ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪೊಲೀಸ್ ಘಟಕದ ಪೂರ್ವ ಸಂಚಾರಿ ಪೊಲೀಸ್ ಠಾಣೆಯು ಈ ವರೆಗೆ ವಿದ್ಯಾನಗರ ಬಿ.ಹೆಚ್ ರಸ್ತೆ ಶಿವಮೊಗ್ಗ ಟೌನ್ ನಲ್ಲಿನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಕೋಟೆ ರಸ್ತೆಯ ಕೋಟೆ ಪೊಲೀಸ್ ಠಾಣೆಯ ಆವರಣದ ಶಿವಮೊಗ್ಗ ಸಂಚಾರ ವೃತ್ತ ನಿರೀಕ್ಷಕರ ಕಛೇರಿಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿರುತ್ತದೆ. ಹಾಗೂ ಶಿವಮೊಗ್ಗ ಸಂಚಾರ ವೃತ್ತ ನಿರೀಕ್ಷಕರ ಕಛೇರಿಯನ್ನು ಲಕ್ಷ್ಮಿ ಟಾಕೀಸ್ ಹತ್ತಿರ ಹಳೆ ಜೈಲ್ ಆವರಣದಲ್ಲಿನ ವಿನೋಬನಗರ ವೃತ್ತ ನಿರೀಕ್ಷಕರ ಕಛೇರಿಯ ಕಟ್ಟಡಕ್ಕೆ

ಸ್ಥಳಾಂತರಿಸಲಾಗಿರುತ್ತದೆ. ಆದ್ದರಿಂದ, ಸಾರ್ವಜನಿಕರು ತಮ್ಮ ಕುಂದುಕೊರತೆಗಳಿಗೆ ಮತ್ತು ಪ್ರಕರಣಗಳನ್ನು ದಾಖಲಿಸಲು ಬದಲಾದ ವಿಳಾಸಕ್ಕೆ ಭೇಟಿ ನೀಡುವ ಮೂಲಕ ಸಹಕರಿಸಲು ರಕ್ಷಣಾ ಇಲಾಖೆ ಕೋರಿದೆ.