ಶಿವಮೊಗ್ಗ, ಡಿ.೨೫:
ಪ್ರಪಂಚದ ಅದ್ಭುತ ಕಟ್ಟಡಗಳ ಪ್ರದರ್ಶನ ಹಾಗೂ ರೋಬೋಟಿಕ್ ಪಕ್ಷಿಗಳ ಲೋಕ ಎಂಬ ಹೆಸರಿನ ‘ಮಲೆನಾಡು ಉತ್ಸವ ಕಳೆದ ಹಲವು ದಿನಗಳಿಂದ ನಗರದ ಮಿಳಘಟ್ಟ ಬಡಾವಣೆಯಲ್ಲಿರುವ ಕೆಎಸ್‌ಆರ್‌ಟಿಸಿ ಡಿಪೋ ಪಕ್ಕದ ನಗರಪಾಲಿಕೆಯ ಜಾಗದಲ್ಲಿ ನಡೆಯುತ್ತಿದ್ದು, ಇಲ್ಲಿ ಮಕ್ಕಳನ್ನು ಹಾಗೂ ಮಹಿಳೆಯರನ್ನು ಕೆಲಸಕ್ಕಾಗಿ ದಿನಗೂಲಿ ಲೆಕ್ಕದಲ್ಲಿ ನೇಮಿಸಿಕೊಂಡು ಶೋಷಿಸಲಾಗುತ್ತಿದೆ.

ಶೋಷಣೆಗೆ ಒಳಗಾಗಿರುವ ಮಕ್ಕಳನ್ನು ಹಾಗೂ ಮಹಿಳೆಯರನ್ನು ಕೂಡಲೇ ಸಂಬಂಧಪಟ್ಟ ಇಲಾಖೆಯವರು ಅಲ್ಲಿಂದ ಬಿಡಿಸಿ ಮಲೆನಾಡು ಉತ್ಸವದ ಮಾಲೀಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟ ಸಮಿತಿಯ ಸಂಚಾಲಕ ಹಾಗೂ ಪತ್ರಕರ್ತ ಶಿ.ಜು.ಪಾಶ ಕೋರಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆಯ ಅನುಮತಿಯ ಮೇರೆಗೆ ಇಲ್ಲಿ ‘ಮಲೆನಾಡು ಉತ್ಸವ ನಡೆಯುತ್ತಿದ್ದು, ಇದ್ದ ಬಹಳಷ್ಟು ಕಾನೂನುಗಳನ್ನು ಉಲ್ಲಂಘಿಸುವ ಮೂಲಕ ಇಲ್ಲಿ ರಂಜನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಮಕ್ಕಳನ್ನು ಬಳಸಿಕೊಂಡು ರಾತ್ರಿ ೧೨ರವರೆಗೂ ದುಡಿಸಿಕೊಳ್ಳಲಾಗುತ್ತಿದೆ. ಮಹಿಳೆಯರು ಕೂಡ ರಾತ್ರಿ ೧೨ರವರೆಗೆ ಇಲ್ಲಿ ಕೆಲಸ ಮಾಡಬೇಕಾದ ದುಸ್ಥಿತಿ ಇದೆ. ಉತ್ಸವ ಸಂಜೆ ಆರಂಭವಾಗಿ ರಾತ್ರಿ ೯ಕ್ಕೆ ನಿಯಮದಂತೆ ಮುಗಿಯಬೇಕು. ಆದರೆ, ನಿಯಮ ಮೀರಿ ಇಲ್ಲಿ ಮನೋರಂಜನೆಯನ್ನು ಮಕ್ಕಳು ಮತ್ತು ಮಹಿಳೆಯರನ್ನು ಶೋಷಿಸುವ ಮೂಲಕ ನೀಡುತ್ತಿರುವುದು ಖಂಡನಾರ್ಹ ಎಂದಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು, ಕಾರ್ಮಿಕ ಇಲಾಖೆ, ಮಕ್ಕಳ ರಕ್ಷಣಾ ಸಮಿತಿ, ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೂ ಆನ್‌ಲೈನ್ ಮೂಲಕ ಲಿಖಿತ ದೂರು ಸಲ್ಲಿಸಿದ್ದು, ಕೂಡಲೇ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಬೇಕು ಎಂದು ಶಿ.ಜು.ಪಾಶ ಒತ್ತಾಯಿಸಿದ್ದಾರೆ.

ಅಲ್ಲದೇ, ಇಂತಹ ಸ್ಥಳಗಳಲ್ಲಿ ನೂರಾರು ಜನ ಪ್ರೇಕ್ಷಕರು ಓಡಾಡುತ್ತಿದ್ದರೂ ಯಾವುದೇ ಕೋವಿಡ್ ನಿಯಮಾವಳಿಗಳನ್ನು ‘ಮಲೆನಾಡು ಉತ್ಸವದ ಮಾಲೀಕರು ನಿಭಾಯಿಸುತ್ತಿಲ್ಲ. ಈ ಬಗ್ಗೆ ಕೂಡಲೇ ಕೋವಿಡ್ ಕಾಯ್ದೆಯ ಪ್ರಕಾರವೂ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಶಿ.ಜು.ಪಾಶ ಒತ್ತಾಯಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!