ಸಾಗರ: (ಸಿಗಂದೂರು)
ತಾಲ್ಲೂಕಿನ ಶ್ರೀ ಕ್ಷೇತ್ರ ಸಿಗಂದೂರು ದೇವಸ್ಥಾನದಲ್ಲಿ ಅಕ್ಟೋಬರ್ 07 ರಿಂದ 15ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಸ್. ರಾಮಪ್ಪನವರು ತಿಳಿಸಿದರು.
ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರಕ್ಕೆ ಅಕ್ಟೋಬರ್ 07ರಂದು ಗೌರಿಗದ್ದೆಯ ಅರಿವಿನ ಗುರು ಅವದೂತ ಶ್ರೀ ವಿನಯ್ ಗುರೂಜಿ ಆಗಮಿಸಲಿದ್ದು ಅಂಧಕಾರದಿಂದ ಬೆಳಕಿನೆಡೆಗೆ ಎಂಬ ವಿಶೇಷ ಆಶೀರ್ವಚನ ನೀಡಲಿದ್ದಾರೆ.
ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವಿಗೆ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನವರಾತ್ರಿ ಹಿನ್ನೆಲೆಯಲ್ಲಿ ಪ್ರತಿ ದಿನ ಶ್ರೀ ದೇವಿಗೆ ಪಂಚಾಮೃತ ಅಭಿಷೇಕ. ಅಲಂಕಾರ ಪೂಜೆ. ಮಹಾಭೀಷೇಕ. ಚಂಡಿಕಾ ಹೋಮ. ಸಪ್ತಶತೀ ಪಾರಾಯಣ. ವಿವಿಧ ಹವನಗಳು ನೆಡೆಯಲಿದೆ. ಚೌಡಮ್ಮ ದೇವಿ ಯಕ್ಷಗಾನ ಮೇಳದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಬೆಂಗಳೂರಿಗೆ ನೂತನ ಬಸ್ ಸಂಚಾರ.
ಸಿಗಂದೂರಿನಿಂದ ಬೆಂಗಳೂರಿಗೆ ಖಾಸಗಿ ಬಸ್ ಸಂಚಾರ ಅಕ್ಟೋಬರ್ 07ರಿಂದ ಪ್ರಾರಂಭ ವಾಗಲಿದ್ದು ಇದಕ್ಕೂ ಸಹ ಧರ್ಮಾಧಿಕಾರಿಗಳು ಅದೇ ದಿನ ಉದ್ಘಾಟಿಸಲಿದ್ದಾರೆ ಹಾಗೂ ಶ್ರೀ ಕ್ಷೇತ್ರದ ವತಿಯಿಂದ ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಮಾಡಲಾಗಿದ್ದು ಆದರ ಸಾಂಕೇತಿಕ ಉದ್ಘಾಟಿನೆಯು ಸಹ ಇದೇ ವೇದಿಕೆಯಲ್ಲಿ ಧರ್ಮಾಧಿಕಾರಿಗಳಿಂದ ನೆಡೆಯಲಿದೆ.
