ಶಿವಮೊಗ್ಗ : ನವುಲೆ ಮಾರುತಿ ಬಡಾವಣೆ, ಹೊಸಮನೆ ೪ನೇ ತಿರುವಿನ ಸುಬ್ರಮಣ್ಯ ನಿಲಯದ ವಾಸಿ ಸಚ್ಚಿನ್ ಎಸ್. ಸ್ಯಾಡೋ ಬಿನ್ ಶ್ರೀನಿವಾಸ ಹಾಗೂ ಅಣ್ಣಾನಗರ ೫ನೇ ತಿರುವು ವಾಸಿ ಹರೀಶ್ ಆರ್. ಅಲಿಯಾಸ್ ತೇಗು ಬಿನ್ ರುದ್ರಪ್ಪ ಎಂಬ ಇಬ್ಬರು ಅಪರಾಧಿಗಳನ್ನು ಕರ್ನಾಟಕ ಪೊಲೀಸ್ ಕಾಯ್ದೆ ಅಧಿನಿಯಮ ೧೯೬೩ ಕಲಂ ೫೫ ರನ್ವಯ ಉಪವಿಭಾಗ ಸರಹದ್ದಿನಿಂದ ಹಾಗೂ ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರು ಮಾಡಿ ಶಿವಮೊಗ್ಗ ಉಪವಿಭಾಗದ ಉಪವಿಭಾಗಾಧಿಕಾರಿಗಳು ಆದೇಶಿಸಿರುತ್ತಾರೆ.
ಬ್ಬರು ಆರೋಪಿಗಳು ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು, ಪೊಲೀಸ್ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿರುತ್ತವೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ, ಪ್ರಕಾಶ್ ಟಿ.ವಿ., ಉಪವಿಭಾಗೀಯ ದಂಡಾಧಿಕಾರಿ, ಶಿವಮೊಗ್ಗ ವಿಭಾಗ, ಪೊಲೀಸ್ ಕಾಯ್ದೆ ಅಧಿನಿಯಮ 1963 ರ ಕಲಂ 55 ರಡಿ ಆರೋಪಿ ಸಚ್ಚಿನ್ ಎಸ್. ಸ್ಯಾಡೋ ಬಿನ್ ಶ್ರೀನಿವಾಸ ಇವನಿಗೆ 6 ತಿಂಗಳ ಅವಧಿಗೆ ಮತ್ತು ಆರೋಪಿ ಹರೀಶ್ ಆರ್ ಅಲಿಯಾಸ್ ತೇಗು ಬಿನ್ ರುದ್ರಪ್ಪ ಇವನಿಗೆ ಮೂರು ತಿಂಗಳು ಅವಧಿಗೆ ಈ ಉಪವಿಭಾಗದ ಸರಹದ್ದಿನಿಂದ ಹಾಗೂ ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರು ಮಾಡಿ ತೀರ್ಪು ನೀಡಿ ಆದೇಶಿಸಿದ್ದಾರೆ. ಈ ಆದೇಶ ದಿ:೦೬/೧೨/೨೦೨೧ ರಿಂದಲೇ ಜಾರಿಗೊಳ್ಳುತಿದ್ದು, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಇವರಿಗೆ ಸೂಕ್ತ ಕೈಗೊಳ್ಳುವಂತೆ ಸೂಚಿಸಿ ಆದೇಶಿಸಿದ್ದಾರೆ.