ಶಿವಮೊಗ್ಗ, ಸೆ.29:
ಶಿವಮೊeಗ್ಗ ಆಶ್ರಯ ಕಮಿಟಿ ಅಧ್ಯಕ್ಷ ಹೆಚ್. ಶಶಿಧರ್ ನೇತೃತ್ವದ ತಂಡ ಆಶ್ರಯ ನಿವೇಶನಕ್ಕಾಗಿ ಹಿಂದೆ ಜಿಲ್ಲಾಡಳಿತದಿಂದ ಮಂಜೂರಾಗಿದ್ದ ಸೂಳೆಬೈಲಿನ ಸರ್ವೆ ನಂ. 102ರಲ್ಲಿದ್ದ 2.07 ಎಕರೆ ಭೂಮಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಯಿತು.
2001ರಲ್ಲಿ ಶಿವಮೊಗ್ಗ ಆಶ್ರಯ ಕಮಿಟಿಗೆ ಅಂದಿನ ಡಿಸಿ ಹಾಗೂ ತಹಶಿಲ್ದಾರರಿಂದ ಈ ಭೂಮಿ ಮಂಜೂರಾಗಿತ್ತು. ಆಗ ಅಲ್ಲಿನ ನಿವಾಸಿ ಸೈಯದ್ ನೂರ್ ಅವರು ತಕರಾರು ಅರ್ಜಿ ಹಾಕಿ ನ್ಯಾಯಾಲಯದಲ್ಲಿ ಅಂದಿನ ನಗರಸಭೆ ವಿರುದ್ದ ದಾವೆ ಹೂಡಿದ್ದರು.
ನ್ಯಾಯಾಲಯದಲ್ಲಿ ಪಾಲಿಕೆಯ ಆಶ್ರಯ ಕಮಿಟಿ ಜಾಗ ಇದೆಂದು ಆದೇಶ ಹೊರಬಂದಿತ್ತು. ಈ ಜಾಗವನ್ನು ಮತ್ತೆ ಸುರ್ಪದಿಗೆ ಪಡೆಯಲು ಆಶ್ರಯ ಕಮಿಟಿಯ ಶಶಿಧರ್ ನೇತೃತ್ವದಲ್ಲಿ ಪಾಲಿಕೆಯ ಕಂದಾಯ, ಸರ್ವೆ ಹಾಗೂ ಇಂಜಿನಿಯರಿಂಗ್ ವಿಭಾಗದ ಪ್ರಮುಖರು ಪೊಲೀಸರ ಹದ್ದು ಬಸ್ತಿನಲ್ಲಿಂದು ಸ್ಥಳಕ್ಲೆ ಬೇಟಿ ನೀಡಿ, ಅಳತೆ ಮಾಡಿ ಜಾಗಕ್ಲೆ ಪೆನ್ಸಿಲಿಂಗ್ ಮಾಡುವ ಕಾರ್ಯಕ್ಕೆ ಮುಂದಾಯಿತು.
ಈ ನಗರದೊಳಗಿನ ಭೂಮಿ ಈಗಾಗಲೇ ಅಲಿನೇಷನ್ ಆಗಿದ್ದು, ಸೂಡಾ ಅನುಮತಿ ಮೇರೆಗೆ ಕಮಿಟಿ ಬಡವರಿಗೆ ನಿವೇಶನ ನೀಡಲು ಪೂರಕ ವ್ಯವಸ್ಥೆಗೆ ದಾರಿಯಾಯಿತು.
ಆಶ್ರಯ ಕಮಿಟಿಗೆ ಇಂತಹ ಹತ್ತಾರು ಸ್ಥಳಗಳನ್ನು ಗುರುತಿಸಿದ್ದು ಅವುಗಳನ್ಮು ವಶಕ್ಕೆ ಪಡೆಯಲು ಕಾರ್ಯ ರೂಪಿಸಿದೆ. ಅಧ್ಯಕ್ಷ ಶಶಿಧರ್ ನೇತೃತ್ವದ ಕಮಿಟಿ ಕಾರ್ಯಕ್ಲೆ ಶಿವಮೊಗ್ಗ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಕಮಿಟಿ ಸದಸ್ಯೆ ಯಶೋದಾ ಹೆಗಡೆ, ಸೆಕ್ಷನ್ ಆಫೀಸರ್ ಶಶಿಧರ್ ಹಾಗೂ ಕಛೇರಿಯ fdc ವೆಂಕಟೇಶ್ ಹಾಗೂ ಇತರರಿದ್ದರು.