುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ 2 ವರ್ಷ ಚುನಾವಣೆ ಮುಂದೂಡಿತ್ತು. ಇಲ್ಲಿ ಹಾಲಿ ಉಪಾಧ್ಯಕ್ಷ ಉದಯ್‌ಕುಮಾರ್, ಮಾಜಿ ಅಧ್ಯಕ್ಷ ಬಿ.ಎನ್.ಪ್ರಕಾಶ್ ಅವರ 11 ಜನರ ತಂಡ ಒಂದು ಕಡೆ ಪ್ರಬಲವಾಗಿ ಪೈಪೋಟಿ ನಡೆಸುತ್ತಿದ್ದರೆ ಮತ್ತೊಂದು ಕಡೆ ಹಿಂದಿನ ಕಮಿಟಿಯ 7 ಜನ ಹಾಗೂ ನೂತನವಾಗಿ 8 ಜನರ ತಂಡವೊಂದು 15 ಸ್ಥಾನಗಳಿಗೆ ಸ್ಪರ್ಧಿಸಿದೆ. ಇದರಲ್ಲಿ ಮಥುರಾ ಪ್ಯಾರೆಡೈಸ್‌ನ ಎನ್.ಗೋಪಿನಾಥ್, ಕಿಶನ್‌ಹ್ಯಾಂಡಿಕ್ರಾಫ್ಟ್‌ನ ಸಂತೋಷ್, ಜಿ.ವಿಜಯ್‌ಕುಮಾರ್ ಸೇರಿದಂತೆ 15 ಜನರ ತಂಡವು ಸಹ ಬಿಗಿ ಹೋರಾಟ ನಡೆಸಿತ್ತು ಇದರ ನಡುವೆ ಶಿವಮೊಗ್ಗ ಗಣೇಶ್ ಸ್ಟೀಲ್ಸ್‌ನ ಪ್ರದೀಪ್ ವಿ. ಎಲಿ ಹಾಗೂ ಮಧುಸೂದನ್ ಐತಾಳ್ ಏಕಾಂಗಿಯಾಗಿ ಸ್ಪರ್ಧಿಸಿ ಹೋರಾಟ ನಡೆಸಿದ್ದರು.


ನಿನ್ನೆ ರಾತ್ರಿ ಹನ್ನೊಂದರ ಹೊತ್ತಿಗೆ ನಿಚ್ಚಳ ಬಹುಮತದ ಅಭ್ಯರ್ಥಿಗಳ ಹೆಸರನ್ನು ಚುನಾವಣಾಧಿಕಾರಿ ವೈ ಗೋಪಾಲಕೃಷ್ಣ ಗುಪ್ತ ಘೋಷಿಸಿದರು. ಪ್ರಸ್ತು ಚುನಾವಣೆ ಮೂಲಕ ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘಕ್ಕೆ ಹೊಸತನ ಬಂದಿದೆ.

By admin

ನಿಮ್ಮದೊಂದು ಉತ್ತರ

error: Content is protected !!