ಶ್ರೀ ಕ್ಷೇತ್ರದಿಂದ ಸರ್ಕಾರಿ ಶಾಲೆಗಳಿಗೆ ಹೊಸ ರೂಪ
ಶರಾವತಿ ಹಿನ್ನೀರಿನ ಸುಮಾರು 10 ಸರ್ಕಾರಿ ಶಾಲೆಗಳಿಗೆ ನಮ್ಮೂರ ಶಾಲಾ ಅಂದ ಚೆಂದದ ಅಂಗವಾಗಿ ಶ್ರೀ ಸಿಗಂದೂರು ಚೌಡಮ್ಮ ದೇವಿ ಎಜುಕೇಷನ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲೆಗಳಿಗೆ ಸುಣ್ಣ ಬಣ್ಣ ಮಾಡಲಾಗಿದ್ದು
ಸಿಗಂದೂರು ದೇವಸ್ಥಾನದ ವತಿಯಿಂದ ಶರಾವತಿ ಹಿನ್ನೀರಿನ ಸರ್ಕಾರಿ ಶಾಲೆಗಳ ಉಳಿವಿಗೆ ಹೆಚ್ಚಿನ ಒತ್ತು ನೀಡಿರುವುದು ಉತ್ತಮ ಬೆಳವಣಿಗೆಯಾಗಿದ್ದು.print
ಶ್ರೀ ಸಿಗಂದೂರು ಚೌಡಮ್ಮ ದೇವಿ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ಸಿಗಂದೂರು ಕಳೆದ ಹಲವು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿದೆ.ಅದರಂತೆ ಈ 2021-22ನೇ ವರ್ಷದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಶೈಕ್ಷಣಿಕ ದೇಗುಲವಾದ ಸರ್ಕಾರಿ ಶಾಲೆಗಳ ಉಳಿಸುವಿಕೆ ಮತ್ತು ಅಂದ ಚಂದದ ಸುಂದರವಾದ ಶಾಲೆಯಾಗಿಸಲು ಸರ್ಕಾರಿ ಶಾಲೆಗಳ ಉಳಿವಿಗೆ ಶ್ರೀ ಕ್ಷೇತ್ರ ಸಿಗಂದೂರು ಎಜುಕೇಷನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಒಂದು ಹೆಜ್ಜೆ ಮುಂದಿಟ್ಟಿದೆ. ಶ್ರೀ ಕ್ಷೇತ್ರ ಸಿಗಂದೂರಿನ ಪ್ರಧಾನ ಕಾರ್ಯದರ್ಶಿಗಳಾದ ಹೆಚ್ ಆರ್ ರವಿಕುಮಾರ್ ಅವರ ವಿಶೇಷ ಕಾಳಜಿಯಿಂದ ಶರಾವತಿ ಹಿನ್ನೀರಿನ ಹಿಂದುಳಿದ ಆಯ್ದ ಸುಮಾರು 10 ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಮಾಡುವ ವಿಶೇಷ ಕಾಯಕಲ್ಪಕ್ಕೆ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸಿರುವುದು ಈ ಭಾಗದ ಜನರಿಗೆ ಹಾಗೂ ಶಿಕ್ಷಕರಿಗೆ ಸಂತಸ ತಂದಿದೆ. “ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ” ಎಂಬ ವಿಶೇಷ ಮುನ್ನುಡಿಯೊಂದಿಗೆ ಅಕ್ಟೋಬರ್ 02ರ ಮಹಾತ್ಮ ಗಾಂಧಿ ಜಯಂತಿಯಂದು ತಾಲ್ಲೂಕಿನ ತೀರಾ ಹಿಂದುಳಿದ ಪ್ರದೇಶವಾದ ಚನ್ನಗೊಂಡ ಗ್ರಾಮದ ಕಟ್ಟಿನಕಾರು ಕ್ಲಸ್ಟರ್ ನಲ್ಯಾರ ಸರ್ಕಾರಿ ಶಾಲೆಗೆ ಹೊಸ ರೂಪ ನೀಡುವ ಮೂಲಕ ಧರ್ಮಾಧಿಕಾರಿಗಳಾದ ಡಾ ಎಸ್ ರಾಮಪ್ಪನವರ ದಿವ್ಯಾಶೀರ್ವಾದದೊಂದಿಗೆ ನಡೆಯಿತು.
