ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ದೀಪಾವಳಿ ಬೋನಸ್ ಎಂದು ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಂಕವನ್ನು ಕಡಿಮೆ ಮಾಡುವುದಾಗಿ ಭಯಂಕರ ಆಸೆ ಹುಟ್ಟಿಸಿದ್ದರು. ಆದರೆ ಪೆಟ್ರೋಲ್ ದರ ಶಿವಮೊಗ್ಗದಲ್ಲಿ ಕಡಿಮೆಯಾಗಿರುವುದು ಕೇವಲ 6.28 ರೂ. ಅಂದರೆ ಇಂದಿನ ಪೆಟ್ರೋಲ್ ದರ 109.24ರೂ. ವಿಶೇಷವೆಂದರೆ ಡಿಸೇಲ್ ದರ 12.45ರೂ ಕಡಿತವಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಲೀಟರ್‌ಗೆ 93.41 ರೂ ತಲುಪಿದೆ.
ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತ ಮಾಡಿದ ಬೆನ್ನೆಲ್ಲೆ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ದರದ ಸುಂಕವನ್ನು ಕಡಿತ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ನಿನ್ನೆ ಸಂಜೆಯೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಸುಳಿವು ನೀಡಿದ್ದರು. ಆದರೆ ಕಡಿಮೆಯಾಗಿಲ್ಲ. ಕಡಿಮೆಯಾಗಲು ವಾಹನ ಓಡಿಸುವುದನ್ನು ಕೈ ಬಿಡಬೇಕಷ್ಟೆ.

By admin

ನಿಮ್ಮದೊಂದು ಉತ್ತರ

error: Content is protected !!