ಸರ್ಕಾರಿ ಶಾಲೆಗಳ ಉಳಿವಿಗೆ ಶ್ರೀ ಕ್ಷೇತ್ರದ ಜೊತೆಗೆ ಹಿನ್ನೀರಿನ ಸುಮಾರು 11ಜನರ ಸಮಾನ ಮನಸ್ಕರ ಶಿಕ್ಷಕರ ತಂಡದ ಪಾತ್ರವು ಸಹ ಮೆಚ್ಚುಗೆಗೆ ಪಾತ್ರವಾಗಿದೆ. ಈ ತಂಡದಲ್ಲಿ 3ಜನ ಸಿ.ಆರ್.ಪಿ ಶಿಕ್ಷಕರು ಅನುಭವಿ ಪೈಂಟರ್. ಇಬ್ಬರು ನುರಿತ ಚಿತ್ರಕಲೆಗಾರರಿದ್ದು ಕರೂರು ಹೋಬಳಿಯ ಸಾಕಷ್ಟು ಶಿಕ್ಷಕರಿದ್ದು. ಕಳೆದ ಒಂದು ತಿಂಗಳಿನಿಂದ ಶ್ರೀ ಕ್ಷೇತ್ರದ ಜೊತೆಗೆ ಸರ್ಕಾರಿ ಶಾಲೆಗಳ ಉಳಿವಿಗೆ ಪ್ರತಿದಿನ ಬಿಡುವು ಮಾಡಿಕೊಂಡು ಹಾಗೂ ವಾರಾಂತ್ಯದಲ್ಲಿ ರಾತ್ರಿಯಿಡಿ ಸ್ವತಃ ಶಿಕ್ಷಕರೇ ಮುಂದೆ ನಿಂತು ಬಣ್ಣ ಬಳಿಯುವುದರ ಮೂಲಕ ಮಾದರಿಯಾದರು. ಈಗಾಗಲೇ ಈ ಭಾಗದ ಹಲವು ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸಿರುವ ತಂಡವು ನಲ್ಯಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗಾಗಲೇ ಸಂಪೂರ್ಣ ಸುಣ್ಣ ಬಣ್ಣ ಮಾಡುವ ಮೂಲಕ ಹೊಸ ರೂಪ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ರಾತ್ರಿಯಿಡಿ ಬಣ್ಣ ಬಳಿಯುದರ ಮೂಲಕ ತಾಲ್ಲೂಕಿನ ತೀರಾ ಹಿಂದುಳಿದ ಶಾಲೆಗಳ ಉಳಿವಿಗೆ ಶ್ರಮಿಸಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ತಂಡವು ಹಲವು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಯುವುದು ಈ ಭಾಗದ ಸರ್ಕಾರಿ ಶಾಲೆಗಳ ಉಳಿವಿಗೆ ಉನ್ನಷ್ಟು ಬಲ ತುಂಬಿದಂತಾಗಿದೆ. ಇವರ ಜೊತೆ ಜೊತೆಗೆ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಸಹ ಸಾಕಷ್ಟು ಸಹಕಾರ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಇನ್ನಷ್ಟು ಹೊಸ ಹೊಸ ಬಂದಿದೆ. ಕೋರೋನಾ ಕಷ್ಟಕಾಲದಲ್ಲಿಯೂ ಸಹ ಶ್ರೀ ಕ್ಷೇತ್ರದ ವತಿಯಿಂದ ಸಾಕಷ್ಟು ಸಹಕಾರ ನೀಡಲಾಗಿತ್ತು.
” ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ “ಎಂಬ ಒಂದು ಶೈಕ್ಷಣಿಕ ಕಾಳಜಿಯ ಕಾರ್ಯವನ್ನು ನಾಡಿನ ಕನ್ನಡ ಸರ್ಕಾರಿ ಶಾಲೆಗಳಿಗೆ ಅರ್ಪಿಸುತ್ತಿದೆ.ಮೊದಲನೇ ಹಂತವಾಗಿ ಶರಾವತಿ ಹಿನ್ನೀರಿನ ಕರೂರು – ಭಾರಂಗಿ ಹೋಬಳಿಯ ಆಯ್ದ ಶಾಲೆಗಳನ್ನು ಮಾಡುತ್ತಾ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ವಿಸ್ತರಿಸುವ ಅಭಿಲಾಷೆಯನ್ನು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೆಚ್ ಆರ್ ಕಂಡಿದ್ದಾರೆ.
ಈ ಭಾಗದಲ್ಲಿನ ತೀರಾ ಹಿಂದುಳಿದ ಶಾಲೆಗಳಿಗೆ ಮೊದಲ ಹಂತದಲ್ಲಿ 10 ಶಾಲೆಗಳಿಗೆ ಸುಣ್ಣ ಬಣ್ಣ ಮಾಡಲು ನಿರ್ಧರಿಸಿದ್ದೆವೆ. ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದಿಂದ ಸಾಧ್ಯವಾದಷ್ಟುಸಹಕಾರ ನೀಡಲಾಗುವುದು.
ನಿಯಮ ಪಾಲಿಸಲು ಸೂಚನೆ
ನವರಾತ್ರಿಯ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾದಿಗಳು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್ ಹೆಚ್ ಆರ್ ಮನವಿ ಮಾಡಿದ್ದಾರೆ.
ವರದಿ- ಚಿತ್ರ: ಸುಕುಮಾರ್ ಎಂ.